ಬೆಂಗಳೂರಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ: ಬಿಬಿಎಂಪಿ ಆರೋಗ್ಯ ಆರೋಗ್ಯ ಅಧಿಕಾರಿ
ಬೆಂಗಳೂರಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರಲ್ಲಿ (Bengaluru) ದಿನೇದಿನೆ ಕೊರೊನಾ (Covid) ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿಬಿಎಂಪಿ (BBMP) ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಸುಮಾರು 2,500 ಕೊರೊನಾ ಪತ್ತೆಯಾಗಿವೆ. ಜೀನೋಮ್ ಸೀಕ್ವೆನ್ಸಿಂಗ್ನಲ್ಲಿ ಹೊಸ ವೇರಿಯೆಂಟ್ ಪತ್ತೆಯಾಗಿಲ್ಲ. ಲಸಿಕೆ ಪಡೆದವರಿಗೂ BA 5 ವೇರಿಯೆಂಟ್ ಬಾಧಿಸುತ್ತಿದೆ ಎಂದು ಹೇಳಿದ್ದಾರೆ.
ಐಸಿಯು ಪ್ರಮಾಣ ಶೇ.5ರಷ್ಟು ಹೆಚ್ಚಳಕಂಡಿದೆ. ವಯಸ್ಸಾದವರಿಗೆ ಹೆಚ್ಚಾಗಿ ಕೊವಿಡ್ ಕಾಣಿಸಿಕೊಳ್ಳುತ್ತಿದೆ. 3ಕ್ಕಿಂತ ಹೆಚ್ಚು ಕೊವಿಡ್ ಕೇಸ್ ಕಂಡು ಬಂದರೆ ಕ್ಲಸ್ಟರ್ ಎಂದು ಬಿಬಿಎಂಪಿ ನಿರ್ಧರಿಸುತ್ತದೆ. ಸದ್ಯ ಬೆಂಗಳೂರಿನಲ್ಲಿ 20ಕ್ಕಿಂತ ಹೆಚ್ಚು ಕ್ಲಸ್ಟರ್ಗಳು ಇವೆ. ಮಹದೇವಪುರ ಕ್ಷೇತ್ರದಲ್ಲಿ ಹೆಚ್ಚಿನ ಕ್ಲಸ್ಟರ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ 20 ಸಾವಿರ ಟೆಸ್ಟಿಂಗ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಇಂದು (ಆಗಸ್ಟ್ 10) ಆರೋಗ್ಯ ಸೌಧದಲ್ಲಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ಕರೆದಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Wed, 10 August 22