ಕ್ಯಾಬ್ ಚಾಲಕ ಆತ್ಮಹತ್ಯೆ: ಮಗನ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದ ತಾಯಿ
ಬೆಂಗಳೂರಿನ ಕಾವೇರಿಪುರದ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಕ್ಯಾಬ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮಗನ ಶವದ ಮುಂದೆ ಕಣ್ಣೀರಿಡುತ್ತಾ ತಾಯಿ ಕೂಡ ಕೊನೆಯುಸಿರೆಳೆದಿರುವಂತಹ ದಾರುಣ ಘಟನೆ ನಡೆದಿದೆ. ಕ್ಯಾಬ್ ಚಾಲಕನ ಆತ್ಮಹತ್ಯೆ ನಿಖರ ಮಾಹಿತಿ ತಿಳಿದುಬಂದಿಲ್ಲ.
ಬೆಂಗಳೂರು, ಆಗಸ್ಟ್ 25: ಇಂತಹ ಒಂದು ಸ್ಥಿತಿ ಬರುತ್ತೆ ಅಂತಾ ಯಾರು ಅಂದುಕೊಂಡಿರಲಿಲ್ಲ. ಕನಸು ಮನಸ್ಸಲ್ಲಿಯೂ ಯೋಚಿಸಿರಲಿಲ್ಲ. ಆದರೆ ವಿಧಿಯ ಆಟಕ್ಕೆ ಮಗ (son) ನೇಣಿಗೆ ಕೊರಳೊಡಿದ್ದ. ಆತನ ಮೃತದೇಹ ಮನೆಯಿಂದ ಹೋಗ್ತಿದ್ದಂತೆ ಜೀವ ಕೊಟ್ಟ ತಾಯಿಯ ಉಸಿರೇ ನಿಂತು ಹೋಗಿದೆ. ಮೃತರು ಮಗ ಅರುಣ್ ಕುಮಾರ್ (37) ವರ್ಷ ವಯಸ್ಸು ಇನ್ನೂ ಈ ವೃದ್ಧೆ ಹೆಸರು ಸರಸ್ವತಿ ಬಾಯಿ (71) ಮಗ ಮತ್ತು ಇಬ್ಬರು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕಾವೇರಿಪುರದ ಮನೆಯಲ್ಲಿ ವಾಸವಾಗಿದ್ದರು.
ಕ್ಯಾಬ್ ಚಾಲಕನಾಗಿದ್ದ ಅರುಣ್ಗೆ ಇನ್ನೂ ವಿವಾಹವಾಗಿರಲಿಲ್ಲ. ಇಂದು ಬೆಳಗ್ಗೆ ತಮ್ಮ ಮನೆಯ ಕೋಣೆಯಲ್ಲಿಯೇ ನೇಣುಬಿಗಿದುಕೊಂಡು ಅರುಣ್ ಸಾವನ್ನಪ್ಪಿದ್ದರೆ, ಆತನ ಮೃತದೇಹವನ್ನು ಪೊಲೀಸರು ಮನೆಯಿಂದ ತೆಗೆದುಕೊಂಡು ಹೋಗ್ತಿದ್ದಂತೆ ಅತ್ತು ಅತ್ತು ಸುಸ್ತಾಗಿದ್ದ ತಾಯಿ ಆತನ ಸಾವಿನ ಮರುಕ್ಷಣವೇ ಉಸಿರು ಚೆಲ್ಲಿದ್ದಾರೆ. ಆಕೆಯ ಈ ಸಾವಿನ ಹಿಂದೆ ಒಂದು ಕಣ್ಣೀರ ಕಥೆಯೇ ಇದೇ.
ಸಾವಿನಲ್ಲಿ ಒಂದಾದ ತಾಯಿ ಹಾಗೂ ಪುತ್ರ
ಹೌದು. ಅರುಣ್ ತಾಯಿ ಸರಸ್ವತಿ ಒಂದು ವರ್ಷದ ಹಿಂದೆ ಬಿದ್ದು ಬೆನ್ನಿನ ಮೂಳೆ ಮುರಿದುಕೊಂಡಿದ್ದರು. ಹಾಗಾಗಿ ಬೆಡ್ ರೆಸ್ಟ್ ನಲ್ಲಿದ್ದರು. ಕುಮಾರ್ಗೆ ಸಹೋದರರು ಕೂಡ ಇದ್ದಾರೆ ಆದ್ರೆ ತಾಯಿಯ ಕಷ್ಟದ ದಿನದಲ್ಲಿ ನೆರಳಾಗೊ ಬದಲು ಮನೆಯಿಂದಲೇ ದೂರ ಹೋಗಿದ್ದರು. ತಾಯಿಯ ಸಂಪೂರ್ಣ ಜವಾಬ್ದಾರಿ ಅರುಣ್ ಮೇಲೆಯೇ ಇತ್ತು. ಹಾಗಾಗಿ ಒಂದು ವರ್ಷದಿಂದ ತಾನೇ ತಾಯಿಯ ಆರೈಕೆ ಮಾಡುತ್ತಿದ್ದ. ಜೊತೆಗೆ ಕ್ಯಾಬ್ ಕೂಡ ಓಡಿಸುತ್ತಿದ್ದ. ಆದರೆ ಅದೇನಾಯ್ತೋ ಏನೋ, ಸ್ವಲ್ಪ ಸಾಲ ಕೂಡ ಮಾಡಿಕೊಂಡಿದ್ನಂತೆ. ಅದೇ ವಿಚಾರವಾಗಿ ಖಿನ್ನತೆಗೆ ಒಳಗಾಗಿ ಇವತ್ತು ಬೆಳಗ್ಗೆ ಮನೆಯಲ್ಲಿಯೇ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ರಾಯಚೂರಿನಲ್ಲಿ ಪತ್ನಿ, ಅಜ್ಜಿ ಜೋಡಿ ಕೊಲೆ ಪ್ರಕರಣಕ್ಕೆ ಟ್ವೀಸ್ಟ್! ಪೊಲೀಸ್ ತನಿಖೆ ವೇಳೆ ಬಯಲಾಯ್ತು ಹತ್ಯೆಯ ಸತ್ಯಾಂಶ
ವಿಚಾರ ತಿಳಿದು ತಾಯಿ ಸರಸ್ವತಿ ಶಾಕ್ ಗೆ ಒಳಗಾಗಿದ್ದರು. ಕಣ್ಣೀರು ಹಾಕಿದ್ದರು. ಪೊಲೀಸರು ಬಂದು ಮೃತದೇಹ ಮನೆಯಿಂದ ತೆಗೆದುಕೊಂಡು ಹೋಗ್ತಿದ್ದಂತೆ ಆಕೆ ಕೂಡ ಮಗನ ಜೊತೆಯಾಗಿದ್ದಾರೆ. ಅದೇ ಮನೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಇಡೀ ಏರಿಯಾ ಜನರೇ ಮರಗುವಂತೆ ಮಾಡಿದೆ.
ತಾಯಿ ಪ್ರೀತಿಗೆ ಕೊನೆ ಇಲ್ಲ ಅನ್ನೋ ಮಾತಿದೆ. ಆದೇ ಈ ಪ್ರಕರಣ ತಾಯಿಯ ಪ್ರೀತಿ ಎಷ್ಟು ಅನ್ನೋದಕ್ಕೆ ನಿಜಕ್ಕೂ ನಿದರ್ಶನವಾಗಿದ್ದು ತಾಯಿ ಮಗ ಸಾವಿನಲ್ಲಿಯೂ ಜೊತೆಯಾಗಿದ್ದು ನಿಜಕ್ಕೂ ವಿಪರ್ಯಾಸ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Sun, 25 August 24