ಸರ್ಕಾರಿ ನೌಕರಿ ಕೊಡಿಸೋದಾಗಿ ಹೇಳಿ ಯುವಕರಿಂದ ಹಣ ಪಡೆದು ವಂಚನೆ, ದಂಪತಿ ಅರೆಸ್ಟ್
ಕೆಲಸಕ್ಕಾಗಿ ಅಲೆಯುವ ಯುವಕರನ್ನು ಟಾರ್ಗೆಟ್ ಮಾಡಿ ಹಣ ಪಡೆದು ವಂಚನೆ ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ನನಗೆ ರಾಜಕಾರಣಿಗಳು ಗೊತ್ತು. ವಿವಿಧ ಇಲಾಖೆಯ ಗಣ್ಯರು ಗೊತ್ತು, ಖಾಲಿ ಇರುವ ಸರ್ಕಾರಿ ನೌಕರಿ ಕೊಡಿಸುವೆ ಎಂದು ನಂಬಿಸಿ ಯುವಕರಿಂದ 6 ಲಕ್ಷ ಹಣ ಪಡೆದು ಬಳಿಕ ವಂಚನೆ ಮಾಡುತ್ತಿದ್ದರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು ದಂಪತಿ ವಿರುದ್ಧ ಮತ್ತಷ್ಟು ಪ್ರಕರಣಗಳಿರುವುದು ಪತ್ತೆಯಾಗಿದೆ.
ಬೆಂಗಳೂರು, ಫೆ.21: ಎಷ್ಟೇ ಓದಿ, ಕೆಲಸದಲ್ಲಿ ಎಷ್ಟೇ ಎಕ್ಸಪಿರಿಯನ್ಸ್ ಇದ್ದರೂ ಕೆಲವೊಮ್ಮೆ ಕೆಲಸ ಸಿಗೋದೆ ಕಷ್ಟವಾಗಿದೆ. ಅಂತಹದರಲ್ಲಿ ನಿರುದ್ಯೋಗಿ (Job Fraud) ಯುವಕರನ್ನೇ ಟಾರ್ಗೆಟ್ ಮಾಡಿ ಉದ್ಯೋಗ ಕೊಡಿಸೋದಾಗಿ ಹೇಳಿ ವಂಚನೆ (Cheating) ಮಾಡುತ್ತಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ (Vidyaranyapura Police Station). ಸರ್ಕಾರಿ ಕೆಲಸ ಕೊಡಿಸುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದ ಕಿಲಾಡಿ ಜೋಡಿ ಸದ್ಯ ಕಂಬಿ ಹಿಂದಿದೆ. ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ಆರೋಪಿಗಳು.
ಪ್ರಕಾಶ್ ಹಾಗೂ ಮಧು ಜೋಡಿ, ಕೆಲಸಕ್ಕಾಗಿ ಅಲೆಯುವ ಯುವಕರನ್ನು ಹುಡುಕಿ ಸರ್ಕಾರಿ ನೌಕರಿ ಕೊಡಿಸೋದಾಗಿ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದರು. ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದೆ. ಅಲ್ಲದೆ ವಿವಿಧ ಇಲಾಖೆಯ ಮುಖ್ಯಸ್ಥರು ಪರಿಚಯ ಇದ್ದಾರೆ. ಖಾಲಿ ಇರುವ ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು. 6 ಲಕ್ಷ ಹಣ ಪಡೆದು ಕೆಲಸ ಕೊಡಿಸದೇ ಕಳ್ಳಾಟ ಆಡ್ತಿದ್ದರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲೇ ಆರೋಪಿಗಳ ವಿರುದ್ಧ 3 ಪ್ರಕರಣ ದಾಖಲಿರೋದು ಪತ್ತೆಯಾಗಿದೆ. ನಗರದ ಹಲವು ಠಾಣೆಗಳಲ್ಲೂ ದಂಪತಿ ವಿರುದ್ಧ ಕೇಸ್ ದಾಖಲಾಗಿವೆ.
ಬಂಧಿತರಿಂದ 2 ಲಕ್ಷ ನಗದು ಹಣ, 4 ಫೋನ್, ಒಂದು ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್ ಗೆ ಸೇರಿದಂತೆ 16 ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 11 ವಿವಿಧ ಕಂಪನಿಯ ವಾಚ್ ಗಳು, ಚಿನ್ನದಂತೆ ಕಾಣುವ 2 ನಕಲಿ ಬ್ರೇಸ್ ಲೈಟ್, 1 ಚೈನ್, 2 ಉಂಗುರ, 2 ಪೆಂಡೆಂಟ್ಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ನೈಟಿ ಹಾಕಿಕೊಂಡು ಬಂದು ಶೂ ಕಳ್ಳತನ, ಸಿಸಿ ಟಿವಿಯಲ್ಲಿ ಖದೀಮನ ಕೃತ್ಯ ಸೆರೆ
ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸಲು ಆದೇಶ
ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸಲು ಸರ್ಕಾರದ ಆದೇಶ ಮಾಡಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿದೆ. ಆದೇಶ ಪ್ರಶ್ನಿಸಿ ರಂಜಿ ಪೂಣಚ್ಚ, ಕುಟ್ಟಪ್ಪ ಅರ್ಜಿ ಸಲ್ಲಿಸಿದ್ದರು. ಕೊಡಗಿನಲ್ಲಿ ಜನರಿಗೆ ಸಿಐಡಿ ನೋಟಿಸ್ ನೀಡುತ್ತಿದ್ದು, ನೂರಾರು ವರ್ಷಗಳ ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ನೋಟಿಸ್ ನೀಡಲಾಗಿದೆ. ನೋಟಿಸ್‌ನಿಂದ ಕೊಡಗು ನಿವಾಸಿಗಳ ಮೂಲಭೂತ ಹಕ್ಕಿಗೆ ಧಕ್ಕೆ ಎಂದು ವಾದ ಮಾಡಿದ್ದರಿಂದಾಗಿ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ