ಬೆಂಗಳೂರು: ಫ್ಲೈಓವರ್ ಬಿರುಕು, ಬ್ಯಾರಿಕೇಡ್ ಇಟ್ಟು ಬಿಟ್ಟಿರುವ ಸಿಬ್ಬಂದಿ, ಬಿದ್ದರೆ ವಾಹನ ಸವಾರರ ತಲೆ ಮೇಲೆಯೇ ಬೀಳುತ್ತೆ

ಟೋಲ್‌ ಮತ್ತು ರೋಡ್ ನಿರ್ವಾಹಣೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಡೆಯುವ BETPL, ತೇಪೆ ಕಾರ್ಯ ಮಾಡುವ ಮೂಲ‌ಕ ಬೇಜಾವಾಬ್ದಾರಿ ಮೆರೆಯುತ್ತಿದೆ ಎಂದು ವಾಹನ ಸವಾರರು ಗೊಣಗಿಕೊಂಡೇ ಸಂಚರಿಸುತ್ತಿದ್ದಾರೆ. ಆದರೆ ಅದಿನ್ನೂ BETPL ಅಧಿಕಾರಿಗಳ ಕಿವಿಗೆ ಬಿದ್ದಂತಿಲ್ಲ!

ಬೆಂಗಳೂರು: ಫ್ಲೈಓವರ್ ಬಿರುಕು, ಬ್ಯಾರಿಕೇಡ್ ಇಟ್ಟು ಬಿಟ್ಟಿರುವ ಸಿಬ್ಬಂದಿ, ಬಿದ್ದರೆ ವಾಹನ ಸವಾರರ ತಲೆ ಮೇಲೆಯೇ ಬೀಳುತ್ತೆ
ಬೆಂಗಳೂರು: ಫ್ಲೈಓವರ್ ತಡೆಗೋಡೆ ಬಿರುಕು, ಬ್ಯಾರಿಕೇಡ್ ಇಟ್ಟು ಬಿಟ್ಟಿರುವ ಸಿಬ್ಬಂದಿ, ಬಿದ್ದರೆ ವಾಹನ ಸವಾರರ ತಲೆ ಮೇಲೆಯೇ ಬೀಳುತ್ತೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 19, 2022 | 2:12 PM

ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಮಹಾ ದುರಂತಕ್ಕೆ ಸಾಕ್ಷಿಯಾಗಲಿದೆಯಾ? ಎಕೆಂದರೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ (Electronic City Fly over) ತಡೆಗೋಡೆ ಬಿರುಕು ಬಿಟ್ಟಿದೆ. ಯಾವುದೇ ಕ್ಷಣದಲ್ಲಾದರೂ ತಡೆಗೋಡೆ ಬೀಳುವ ಆತಂಕ, ಅಪಾಯ ಇದೆ. 10 ಕಿಲೋ ಮೀಟರ್ ಉದ್ದದ ಫ್ಲೈಓವರ್ ಇದಾಗಿದೆ. ಫ್ಲೈಓರ್ ನ ಮಧ್ಯ ಭಾಗ ಲೇಬೈ ಬಳಿ ಬಿರುಕು ಬಿಟ್ಟಿದೆ. ಕೆಲ ತಿಂಗಳ ಹಿಂದೆ ಇದೇ ಲೇಬೈ ಬಳಿ ಅಪಘಾತವಾಗಿತ್ತು.

ಇತ್ತೀಚೆಗೆ ಅಪಘಾತದಲ್ಲಿ ತಡೆಗೋಡೆ ಬಿರುಕುಬಿಟ್ಟಿತ್ತು. ಆದರೆ ತಡೆಗೋಡೆ ದುರಸ್ತಿ ಮಾಡದೆ, BETPL ಸಂಸ್ಥೆ ಹಾಗೆಯೇ ಬಿಟ್ಟಿದೆ. ಗೋಡೆ ಬದಲಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಅದರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈ. ಲಿ (Bangalore Elevated Toll Way PL – BETPL) ಸಿಬ್ಬಂದಿ ಬಿರುಕು ಬಿಟ್ಟಿರುವ ಜಾಗದಲ್ಲಿ ಬ್ಯಾರಿಕೇಡ್ ಇಟ್ಟು ಬಿಟ್ಟಿದ್ದಾರೆ ಅಷ್ಟೆ. ಗೋಡೆಯ ಕೊನೆಯ ಭಾಗ ಓಪನ್ ಆಗಿಯೇ ಬಿಟ್ಟಿದ್ದಾರೆ. ಇನ್ನು ತಡೆಗೋಡೆ ಬಿದ್ದರೆ ನೇರವಾಗಿ ವಾಹನ ಸವಾರರ ನೆತ್ತಿಯ ಮೇಲೆಯೇ ಬೀಳುವ ಆತಂಕವಿದೆ.

ಟೋಲ್‌ ಮತ್ತು ರೋಡ್ ನಿರ್ವಾಹಣೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಡೆಯುವ BETPL, ತೇಪೆ ಕಾರ್ಯ ಮಾಡುವ ಮೂಲ‌ಕ ಬೇಜಾವಾಬ್ದಾರಿ ಮೆರೆಯುತ್ತಿದೆ ಎಂದು ವಾಹನ ಸವಾರರು ಗೊಣಗಿಕೊಂಡೇ ಸಂಚರಿಸುತ್ತಿದ್ದಾರೆ. ಆದರೆ ಅದಿನ್ನೂ BETPL ಅಧಿಕಾರಿಗಳ ಕಿವಿಗೆ ಬಿದ್ದಂತಿಲ್ಲ!

ತುಮಕೂರಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿ; 4 ಮಂದಿ ಸ್ಥಳದಲ್ಲೇ ಸಾವು ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಎಸ್​ವಿಟಿ ಬಸ್ ಪಲ್ಟಿ ಆಗಿ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಬಳಿಕ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಎಸ್​ಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಸ್​ನ ಮೇಲೆ ಕೂಡ ಸುಮಾರು 40 ಜನ ಕುಳಿತಿದ್ದರು ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಎಸ್​ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿ ಟಿವಿ9ಗೆ ಪ್ರತ್ಯಕ್ಷದರ್ಶಿ ಅನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಗಾಯಾಳುಗಳ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳೇ ಇದ್ದಾರೆ. ಬಸ್​ ಮೇಲೆ 60 ಜನ ಕುಳಿತು ಪ್ರಯಾಣಿಸುತ್ತಿದ್ದರು. ಗಾಯಾಳುಗಳು ಪಾವಗಡ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ತಿಳಿಸಿದ್ದಾರೆ. ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ಆಗಿದೆ. 8 ಜನ ಸಾವನ್ನಪ್ಪಿದ್ದಾರೆ. ಬಸ್ ಮೇಲೆ ಸುಮಾರು 40ಕ್ಕೂ ಹೆಚ್ಚು ಜನರು ಇದ್ದರು. ಓವರ್ ಲೋಡ್ ಆಗಿದ್ದ ಹಿನ್ನೆಲೆ ಸ್ಟಾಪ್ ಕೊಟ್ಟಿರಲಿಲ್ಲ. ಕೆಲ ಗ್ರಾಮಗಳಲ್ಲಿ ಬಸ್ ಸ್ಟಾಪ್ ನೀಡದೆ ಹೋಗಿತ್ತು. ಅಪಘಾತವಾದ ಕೂಡಲೇ ಚಾಲಕ, ನಿರ್ವಾಹಕ ಪರಾರಿ ಆಗಿದ್ದಾರೆ. ಖಾಸಗಿ ಬಸ್ ಚಕ್ರಕ್ಕೂ ಸಿಲುಕಿ ಕೆಲವರು ಮೃತಪಟ್ಟಿದ್ದಾರೆ ಎಂದು ಟಿವಿ9ಗೆ ಪ್ರತ್ಯಕ್ಷದರ್ಶಿ ಗೋಪಾಲ್ ಮಾಹಿತಿ ನೀಡಿದ್ದಾರೆ.

ಶ್ರೀನಿವಾಸ್ ಮೂರ್ತಿ ಒಡೆತನದ ಎಸ್‌ವಿಟಿ ಬಸ್ ಪಲ್ಟಿ ಆಗಿದೆ. ಪ್ರತಿ ದಿನ ಪಾವಗಡ- ವೈ.ಎನ್. ಕೋಟೆ ಮಧ್ಯೆ ಈ ಬಸ್ ಸಂಚರಿಸುತ್ತಿತ್ತು ಎಂದು ಟಿವಿ9ಗೆ ಪ್ರತ್ಯಕ್ಷದರ್ಶಿ ಪಳವಳ್ಳಿಯ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸಿದ ಪಳವಳ್ಳಿ ಕಟ್ಟೆ ಬಳಿ ಜನರ ಜಮಾವಣೆ ಆಗಿದೆ. ಅಪಘಾತ ನೋಡಲು ನೂರಾರು ಜನರು ಗುಂಪುಗೂಡಿದ್ದಾರೆ. ಸ್ಥಳದಲ್ಲಿ ಗುಂಪುಗೂಡಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಗಾಯಾಳುಗಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆಲ ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Published On - 2:04 pm, Sat, 19 March 22