ಎಸಿಬಿ ದಾಳಿಗೊಳಗಾಗಿದ್ದ ಅಧಿಕಾರಿಯನ್ನು ನಿವೃತ್ತಿ ನಂತರವೂ ಹುದ್ದೆಯಲ್ಲಿ ಮುಂದುವರಿಸಿದ ಸರ್ಕಾರ!
3 ವರ್ಷಗಳ ಹಿಂದೆ ಬಿಡಿಎ ಇಂಜಿನಿಯರ್ ಆಗಿದ್ದಾಗ ACB ದಾಳಿ ನಡೆಸಲಾಗಿತ್ತು. ಹಣವಿದ್ದ ಬ್ಯಾಗ್ ಫ್ಲ್ಯಾಟ್‌ನಿಂದ ಎಸೆದು ಗೌಡಯ್ಯ ಸುದ್ದಿಯಾಗಿದ್ದರು. ಮಂತ್ರಿ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನಿಂದ ಎಸೆದು ಸುದ್ದಿಯಾಗಿದ್ದರು. ಇದೀಗ ಅವರನ್ನು ಅಧಿಕಾರದಲ್ಲಿ ಮುಂದುವರಿಸಲಾಗಿದೆ.
ಬೆಂಗಳೂರು: ಎಸಿಬಿ ದಾಳಿಗೊಳಗಾಗಿದ್ದ ಅಧಿಕಾರಿಯನ್ನು ಹುದ್ದೆಯಲ್ಲಿ ಮುಂದುವರಿಸಲಾಗಿದೆ. ನಿವೃತ್ತಿ ನಂತರವೂ ರಾಜ್ಯಸರ್ಕಾರ ಅಧಿಕಾರದಲ್ಲಿ ಮುಂದುವರಿಸಿದೆ. ಹುದ್ದೆಯಲ್ಲಿ ಮುಂದುವರಿಕೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ನಿವೃತ್ತಿ ನಂತರವೂ ಹುದ್ದೆಯಲ್ಲಿ ಎನ್.ಜಿ. ಗೌಡಯ್ಯ ಮುಂದುವರಿಕೆಗೆ ಅನುಮೋದನೆ ನೀಡಲಾಗಿದೆ. ಆರು ತಿಂಗಳು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. 3 ವರ್ಷಗಳ ಹಿಂದೆ ಬಿಡಿಎ ಇಂಜಿನಿಯರ್ ಆಗಿದ್ದಾಗ ACB ದಾಳಿ ನಡೆಸಲಾಗಿತ್ತು. ಹಣವಿದ್ದ ಬ್ಯಾಗ್ ಫ್ಲ್ಯಾಟ್‌ನಿಂದ ಎಸೆದು ಗೌಡಯ್ಯ ಸುದ್ದಿಯಾಗಿದ್ದರು. ಮಂತ್ರಿ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನಿಂದ ಎಸೆದು ಸುದ್ದಿಯಾಗಿದ್ದರು. ಇದೀಗ ಅವರನ್ನು ಅಧಿಕಾರದಲ್ಲಿ ಮುಂದುವರಿಸಲಾಗಿದೆ.
ನಿವೃತ್ತಿಯ ವೇಳೆಗೆ ವಸತಿ ನಿಗಮದ ಮುಖ್ಯ ಇಂಜಿನಿಯರ್ ಆಗಿದ್ದ ಅವರು ಕಳೆದ ಫೆಬ್ರವರಿ 28ರಂದು ಹುದ್ದೆಯಿಂದ ನಿವೃತ್ತಿಯಾಗಿದ್ದರು. ರಾಜ್ಯ ಪೊಲೀಸ್ ವಸತಿ ನಿಗಮದ ಮುಖ್ಯ ಇಂಜಿನಿಯರ್ ಆಗಿದ್ದ ಅವರನ್ನು ಹುದ್ದೆಯಲ್ಲಿ ಮುಂದುವರಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಸಂಪುಟದಲ್ಲಿ ಒಪ್ಪಿಗೆ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಸತಿ ನಿಗಮಕ್ಕೆ ಸೇವೆ ಅಗತ್ಯವಿರುವ ಕಾರಣ ನೀಡಿ ಮುಂದುವರಿಕೆ ಮಾಡಲಾಗಿದೆ. ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಮುಂದುವರಿಸಿರುವ ಸರ್ಕಾರದ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಕೆಎಸ್‌ಸಿಆರ್ ನಿಯಮದಡಿ ರಾಜ್ಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಸಿದೆ.
ಬೆಳಗಾವಿ: ಖೈದಿ ಎಸ್ಕೇಪ್ ಪ್ರಕರಣ; ಕಾರಾಗೃಹದ ಮುಖ್ಯ ವೀಕ್ಷಕ ವಿರುದ್ಧ ಪ್ರಕರಣ ದಾಖಲು
ಬೈಲಹೊಂಗಲ ಕಾರಾಗೃಹದಿಂದ ವಿಚಾರಣಾಧೀನ ಖೈದಿ ಎಸ್ಕೇಪ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈಲಹೊಂಗಲ ಕಾರಾಗೃಹದ ಮುಖ್ಯ ವೀಕ್ಷಕ ವಾಯ್.ಆಯ್. ಬುದ್ನಿ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಖಾದಿರಸಾಬ್ ರಾಜೇಖಾನ್ (34) ಎಂಬ ಖೈದಿ ಮಾ.16 ರಂದು ಜೈಲಿನಿಂದ ಎಸ್ಕೇಪ್ ಆಗಿದ್ದ. ಕಾರಾಗೃಹದ ಮುಖ್ಯದ್ವಾರದಿಂದಲೇ ಕೀ ಬಳಸಿ ಎಸ್ಕೇಪ್ ಆಗಿದ್ದ. ಜೈಲಿನ ಮುಖ್ಯ ದ್ವಾರದ ಕೀ ಖೈದಿಗೆ ಸಿಕ್ಕ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿದ ಹಿನ್ನೆಲೆ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಳೆದ ಹದಿನೈದು ದಿನಗಳ ಹಿಂದಷ್ಟೇ ಆರೋಪಿ ಖಾದಿರಸಾಬ್‌ನ ಬಂಧಿಸಿದ್ದ ಮುರಗೋಡ ಠಾಣೆ ಪೊಲೀಸರು, ಕೊಲೆ ಯತ್ನ, ಗಲಾಟೆ ಸೇರಿದಂತೆ ಆರು ಪ್ರಕರಣದಲ್ಲಿ ಆರೋಪಿಯಾಗಿದ್ದ ಖಾದಿರಸಾಬ್ ಎಂಬಾತನನ್ನು ಬಂಧಿಸಿದ್ದರು. ಇದೀಗ ಖೈದಿ ಖಾದಿರಸಾಬ್ ಮತ್ತು ಕಾರಾಗೃಹದ ಮುಖ್ಯ ವೀಕ್ಷಕ ವಾಯ್.ಆಯ್. ಬುದ್ನಿ ಇಬ್ಬರ ಮೇಲೆ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಪತಿ ಸ್ಯಾಡಿಸ್ಟ್ ಸೈಕೊ ಎಂದು ಆರೋಪಿಸಿ ಪತ್ನಿ ಆತ್ಮಹತ್ಯೆ, ಮತ್ತೊಂದೆಡೆ ಗಂಡ ಕೈಕೊಟ್ಟಿದ್ದಕ್ಕೆ ಹೆಂಡತಿ ಪ್ರತಿಭಟನೆ
ಇದನ್ನೂ ಓದಿ: Crime News: ದೇವರ ಹೆಸರಿನಲ್ಲಿ ಮಾತು ಆರಂಭಿಸಿ ಚಿನ್ನಾಭರಣ ದರೋಡೆ ಮಾಡುತ್ತಿದ್ದ ಖದೀಮರ ಗ್ಯಾಂಗ್ ಅರೆಸ್ಟ್!