AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಮಾಧ್ಯಮದಲ್ಲಿ ಜಾತಿಯತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದ “ಬ್ರಹ್ಮಿನ್​ ಜೀನ್ಸ್”​ ಪೋಸ್ಟ್

ಬೆಂಗಳೂರು ಮೂಲದ ಮಹಿಳಾ ಉದ್ಯಮಿಯೊಬ್ಬರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಹಾಕಿದ ಒಂದು ಪೋಸ್ಟ್​​ ಜಾತಿಯತೆಯ ಬಗ್ಗೆ ಪರ-ವಿರೋಧದ ಬಗ್ಗೆ ಚರ್ಚೆ, ಟೀಕೆಯನ್ನು ಹುಟ್ಟು ಹಾಕಿದೆ. ಯಾವುದು ಆ ಪೋಸ್ಟ್​ ಇಷ್ಟೊಂದು ವಿವಾದವಾಗಲು ಕಾರಣವೇನು? ಇಲ್ಲಿದೆ ಓದಿ.

ಸಾಮಾಜಿಕ ಮಾಧ್ಯಮದಲ್ಲಿ ಜಾತಿಯತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದ ಬ್ರಹ್ಮಿನ್​ ಜೀನ್ಸ್​ ಪೋಸ್ಟ್
ಅನುರಾಧಾ ತಿವಾರಿ
ವಿವೇಕ ಬಿರಾದಾರ
|

Updated on: Aug 25, 2024 | 2:57 PM

Share

ಬೆಂಗಳೂರು, ಆಗಸ್ಟ್​ 25: ಸಾಮಾಜಿಕ ಜಾಲತಾಣದಲ್ಲಿ (Social Media) ಒಂದಲ್ಲ ಒಂದು ವಿಚಾರಕ್ಕೆ ಚರ್ಚೆಗಳು ನಡೆಯುತ್ತವೆ. ಇದೀಗ ಬೆಂಗಳೂರು (Bengaluru) ಮೂಲದ ಮಹಿಳಾ ಉದ್ಯಮಿಯೊಬ್ಬರು ಹಾಕಿದ ಪೋಸ್ಟ್​​ದಿಂದ ಪರ-ವಿರೋಧದ ಚರ್ಚೆ, ಟೀಕೆ, ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳಾ ಉದ್ಯಮಿ ಎಕ್ಸ್​ (X) ಹಾಕಿದ ಪೋಸ್ಟ್​ ಜಾತೀಯತೆ ಕುರಿತು ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ಬೆಂಗಳೂರು ಮೂಲದ ಜಸ್ಟ್​​ಬರ್ಸ್ಟ್​​ಔಟ್​ ಹೆಸರಿನ ಕಂಟೆಂಟ್​ ರೈಟಿಂಗ್​ ಏಜೆನ್ಸಿಯ ಸಿಇಒ ಅನುರಾಧಾ ತಿವಾರಿ ಅವರು ಆಗಸ್ಟ್​ 22ರಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಬೈಸಪ್ಸ್​ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದರೊಂದಿಗೆ “ಬ್ರಾಹ್ಮಿನ್​ ಜೀನ್ಸ್​​” ಎಂಬ ಶಿರ್ಷಿಕೆ ಬರೆದುಕೊಂಡಿದ್ದರು.

ಬ್ರಾಹ್ಮಿನ್​ ಜೀನ್ಸ್​ ಎಂಬ ಶಿರ್ಷಿಕೆ ಬರೆದುಕೊಂಡು ಪೋಸ್ಟ್​ ಮಾಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ. ಕೆಲ ನೆಟ್ಟಿಗರು ಇವರ ಶಿರ್ಷಿಕೆಗೆ ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅನುರಾಧಾ ತಿವಾರಿ ಅವರ ಪರವಾಗಿ ನಿಂತಿದ್ದಾರೆ.

ಇದನ್ನೂ ಓದಿ: ಜಾತಿ ವಿವಾದ ಹೊಂದಿರುವ ‘ವೇದಾ’ ಸಿನಿಮಾದ 9 ನಿಮಿಷ ಅವಧಿಯ ದೃಶ್ಯಗಳು ಡಿಲೀಟ್​

ನೆಟ್ಟಿಗರೊಬ್ಬರು, ಮನುಸ್ಮೃತಿಯ ಪ್ರಕಾರ ಹೆಣ್ಣು ಮಕ್ಕಳು ಎಲ್ಲ ಸಮಯದಲ್ಲಿ ಮನೆಯಲ್ಲೇ ಇರಬೇಕು ಎಂಬುದಿದೆ. ಆದರೆ ಸಂವಿಧಾನ ನೀಡಿರುವ ಹಕ್ಕು ಸ್ವಾತಂತ್ರದಿಂದಲೇ ನೀವು ಬೈಸೆಪ್​ ಪ್ರದರ್ಶಿಸಿದ್ದರಿ. ಅದಕ್ಕಾಗಿ ಬಿ.ಆರ್ ಅಂಬೇಡ್ಕರ್​ ಅವರಿಗೆ ಧನ್ಯವಾದ ತಿಳಿಸಬೇಕು ಎಂದಿದ್ದಾರೆ.

ಅನುರಾಧಾ ತಿವಾರಿ ಅವರು ಜಾತಿ ಆಧಾರಿತ ಮೀಸಲಾತಿಯನ್ನು ತೊಡೆದುಹಾಕಲು ಬಹಿರಂಗವಾಗಿ ಪ್ರತಿಪಾದಿಸುವವರು. “ಒಂದು ಕುಟುಂಬ, ಒಂದು ಮೀಸಲಾತಿ” ಎಂಬ ಧ್ಯೇಯವಾಕ್ಯದಲ್ಲಿ ಅವರು ನಂಬುತ್ತಾರೆ ಎಂದು ಅವರ ಎಕ್ಸ್​​ ಬಯೋ ಹೇಳುತ್ತದೆ.

ಪೋಸ್ಟ್​ನಲ್ಲಿ ಏನಿದೆ?

ಅನುರಾಧ ತಿವಾರಿಯವರು ಸ್ಕೂಟರ್​ ಪಕ್ಕ​​ದಲ್ಲಿ ನಿಂತು ಎಡಗೈನಲ್ಲಿ ಎಳನೀರು ಹಿಡಿದುಕೊಂಡಿದ್ದಾರೆ. ಬಲಗೈನಲ್ಲಿ ಬೈಸೆಪ್ಸ್​​ ಪ್ರದರ್ಶಿಸಿರುವ ಫೋಟೋವನ್ನು ಅವರು ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಬ್ರಾಹ್ಮಿಣ ಜೀನ್ಸ್​​ ಎಂದು ಶಿರ್ಶಿಕೆ ನೀಡಿದ್ದಾರೆ.

ತಿರುಗೇಟು ನೀಡಿದ ಅನುರಾಧಾ ತಿವಾರಿ

ಇನ್ನು, ತಮ್ಮ ಪೋಸ್ಟ್​ಗೆ ವಿರೋಧ ವ್ಯಕ್ತಪಡಿಸುತ್ತಿರುವವರೆಗೆ ಉದ್ಯಮಿ ಅನುರಾಧಾ ತಿವಾರಿ ಅವರುತಿರುಗೇಟು ನೀಡಿದ್ದಾರೆ. “ಬ್ರಾಹ್ಮಣರು ಇಂದು ತಮ್ಮ ಪೂರ್ಣ ಹೆಸರನ್ನು ಬಹಿರಂಗಪಡಿಸಲು ಭಯಪಡುತ್ತಾರೆ. ನಮ್ಮ ವಿರುದ್ಧ ತುಂಬಾ ದ್ವೇಷವನ್ನು ಹರಡಲಾಗಿದೆ. ಸಾಮಾಜಿಕ ನ್ಯಾಯ ಹೋರಾಟಗಾರರು ಮತ್ತು ರಾಜಕಾರಣಿಗಳು ನಮ್ಮನ್ನು ಖಳನಾಯಕರನ್ನಾಗಿ ಮಾಡಿದ್ದಾರೆ. ನಾವು ಯಾರಿಗೂ ಹಾನಿ ಮಾಡುವುದಿಲ್ಲ. ನಮಗೆ ಸರ್ಕಾರದಿಂದ ಯಾವುದೇ ಸಹಾಯವಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ನಮ್ಮ ಜಾತಿಯ ಬಗ್ಗೆ ನಾವು ಏಕೆ ನಾಚಿಕೆ ಪಡಬೇಕು ಎಂದು ಪ್ರಶ್ನಿಸಿದ್ದಾರೆ.

ಅನುರಾಧಾ ತಿವಾರಿ ಅವರು ಈ ಹಿಂದೆಯೂ ಇಂತಹ ಹಲವು ವಿಚಾರವಾಗಿ ಹಲವು ಪೋಸ್ಟ್​ಗಳನ್ನು ಹಾಕಿದ್ದರು. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ನನ್ನ ಬಳಿ ಜಮೀನು ಇಲ್ಲ. ಶೇ 95ರಷ್ಟು ಅಂಕ ಗಳಸಿದರೂ ನನಗೆ ಪ್ರವೇಶ ಸಿಗಲಿಲ್ಲ. ಆದರೆ ನನ್ನ ಸಹಪಾಟಿ ಶೇ60 ರಷ್ಟು ಅಂಕ ಗಳಸಿದ್ದರೂ ಅವರಿಗೆ ಪ್ರವೇಶ ಸಿಗುತ್ತದೆ. ಹೀಗಿದ್ದರೂ ನನಗೆ ಮೀಸಲಾತಿ ಕುರಿತು ಮಾತನಾಡಿದಾಗ ನನ್ನನ್ನು ಪ್ರಶ್ನೆ ಮಾಡುತ್ತಾರೆ ಎಂದು ಬರೆದುಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ