ಬಚ್ಚಲಬಾಯಿ ಈಶ್ವರಪ್ಪ ಎಂದ ಡಿಕೆ ಶಿವಕುಮಾರ್, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರು

| Updated By: ganapathi bhat

Updated on: Feb 17, 2022 | 6:36 PM

ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾಗಿದ್ದಾರೆ. ಅಹೋರಾತ್ರಿ ಧರಣಿ ನಿರತ ಶಾಸಕರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಎಂದು ವಿಧಾನಸಭೆ ಕಾರ್ಯದರ್ಶಿಗೆ ಸ್ಪೀಕರ್ ಕಾಗೇರಿ ಸೂಚಿಸಿದ್ದಾರೆ.

ಬಚ್ಚಲಬಾಯಿ ಈಶ್ವರಪ್ಪ ಎಂದ ಡಿಕೆ ಶಿವಕುಮಾರ್, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರು
ಡಿಕೆ ಶಿವಕುಮಾರ್
Follow us on

ಬೆಂಗಳೂರು: ನಿನ್ನೆ ನಡೆದ ಘಟನೆ ಬಗ್ಗೆ ನನಗೆ ಯಾವುದೇ ರಿಗ್ರೆಟ್ ಇಲ್ಲ. ಬಚ್ಚಲಬಾಯಿ ಈಶ್ವರಪ್ಪ (KS Eshwarappa) ರಾಷ್ಟ್ರದ್ರೋಹಿ ಎಂದು ಒಪ್ಪಿಕೊಂಡಿದ್ದಾನೆ. ಸಚಿವ ಈಶ್ವರಪ್ಪ ಅವರನ್ನು ಪಕ್ಷ ಸಮರ್ಥನೆ ಮಾಡಿದೆ. ಸ್ಪೀಕರ್ ಸಹ ರಾಜಕೀಯ ಪ್ರತಿನಿಧಿ ರೀತಿ ವರ್ತಿಸ್ತಿದ್ದಾರೆ. ಈಗಲೂ ಹೇಳುತ್ತಿದ್ದೇನೆ ಈಶ್ವರಪ್ಪ ದೊಡ್ಡ ರಾಷ್ಟ್ರದ್ರೋಹಿ. ಹರಕುಬಾಯಿ ಈಶ್ವರಪ್ಪನಿಗೆ ಉತ್ತರ ಕೊಡಲು ಇಷ್ಟವಿಲ್ಲ ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ರಾಜೀನಾಮೆ ಕೊಟ್ಟು ಹೋಗು ಎಂದು ಹೇಳ್ತೀನಿ. ಈಶ್ವರಪ್ಪ ಏನೇನೋ ನಮ್ಮಪನ ಬಗ್ಗೆ ಮಾತನಾಡಿದ್ದಾನೆ. ನಮ್ಮಪ್ಪ ಮೇಲಿದ್ದಾನೆ ನಮ್ಮ ತಂದೆಯನ್ನ ಭೇಟಿಯಾಗಲಿ. ನಾನು ಆಡುಭಾಷೆಯಲ್ಲಿ ಹೇಳಿದ್ದೇ ಎಂಬ ಈಶ್ವರಪ್ಪ ಹೇಳಿಕೆಗೆ ನಾನು ಕೂಡ ಆಡುಭಾಷೆಯಲ್ಲೇ ಈಶ್ವರಪ್ಪನಿಗೆ ಹೇಳ್ತಿದ್ದೇನೆ. ಬಚ್ಚಲುಬಾಯಿ ಈಶ್ವರಪ್ಪ ಎಂದು ಆಡುಭಾಷೆಯಲ್ಲೇ ಹೇಳಿದ್ದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ಹಾಕಿ ಬಂಧಿಸಬೇಕು: ಆರ್. ಧ್ರುವನಾರಾಯಣ ಹೇಳಿಕೆ

ಸದನದಲ್ಲಿ ಈಶ್ವರಪ್ಪ ಪದ ಬಳಕೆ ಅವರ ಸಂಸ್ಕೃತಿ ತೋರಿಸುತ್ತೆ. ಬಿಜೆಪಿಯವರು ಸ್ವಯಂಘೋಷಿತ ಹುಸಿ ದೇಶ ಭಕ್ತರು. ವಿಧಾನಸಭೆಯಲ್ಲಿ ಡಿಕೆಶಿ ತಂದೆ ಬಗ್ಗೆ ಈಶ್ವರಪ್ಪ ಮಾತಾಡಿದ್ದಾರೆ. ತಂದೆ, ತಾಯಿಗೆ ಗೌರವ ಕೊಡುವುದು ಅಂದರೆ ಹೀಗೇನಾ? ಸಚಿವ ಕೆ.ಎಸ್.ಈಶ್ವರಪ್ಪನವರದ್ದು ಆಚಾರವಿಲ್ಲದ ನಾಲಗೆ. ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ ಎಂದು ಚಾಮರಾಜನಗರದಲ್ಲಿ ಮಾಜಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿಕೆ ನೀಡಿದ್ದಾರೆ.

ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ಹಾಕಿ ಬಂಧಿಸಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದೆಂಬ ಸ್ಲೋಗನ್​. ಇದು ಭಾರತೀಯ ಜನತಾ ಪಕ್ಷದ ಸ್ಲೋಗನ್. ಇದರ ಪ್ರಕಾರ ಬಿಜೆಪಿ ನಾಯಕರು ನಡೆದುಕೊಳ್ಳಬೇಕೆಂದು ಆಗ್ರಹ ಇದೆ. ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು. ಕೆ.ಎಸ್. ಈಶ್ವರಪ್ಪ ಪ್ರಮಾಣವಚನಕ್ಕೆ ಅನುಗುಣವಾಗಿ ನಡೆದುಕೊಂಡಿಲ್ಲ. ಸಚಿವ ಈಶ್ವರಪ್ಪ ಉದ್ಧಟತನದ ಹೇಳಿಕೆ ನೀಡಿದ್ದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಇನ್ನು ಸದನದಲ್ಲಿ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸದನದಲ್ಲಿ ಕೂಗಾಟ ಏನು ಇಲ್ಲ, ಇಲ್ಲಿ ಮಲಗೋದು ಅಷ್ಟೇ. ಹಿಂದೆ 5 ದಿನ ನಾನು ಇಲ್ಲೇ ಅಹೋರಾತ್ರಿ ಧರಣಿ ಮಾಡಿದ್ದೆ. ಅಕ್ರಮ ಗಣಿಗಾರಿಕೆ ಖಂಡಿಸಿ ಧರಣಿ ಮಾಡಿದ್ದೆ. ಬಳಿಕ ಬಿಜೆಪಿಯವರು ಇಲ್ಲಿ ಅಹೋರಾತ್ರಿ ಧರಣಿ ಮಾಡಿದ್ದರು. ಈಗ ನಾವು ಅಹೋರಾತ್ರಿ ಧರಣಿ ಮಾಡ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾಗಿದ್ದಾರೆ. ಅಹೋರಾತ್ರಿ ಧರಣಿ ನಿರತ ಶಾಸಕರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಎಂದು ವಿಧಾನಸಭೆ ಕಾರ್ಯದರ್ಶಿಗೆ ಸ್ಪೀಕರ್ ಕಾಗೇರಿ ಸೂಚಿಸಿದ್ದಾರೆ.

ಬಿಜೆಪಿ ಕಚೇರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

ಇತ್ತ ಬಿಜೆಪಿ ಕಚೇರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಡಿ.ಕೆ. ಶಿವಕುಮಾರ್​ ಬಗ್ಗೆ ಈಶ್ವರಪ್ಪ ಹೇಳಿಕೆ ಖಂಡಿಸಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮುತ್ತಿಗೆ ಹಾಕಲು ಕತ್ತೆ ಕರೆತರಲಾಗಿದೆ. ಈ ವೇಳೆ, ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಡೆಯಲಾಗಿದೆ, ಮುತ್ತಿಗೆ ಯತ್ನ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ಇದನ್ನೂ ಓದಿ: ಭಗವಾಧ್ವಜ ಹೇಳಿಕೆ ಪ್ರಕರಣ: ಕೆಎಸ್ ಈಶ್ವರಪ್ಪ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ಮೊಹಮ್ಮದ್ ನಲಪಾಡ್ ದೂರು

ಇದನ್ನೂ ಓದಿ: 100 ಅಥವಾ 200 ವರ್ಷಕ್ಕೆ ಭಗವಾಧ್ವಜ ರಾಷ್ಟ್ರಧ್ವಜ ಆಗಬಹುದು ಎಂದಿದ್ದೆ; ಹೇಳಿಕೆ ಸಮರ್ಥಿಸಿಕೊಂಡ ಕೆಎಸ್ ಈಶ್ವರಪ್ಪ

Published On - 6:28 pm, Thu, 17 February 22