ಝಿಯೂ ಹೋಮ್ಸ್ ಹೆಸರಲ್ಲಿ ನೂರಾರು ಮನೆ ಮಾಲೀಕರು, ಬಾಡಿಗೆದಾರರಿಗೆ ವಂಚನೆ; ದಂಪತಿ ಅರೆಸ್ಟ್

| Updated By: ಆಯೇಷಾ ಬಾನು

Updated on: Aug 25, 2024 | 12:09 PM

ಝಿಯೂ ಹೋಮ್ಸ್ ಎಂಬ ಸಂಸ್ಥೆಯ ಹೆಸರಲ್ಲಿ ಮನೆ ಮಾಲೀಕರಿಂದ ಬಾಡಿಗೆಗೆ ಮನೆ ಪಡೆದು ಬಳಿಕ ಅದನ್ನು ಬೇರೆಯವರಿಗೆ 15-20ಲಕ್ಷಕ್ಕೆ ಭೋಗ್ಯಕ್ಕೆ ನೀಡಿ ಮನೆ ಮಾಲೀಕ ಹಾಘೂ ಬಾಡಿಗೆದಾರರಿಗೆ ವಂಚಿಸುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ಝಿಯೂ ಹೋಮ್ಸ್ ಹೆಸರಲ್ಲಿ ನೂರಾರು ಮನೆ ಮಾಲೀಕರು, ಬಾಡಿಗೆದಾರರಿಗೆ ವಂಚನೆ; ದಂಪತಿ ಅರೆಸ್ಟ್
ಝಿಯೂ ಹೋಮ್ಸ್ ಹೆಸರಲ್ಲಿ ನೂರಾರು ಮನೆ ಮಾಲೀಕರು, ಬಾಡಿಗೆದಾರರಿಗೆ ವಂಚನೆ
Follow us on

ಬೆಂಗಳೂರು, ಆಗಸ್ಟ್.25: ಝಿಯೂ ಹೋಮ್ಸ್ (Ziyu Homes) ಹೆಸರಲ್ಲಿ ನೂರಾರು ಮನೆ ಮಾಲೀಕರು ಹಾಗೂ ಬಾಡಿಗೆ ದಾರಿಗೆ ವಂಚನೆ (Cheat) ಮಾಡಲಾಗಿರುವ ಪ್ರಕರಣವೊಂದು ಬಯಲಾಗಿದೆ. ವಂಚನೆ ಮಾಡ್ತಿದ್ದ ಗಂಡ ಮತ್ತು ಹೆಂಡತಿಯನ್ನು ಸಿಸಿಬಿ ಪೊಲೀಸರು (SSB Police) ಬಂಧಿಸಿದ್ದಾರೆ. ಆರೋಪಿಗಳು ಬಾಡಿಗೆಗೆ ಎಂದು ಮನೆ ಪಡೆದು ಬೇರೆಯವರಿಗೆ ಲೀಸ್​ಗೆ ಮನೆ ಕೊಟ್ಟು ವಂಚನೆ ಮಾಡುತ್ತಿದ್ದರು.

ಝಿಯೂ ಹೋಮ್ಸ್ ಸಂಸ್ಥೆಯು ಪೂರ್ವ ವಿಭಾಗದಲ್ಲಿ ಬರುವ ನೂರಾರು ಮನೆ ಮಾಲೀಕರ ಬಳಿ ಮನೆ ಮತ್ತು ಪ್ಲಾಟ್ ಗಳನ್ನ ಬಾಡಿಗೆಗೆ ಪಡೆಯುತ್ತಿತ್ತು. ಬಾಡಿಗೆಗೆ ಅಂತ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ರು. ಮನೆ ಮಾಲೀಕರು ಕೂಡ ಮನೆ ಬಾಡಿಗೆ ಕೊಟ್ಟಿದ್ದೇವೆ ಅಂತ ಇರ್ತಿದ್ರು. ಆದ್ರೆ ಒಂದೆರಡು ತಿಂಗಳು ಬಾಡಿಗೆ ಕೊಟ್ಟು ನಂತರ ಬಾಡಿಗೆ ಕೊಡ್ತಿರ್ಲಿಲ್ಲ. ಮಾಲೀಕರು ಮನೆ ಬಳಿ ಹೋಗಿ ನೋಡಿದಾಗ ಮನೆಯಲ್ಲಿ ಬೇರೆಯಾರೋ ವ್ಯಕ್ತಿಗಳು ವಾಸವಾಗಿರುತ್ತಿದ್ದರು. ನಾವು ಈ ಮನೆಯಲ್ಲಿ ಭೋಗ್ಯಕ್ಕೆ ಇರೋದಾಗಿ ಹೇಳ್ತಿದ್ರು. ಸ್ವಂತ ಮನೆ ಮಾಲೀಕರು & ಭೋಗ್ಯಕ್ಕೆ ಇರುವವರನ್ನ ಏಕಕಾಲಕ್ಕೆ ವಂಚನೆ ಮಾಡುತ್ತಿದ್ದ ಕಿಲಾಡಿ ದಂಪತಿಯನ್ನು ಸದ್ಯ ಬಂಧಿಸಲಾಗಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದ ಆಸಾಮಿ, ಕನ್ನಡ ಹಾಡುಗಾಗಿ ಪಬ್​ನಲ್ಲಿ ಫೈಟ್​

ಬಂಧಿತ ಆರೋಪಿಗಳು 15-20ಸಾವಿರಕ್ಕೆ ಮನೆಯನ್ನು ಬಾಡಿಗೆಗೆ ಅಂತ ಪಡೆದು ಬಳಿಕ ಬೇರೆಯವರಿಗೆ 15-20ಲಕ್ಷಕ್ಕೆ ಮನೆಯನ್ನ ಭೋಗ್ಯಕ್ಕೆ ಹಾಕಿ ವಂಚನೆ ಮಾಡುತ್ತಿದ್ದರು. ಸದ್ಯ ಝಿಯೂ ಕಂಪನಿ ಮಾಲೀಕ ಮಹಮ್ಮದ್ ಅಲಿ ಬೇಗ್, ಆತನ ಪತ್ನಿ ಮುಯೀನಾ ಬೇಗ್ ನೂರ್ ಅಹಮ್ಮದ್ ಅವರನ್ನು ಬಂಧಿಸಲಾಗಿದೆ. ಹೆಣ್ಣೂರು, ಬಾಣಸವಾಡಿ ಸೇರಿ ಹಲವು ಠಾಣೆಗಳಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಮನೆ ಮಾಲೀಕರಿಂದ ಇವರ ವಿರುದ್ಧ ದೂರು‌‌ ದಾಖಲಾಗಿದೆ. ಎಲ್ಲಾ ದೂರುಗಳನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದ್ದು ಸದ್ಯ ಸಿಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಹೈದರಾಬಾದ್ ನಲ್ಲಿ ಅಹಮ್ಮಲ್‌ ಅಲಿ ಬೇಗ್ ಮತ್ತು ಮುಯಿನಾ ಬಂಧಿಸಿದ್ದಾರೆ. ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಈ ಮೊದಲು ಬಂಧನವಾಗಿ ಬೇಲ್ ಮೇಲಿದ್ದರು ಎಂದು ತಿಳಿದು ಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ