ಚಾಮರಾಜಪೇಟೆಯ ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್​ಗೆ ಚಾಕು ಇರಿತ

ಅಯೂಬ್ ಖಾನ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಆಸ್ತಿ ವಿವಾದ ಸಂಬಂಧ ಗಲಾಟೆಗೆ ನಡೆದಿರುವ ಸಾಧ್ಯತೆ ಇದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಚಾಮರಾಜಪೇಟೆಯ ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್​ಗೆ ಚಾಕು ಇರಿತ
ಅಯೂಬ್ ಖಾನ್
TV9kannada Web Team

| Edited By: Ayesha Banu

Jul 13, 2022 | 10:00 PM

ಬೆಂಗಳೂರು: ನಗರದ ಚಾಮರಾಜಪೇಟೆಯ ಟಿಪ್ಪುನಗರ ವಾರ್ಡ್ ನ ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್ಗೆ ಚಾಕು ಇರಿಯಲಾಗಿದೆ. ಕಾರ್ಪೊರೇಟರ್ ನ ಸಂಬಂಧಿಯಿಂದಲೇ ಚಾಕು ಇರಿಯಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಚಾಕು ಇರಿತದಿಂದಾಗಿ ಅಯೂಬ್ ಖಾನ್ ಗೆ ದೇಹದ ಕೆಲ ಭಾಗದಲ್ಲಿ ಗಾಯಗಳಾಗಿವೆ. ಸದ್ಯ ಅಯೂಬ್ ಖಾನ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಆಸ್ತಿ ವಿವಾದ ಸಂಬಂಧ ಗಲಾಟೆಗೆ ನಡೆದಿರುವ ಸಾಧ್ಯತೆ ಇದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಬಿಎಂಪಿ ವಾರ್ಡ್ 139 ಮಾಜಿ ಕಾರ್ಪೋರೇಟರ್ ನಜೀಮಾ ಅಯೂಬ್ ಪತಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ತನ್ನ ಅಣ್ಣನ ಮಕ್ಕಳಿಂದಲೇ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ರಕ್ತದ ಮಡುವಿನಲ್ಲಿದ್ದ ಅಯೂಬ್​ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ‌ ಮಗನೊಂದಿಗೆ ಪದೇ ಪದೇ ಜಗಳ ನಡೆಯುತ್ತಿತ್ತು. ಇಂದು ಸಂಜೆ ಮನೆಗೆ ಹೋಗಿದ್ದ ಅಯೂಬ್ ಅಣ್ಣನ‌ ಮಗನಿಂದ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಕಾಂಪೌಂಡ್ ಗೋಡೆ ಕುಸಿದು ಇಬ್ಬರ ಸಾವು
ಬೆಂಗಳೂರಿನ ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್​ ಗೋಡೆ ಕುಸಿದು ಬಿದ್ದು ಬಾಲ(35), ರಾಜಮಣಿ(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತಪಟ್ಟ ಬಾಲ ಮತ್ತು ರಾಜಮಣಿ ಸ್ನೇಹಿತರ ಜೊತೆ ಬಾರ್​ಗೆ ಹೋಗಿದ್ದರು. ಬಾರ್​ನಿಂದ ಹೊರಬಂದು ಮೂತ್ರ ವಿಸರ್ಜನೆಗೆ ತೆರಳಿದ್ದಾಗ ದುರ್ಘಟನೆ ನಡೆದಿದೆ. ಘಟನೆ ವೇಳೆ ಬಾಲ, ರಾಜಮಣಿ ಜೊತೆಗಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪಿಲ್ಲರ್​ನ ಕಬ್ಬಿಣ ತೆಗೆಯುವಾಗ ಕಾಂಪೌಂಡ್ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು ಪರಾರಿಯಾಗಿದ್ದ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada