ಡೆಂಗ್ಯೂ ಪ್ರಕರಣ ಹೆಚ್ಚಾದರು ಅಧಿಕಾರಿಗಳ ನಿರ್ಲಕ್ಷ್ಯ: ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಜನರ ಗೋಳು ಕೇಳೋರಿಲ್ಲ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಕ್ಷಯ ನಗರದಲ್ಲಿ ಅವ್ಯವಸ್ಥೆ ಮನೆ ಮಾಡಿದ್ದು, ಡ್ರೈನೇಜ್ ಕೊಳಚೆ ನೀರಿನಲ್ಲೇ ನಿತ್ಯ ಓಡಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಡೆಂಗ್ಯೂ ಕಾಯಿಲೆಗೆ ತುತ್ತಾಗುವ ಆತಂಕ ಎದುರಾಗಿದೆ.ನೂರಾರು ಬಾರಿ ಸಮಸ್ಯೆ ಬಗ್ಗೆ ಪತ್ರ ಬರೆದರು ಯಾವುದೇ ಕ್ರಮವಾಗಿಲ್ಲ ಎಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೆಂಗ್ಯೂ ಪ್ರಕರಣ ಹೆಚ್ಚಾದರು ಅಧಿಕಾರಿಗಳ ನಿರ್ಲಕ್ಷ್ಯ: ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಜನರ ಗೋಳು ಕೇಳೋರಿಲ್ಲ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 08, 2023 | 7:42 PM

ಆನೇಕಲ್​, ಸೆಪ್ಟೆಂಬರ್​ 8: ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು (Dengue cases) ಹೆಚ್ಚಾದ್ದರು ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಜನರು ತಮ್ಮ ಗೋಳು ತೋಡಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಕ್ಷಯ ನಗರದಲ್ಲಿ ಅವ್ಯವಸ್ಥೆ ಮನೆ ಮಾಡಿದ್ದು, ಡ್ರೈನೇಜ್ ಕೊಳಚೆ ನೀರಿನಲ್ಲೇ ನಿತ್ಯ ಓಡಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಡೆಂಗ್ಯೂ ಕಾಯಿಲೆಗೆ ತುತ್ತಾಗುವ ಆತಂಕ ಎದುರಾಗಿದೆ. ರಸ್ತೆಯಲ್ಲಿ ನೀರು ತುಂಬಿದ್ದರು ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನೂರಾರು ಬಾರಿ ಸಮಸ್ಯೆ ಬಗ್ಗೆ ಪತ್ರ ಬರೆದರು ಯಾವುದೇ ಕ್ರಮವಾಗಿಲ್ಲ ಎಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಗೂರಿನಿಂದ ಹುಳಿಮಾವಿಗೆ ಸಂಪರ್ಕ ರಸ್ತೆಯಲ್ಲಿರುವ ಅಕ್ಷಯ ನಗರದ ಮಹಾವೀರ್ ರಸ್ತೆಯಲ್ಲಿನ ಜನರ ಗೋಳು ಕೇಳೋರಿಲ್ಲದಂತ್ತಾಗಿದೆ. ಆರೋಗ್ಯ ಸಚಿವರ ಹೇಳಿಕೆ ಬರಿ ಹೇಳಿಕೆಗಷ್ಟೇ ಸಿಮೀತ. ಸಚಿವರು ನಿನ್ನೇಯಷ್ಟೇ ಅಧಿಕಾರಿಗಳ ಹಾಗೂ ವೈದ್ಯರ ಸಭೆ ಕರೆದಿದ್ದರು. ಡೆಂಗ್ಯೂ ಪ್ರಕರಣ ಹೆಚ್ಚಳವಾಗದಂತೆ ಸೂಚನೆ ನೀಡಿದ್ದರು. ಆದರೆ ಸಮಸ್ಯೆ ಬಗೆಹರಿಸದೆ ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉಲ್ಬಣಗೊಂಡ ಡೆಂಗ್ಯೂ ರೋಗ, 7 ಜನ ಸಾವು

ಎರಡು-ಮೂರು ವರ್ಷಗಳಿಂದ ಒಳಚರಂಡಿ ಉಕ್ಕಿ ಹರಿಯುತ್ತಿದೆ. ಎರಡು ಕಡೆ ಮ್ಯಾನ್ ಹೋಲ್ ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಪ್ರತಿಷ್ಠಿತ ಡಿಎಲ್ಎಫ್ ಬಡಾವಣೆ ಬಳಿ ಪ್ರತಿದಿನ ಶಾಲೆಗೆ ಹೋಗುವ ಮಕ್ಕಳು ಕೊಳಚೆ ನೀರಿನಲ್ಲಿಯೇ ನಡೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಡೆಂಘೀ ಕಾಯಿಲೆಗೆ ತುತ್ತಾಗಿರುವ ಸ್ಥಳೀಯರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದರು, ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ನೂರಾರು ಬಾರಿ ಸಮಸ್ಯೆ ಬಗ್ಗೆ ಪತ್ರ ಬರೆದರು ಯಾವುದೇ ಕ್ರಮವಾಗಿಲ್ಲ. ಸಮಸ್ಯೆ ಬಗೆಹರಿಸಿ ಕೊಡಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ರೋಗ ಪ್ರಕರಣ ಸಂಖ್ಯೆಯಲ್ಲಿ ಏರಿಕೆ; ಬೆಂಗಳೂರಿನಲ್ಲಿ ಅಧಿಕ ಬಾಧಿತರು

ಡೆಂಗ್ಯೂ ಬೆಂಗಳೂರನ್ನೇ ಭಯಪಡಿಯುತ್ತಿರುವ ಮಾರಕ ರೋಗ. ಇದೇ ಖಾಯಿಲೆ ದಿನದಿಂದ ದಿನಕ್ಕೆ ಸಿಲಿಕಾನ್‌ ಸಿಟಿಯನ್ನೇ ಆವರಿಸುತ್ತಿದೆ. ಅದರಲ್ಲಿಯೂ ಕಳೆದ ಮೂರು ತಿಂಗಳಿನಿಂದ ಅಬ್ಬರಿಸುತ್ತಿದ್ದು, 7 ಜನರ ಪೈಕಿ ಮೂವರು ಮಾತ್ರ ಡೆಂಗ್ಯೂಯಿಂದಲೇ ಸತ್ತಿರುವುದು ಎಂದು ಗೊತ್ತಾಗಿದೆ. ಇನ್ನೂ ನಾಲ್ವರ ಸಾವಿನ ವರದಿ ಬರಬೇಕಿದೆ. ಇದರ ನಡುವೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:33 pm, Fri, 8 September 23