ಬೆಂಗಳೂರು: ಹೊಸವರ್ಷದ ಸಂಭ್ರಮಕ್ಕೆ (New Year 2023) ಕೌಂಟ್‌ಡೌನ್ ಶುರುವಾಗಿದೆ. 2023ರನ್ನು ಬರ ಮಾಡಿಕೊಳ್ಳುವುದಕ್ಕೆ ಬೆಂಗಳೂರು ಸಜ್ಜಾಗಿದೆ. ಇಂದು(ಡಿ. 31) ಸಂಜೆಯಾಗುತ್ತಿದ್ದಂತೆ ಇಡೀ ಸಿಲಿಕಾನ್ ಸಿಟಿ ಝಗಮಗಿಸಲಿದ್ದು, ಪಾರ್ಟಿಗಮ್ಮತ್ತು ರಂಗೇರಲಿದೆ. ಹೀಗಾಗಿ ಪೊಲೀಸರು (Bengaluru Police) ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಹದ್ದಿನ ಕಣ್ಣಿಟ್ಟಿದ್ದಾರೆ. ಹೊಸವರ್ಷ ಆಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚವಹಿಸಿದ್ದು, ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನು ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ನಿಂದ ನಗರದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಯಾವುದೇ ಸಾವು-ನೋವುಗಳು ಅಥವಾ ಅವಘಡಗಳ ಮುಂಜಾಗ್ರತವಾಗಿ ವಿಶೇಷ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. 24/7 ಹೆಚ್ಚುವರಿ ವೈದ್ಯರೊಂದಿಗೆ ಎಲ್ಲಾ ಸೌಲಭ್ಯಗಳೊಂದಿಗೆ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ 20 ಹಾಸಿಗೆಗಳನ್ನು ಹೊಂದಿರುವ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ ವಿಕ್ಟೋರಿಯಾ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ. ದೀಪಕ್ ಮಾಹಿತಿ ನೀಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರು ಮಹಾನಗರ ಸಿದ್ಧವಾಗುತ್ತಿದ್ದು ಬೆಂಗಳೂರು ನಗರದಾದ್ಯಂತ ಪೊಲೀಸರ ಹದ್ದಿನ ಕಣ್ಣೀಡಲಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರದಲ್ಲಿ 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ ಮಾಡಲಾಗುತ್ತಿದೆ. ಚರ್ಚ್ಸ್ಟ್ರೀಟ್, ಬ್ರಿಗೇಡ್ ರಸ್ತೆಯೊಂದರಲ್ಲೇ ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಸಿಸಿಟಿವಿ ಮಾನಿಟರಿಂಗ್ ರೂಮ್ನಲ್ಲಿ ಕುಳಿತು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಅಹಿತಕರ ಘಟನೆಯಾದರೆ ಕೂಡಲೇ ಸ್ಥಳದಲ್ಲಿರುವ ಸಿಬ್ಬಂದಿಗೆ ಮಾಹಿತಿ ನೀಡುವಂತೆ ತಯಾರಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: New Year 2023: ಡಿ.31ರ ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್, 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ
ನ್ಯೂ ಇಯರ್ ಹಾಟ್ ಸ್ಪಾಟ್ನಲ್ಲಿ ವುಮೆನ್ ಸೇಫ್ ಹೌಸ್ ರೆಡಿ ಮಾಡಲಾಗುತ್ತಿದೆ. ಮಹಿಳೆಯರು ಹಾಗೂ ತುರ್ತು ಆರೋಗ್ಯ ಸಮಸ್ಯೆಯಾದವರಿಗಾಗಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳ ಸುತ್ತಮುತ್ತ 37 ಸೇಫ್ ಹೌಸ್ ನಿರ್ಮಾಣಗೊಳ್ಳುತ್ತಿದೆ. ಪಾರ್ಟಿ ವೇಳೆ ಹೆಚ್ಚು ಪಾನಮತ್ತರಾಗಿ ನಿಯಂತ್ರಣ ಕಳೆದು ಕೊಂಡ ಮಹಿಳೆಯರಿಗಾಗಿ ಪ್ರತಿ ರಸ್ತೆಗೆ ಮೂರ್ನಾಲಕ್ಕರಂತೆ ಸೇಫ್ ಹೌಸ್ ನಿರ್ಮಿಸಲಾಗುತ್ತಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರು ಮಹಾನಗರ ಸಿದ್ಧವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬ್ರಿಗೇಡ್ ರಸ್ತೆಯಲ್ಲಿ ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಬ್ರಿಗೇಡ್ ರಸ್ತೆಯ ಪಬ್, ಬಾರ್, ಸ್ಟೋರ್ಗಳ ಬಳಿ ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Bengaluru New Year: ಪಾರ್ಟಿ ಮೂಡ್ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ, ಪೊಲೀಸರ ಮತ್ತೊಂದು ಸೂಚನೆ
ಹೊಸ ವರ್ಷಕ್ಕೆ ರಂಗೇರುವ ಪಾರ್ಟಿಗೆ ಪಬ್ ಬಾಲೀಕರು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಚರ್ಚ್ ಸ್ಟ್ರೀಟ್ನ ಪಬ್ಗಳಲ್ಲಿ ಬಾರೀ ಸಿದ್ಧತೆ ನಡೆಯುತ್ತಿದೆ. ಸಂಭ್ರಮಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನಲೆ ಗ್ರಾಮಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ಬೇಕಾದ ತಾಯಾರಿ ನಡೆಸುತ್ತಿದ್ದಾರೆ. ಲೈಟಿಂಗ್ಸ್, ಡೆಕೊರೆಷನ್ ಮುಂತಾದವುಗಳನ್ನು ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.