ರಾಜ್ಯಾದ್ಯಂತ ಮರಾಠ ಮಿಲಿಟರಿ ಕ್ಯಾಂಟೀನ್ ತೆರೆಯಲು ನಿರ್ಧಾರ; ಕ್ಯಾಂಟೀನ್ ಓಪನ್ ಮಾಡಲು ಬಯಸುವವರಿಗೆ ಸಬ್ಸಿಡಿ, ಸಾಲಸೌಲಭ್ಯ
ಮತ್ತೊಂದೆಡೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜುಲೈ 19ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಬೆಂಗಳೂರು: ರಾಜ್ಯಾದ್ಯಂತ ಮರಾಠ ಮಿಲಿಟರಿ ಕ್ಯಾಂಟೀನ್(Maratha Military Canteen) ತೆರೆಯಲು ಮರಾಠ ಅಭಿವೃದ್ಧಿ ನಿಗಮ ನಿರ್ಧರಿಸಿದೆ. ಬೆಂಗಳೂರಿನಲ್ಲಿ 10 ಕ್ಯಾಂಟೀನ್ಗಳು ಮತ್ತು ಜಿಲ್ಲೆಗೆ ಒಂದರಂತೆ 30 ಕ್ಯಾಂಟೀನ್ ಆರಂಭ ಮಾಡಲು ನಿರ್ಧರಿಸಿದೆ. ಅಲ್ಲದೆ ಮರಾಠ ಅಭಿವೃದ್ಧಿ ನಿಗಮವು, ಮರಾಠ ಮಿಲಿಟರಿ ಕ್ಯಾಂಟೀನ್ ತೆರೆಯಲು ₹5 ಲಕ್ಷ ಸಾಲಸೌಲಭ್ಯ ಮತ್ತು 2.5 ಲಕ್ಷ ರೂಪಾಯಿ ಸಬ್ಸಿಡಿ ನೀಡಲಿದೆ. ಇನ್ನು ಈ ಬಗ್ಗೆ ಮರಾಠ ಅಭಿವೃದ್ಧಿ ನಿಗಮ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆರ್ಥಿಕ ಇಲಾಖೆ ಅನುಮೋದನೆ ಬಳಿಕ ಮರಾಠ ಕ್ಯಾಂಟೀನ್ ಸ್ಥಾಪನೆ ಮಾಡಲಾಗುತ್ತೆ.
ಮತ್ತೊಂದೆಡೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜುಲೈ 19ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ರಾವ್ ಮುಳೆ ತಿಳಿಸಿದ್ದಾರೆ.
Published On - 3:22 pm, Wed, 13 July 22