ಕೊವಿಡ್ ವಿಚಾರದಲ್ಲಿ ಯಾರೂ ಗಾಬರಿಯಾಗುವುದು ಬೇಡ: ಡಿಸಿಎಂ ಡಿಕೆ ಶಿವಕುಮಾರ್
ರಾಜ್ಯದಲ್ಲಿ ಕೊರೊನಾ ವಿಚಾರವಾಗಿ ನವದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೊವಿಡ್ ವಿಚಾರದಲ್ಲಿ ಯಾರೂ ಗಾಬರಿಯಾಗುವುದು ಬೇಡ. ಕೊವಿಡ್ ಸೋಂಕು ಹೆಚ್ಚಾಗಿದೆ ಅಂತಾ ಅಂದುಕೊಳ್ಳಬೇಡಿ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ದೆಹಲಿ, ಡಿಸೆಂಬರ್ 18: ಕೋವಿಡ್ ಬಗ್ಗೆ ದಯವಿಟ್ಟು ಯಾರು ಗಾಬರಿ ಆಗುವುದು ಬೇಡ. ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಜಾಸ್ತಿ ಆಗುತ್ತಿದೆ ಅಂತ ಅನ್ಕೋಬೇಡಿ. ನಾವು ಎಲ್ಲಾ ಮಾಹಿತಿಯನ್ನು ಮಾಧ್ಯಮಕ್ಕೂ ಸಹ ನೀಡುತ್ತೇವೆ. ಈಗಾಗಲೇ ಜನರು ಮಾಸ್ಕ್ ಹಾಕಿಕೊಳ್ಳುತ್ತೊದ್ದಾರೆ. ಆದರೆ ಯಾರು ಸದ್ಯಕ್ಕೆ ಗಾಬರಿ ಪಡುವುದು ಬೇಡ ಎಂದು ಹೇಳಿದ್ದಾರೆ.
ಅನಾವಶ್ಯಕವಾಗಿ ಆತಂಕ ಸೃಷ್ಟಿಸುವುದು ಬೇಡ: ಸಚಿವ ದಿನೇಶ್ ಗುಂಡೂರಾವ್
ಜನರಲ್ಲಿ ಅನಾವಶ್ಯಕವಾಗಿ ಆತಂಕ ಸೃಷ್ಟಿಸುವುದು ಬೇಡ. ಕೇರಳಗಡಿಯಲ್ಲಿ ಎಲ್ಲರನ್ನೂ ತಪಾಸಣೆ ಮಾಡುವ ಅಗತ್ಯ ವಿಲ್ಲ. ಕೊರೊನಾ ಲಕ್ಷಣ ಇದ್ದವರಿಗೆ ಮಾತ್ರ ತಪಾಸಣೆ ಮಾಡಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೆಕ್ಪೋಸ್ಟ್, ಏರ್ಪೋರ್ಟ್, ರೈಲ್ವೆ ನಿಲ್ದಾಣದಲ್ಲಿ ಜನರ ನಿಯಂತ್ರಣ ಅಸಾಧ್ಯ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಕೂಡಾ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಹೇಳಿದ್ದೇವೆ. ಆಸ್ಪತ್ರೆಗಳಲ್ಲಿ ಐಸಿಯು ಬೆಡ್ಸ್, ಆಕ್ಸಿಜನ್, ಪಿಪಿಇ ಕಿಟ್, ಔಷಧಿಗಳು, ಮಾಸ್ಕ್ ಎಲ್ಲವನ್ನೂ ಸಜ್ಜುಗೊಳಿಸಲಾಗುತ್ತಿದೆ. ಅಗತ್ಯ ಬಿದ್ದರೆ ಎಲ್ಲದ್ದಕ್ಕೂ ನಾವು ತಯಾರಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಕೊವಿಡ್ ರೂಪಾಂತರಿ ಜೆಎನ್.1 ಪತ್ತೆ; ಏನಿದರ ಲಕ್ಷಣ? ತಡೆಗಟ್ಟುವುದು ಹೇಗೆ?
ರಾಜಧಾನಿಗೆ ಕೋವಿಡ್ ಆತಂಕ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸಿದ್ಧತೆ ಮಾಡಲಾಗುತ್ತಿದೆ. ಇಂದು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಮಾಕ್ ಡ್ರಿಲ್, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿರ್ದೇಶಕ ಡಾ.ನಾಗರಾಜ್ ಅವರಿಂದ ಮಾಕ್ ಡ್ರಿಲ್ ಸಿದ್ಧತೆ ಪರಿಶೀಲನೆ ಮಾಡಲಾಗಿದೆ. ಐಸಿಯು ಬೆಡ್, ಆಕ್ಸಿಜನ್ ಬೆಡ್ಗಳ ಸಿದ್ಥತೆ ಮಾಡಿಕೊಳ್ಳಲಾಗಿದೆ.
ಕೋವಿಡ್ ಚಿಕಿತ್ಸೆಗಾಗಿ ಒಟ್ಟು 170 ಬೆಡ್ ಮೀಸಲು
- 170 ಬೆಡ್ಗಳ ಪೈಕಿ
- 20 ಐಸಿಯು ಬೆಡ್
- 10 SARI ಬೆಡ್
- 10 COVID ಬೆಡ್
- 26 HDU ಬೆಡ್
- ಪ್ರತ್ಯೇಕ ಟ್ರಯಾಜ್ ಏರಿಯಾ ನಿರ್ಮಾಣ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.