ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನಿಚರ್ ಎಕ್ಸ್ ಪೋಗೆ ಭರ್ಜರಿ ಚಾಲನೆ: ಮೊದಲ ದಿನವೇ ಜನರಿಂದ ಉತ್ತಮ ಸ್ಪಂದನೆ
ಇಂದಿನಿಂದ 3 ದಿನಗಳ ಕಾಲ ನಗರದ ನಾಯಂಡಹಳ್ಳಿಯಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ಸ್ನಲ್ಲಿ ಟಿವಿ9 ಕನ್ನಡ ವಾಹಿನಿ ನಿಯಮಿತವಾಗಿ ನಡೆಸುವ ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನಿಚರ್ ಎಕ್ಸ್ ಪೋ 14ನೇ ಆವೃತ್ತಿಗೆ ಶುಕ್ರವಾರ ಅದ್ದೂರಿ ಚಾಲನೆ ನೀಡಲಾಗಿದೆ. ಮೊದಲ ದಿನವೇ ಟಿವಿ9 ಎಕ್ಸ್ ಪೋ ಜನರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿದೆ.
ಬೆಂಗಳೂರು, ಸೆಪ್ಟೆಂಬರ್ 8: ಟಿವಿ9 ಕನ್ನಡ ವಾಹಿನಿ ನಿಯಮಿತವಾಗಿ ನಡೆಸುವ ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನಿಚರ್ ಎಕ್ಸ್ ಪೋ 14ನೇ ಆವೃತ್ತಿಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಇಂದಿನಿಂದ 3 ದಿನಗಳ ಕಾಲ ನಗರದ ನಾಯಂಡಹಳ್ಳಿಯಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ಸ್ನಲ್ಲಿ (Nandi Links Grounds) ಆಯೋಜಿಸಲಾಗಿದ್ದು, ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಕ್ಸ್ ಪೋನಲ್ಲಿ 50 ಕ್ಕೂ ಹೆಚ್ಚು ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್, ಇಂಟಿರಿಯರ್ಸ್ ಆ್ಯಂಡ್ ಹೋಮ್ ಲೋನ್ಸ್ ಕಂಪನಿಗಳು ಭಾಗಿಯಾಗಿವೆ.
ಟಿವಿ9 ಎಕ್ಸ್ ಪೋವನ್ನು ನಟ ಕುಮಾಲ್, ನಟಿ ಲೇಖಾ ಚಂದ್ರ, ನಟಿ ಶರಣ್ಯ ಶೆಟ್ಟಿ, ಆಶ್ವಥ್ ಸೂರ್ಯ ಎಂಡಿ ರಂಜಿತ್ ಕುಮಾರ್ ರಾಯಲ್ ಪ್ರಾಪಟ್ರೀಸ್ ಚೇರ್ ಮೆನ್ ರಾಘುರಾಮ್ ಕೃಷ್ಣಪ್ಪ, ಟಿವಿ 9 ಸಿನಿಯರ್ ವಿಪಿ ನೋಬಲ್ ಜೈಕರ್ ಅವರು ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ 2023ಗೆ ಚಾಲನೆ, ನಾಯಂಡಹಳ್ಳಿಯ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದಿನಿಂದ 3-ದಿನದ ಮೇಳ!
ಒಂದೇ ವೇದಿಕೆಯಲ್ಲಿ ಮನೆ, ಸೈಟ್, ವಿಲ್ಲಾ, ಅಪಾರ್ಟ್‌ಮೆಂಟ್, ಇಂಟೀರಿಯರ್, ಹೋಮ್ ಲೋನ್ಸ್ ಸೇರದಂತೆ ಮನೆಗೆ ಬೇಕಾ ಫರ್ನಿಚರ್ಗಳು ಲಭ್ಯವಾಗಲಿದ್ದು, ಟಿವಿ9 ಎಕ್ಸ್ ಪೋ ವಿಶೇಷವಾಗಿ ಹಲವು ಆಫಾರ್ ಗಳನ್ನ ಕೂಡ ನೀಡುತ್ತಿದೆ. ಈ ಕುರಿತಾಗಿ ರಾಯಲ್ ಪ್ರಾಪರ್ಟೀಸ್ ಹಾಗೂ ಅಶ್ವಥ್ ಸೂರ್ಯ ಪ್ರಾಪರ್ಟೀಸ್ ನಿಂದಲೂ ವಿಶೇಷ ಆಫಾರ್ ನೀಡಲಾಗುತ್ತಿದೆ.
ಬಿಎಂಆರ್ಡಿ ನಿವೇಷನವನ್ನ 1900 ರೂ. ಗಳಿಗೆ ನೀಡಲಾಗುತ್ತಿದೆ. 2 ಬಿಹೆಚ್ಕೆ ಮನೆಗಳನ್ನ 49 ಲಕ್ಷ ರೂ. ನೀಡಲಾಗುತ್ತಿದೆ. ಗ್ರಾಹಕರಿಗೆ ಒಂದು ರೂಪಾಯಿಗೂ ಬುಕಿಂಗ್ ಆಫಾರ್ ನೀಡಲಾಗಿದೆ.
ಎಕ್ಸ್ ಪೋಗೆ ಬಂದಂತಹ ಗ್ರಾಹಕರು ಎಕ್ಸ್ ಪೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಸೈಟ್, ಫರ್ನಿಚರ್ ತೆಗೆದುಕೊಳ್ಳಬೇಕು ಎಂದರೆ ಕಷ್ಡ ಆಗುತ್ತಿತ್ತು. ಆದರೆ ಇಂದು ಟಿವಿ9 ಎಕ್ಸ್ ಪೋನಲ್ಲಿ ಪ್ರಾಪರ್ಟೀಸ್, ಫರ್ನಿಚರ್ ತೆಗದುಕೊಳ್ಳುವುದಕ್ಕೆ ಖುಷಿಯಾಗುತ್ತಿದೆ ಅಂತ ಸಂತೋಷ ವ್ಯಕ್ತಪಡಿಸಿದ್ದಾರೆ.
ಲಕ್ಕಿ ಡಿಪ್ನಲ್ಲಿ 5 ಜನ ಅದೃಷ್ಟ ಶಾಲಿಗೆಳಿಗೆ ಗೋಲ್ಡ್ ಕಾಯಿನ್
ಲಕ್ಕಿ ಡಿಪ್ನಲ್ಲಿ ಐದು ಜನ ಅದೃಷ್ಟ ಶಾಲಿಗೆಳಿಗೆ ಗೋಲ್ಡ್ ಕಾಯಿನ್ ನೀಡಿದ್ದು, ಒಬ್ಬರಿಗೆ ಅತಿಯಾಸ್ ಬೈಕ್ ನೀಡಲಾಗಿದೆ. ಇದೇ ವೇಳೆ ಟಿವಿ9 ಚೀಫ್ ಎಡಿಟರ್ ರಾಹುಲ್ ಚೌದರಿ, ಮಾರ್ಕೆಟಿಂಗ್ ವೈಸ್ ಪ್ರೆಸಿಡೆಂಟ್ ನೋಬಲ್ ಟೆಕ್ನಿಕಲ್ ಮುಖ್ಯಸ್ಥ ಶ್ರೀಕಾಂತ್, ಅರಿಯಾಸ್ ಮೊಬೈಲಿಟಿ ಡೆವಲಪರ್ಸ್ನ ನಿರ್ದೇಶಕ ಉಮೇಶ್ ಗೌಡ ಭಾಗಿಯಾಗಿದ್ದರು.
ಮೊದಲನೇ ದಿನದ ಟಿವಿ9 ಎಕ್ಸ್ ಪೋ ಜನರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿದ್ದು, ಎರಡು ದಿನಗಳ ಕಾಲ ಎಕ್ಸ್ ಪೋ ಇರಲಿದೆ. ಸಿಲಿಕಾನ್ ಜನರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:03 pm, Fri, 8 September 23