100 ಅಥವಾ 200 ವರ್ಷಕ್ಕೆ ಭಗವಾಧ್ವಜ ರಾಷ್ಟ್ರಧ್ವಜ ಆಗಬಹುದು ಎಂದಿದ್ದೆ; ಹೇಳಿಕೆ ಸಮರ್ಥಿಸಿಕೊಂಡ ಕೆಎಸ್ ಈಶ್ವರಪ್ಪ

ಧರ್ಮ ಧರ್ಮಗಳ ಮಧ್ಯೆ ಕಾಂಗ್ರೆಸ್​ ಬೆಂಕಿ ಹಚ್ಚುತ್ತಿದೆ. ನಾನು ಸಿಎಂ, ಗೃಹ ಸಚಿವರ ಜೊತೆಗೆ ಮಾತನಾಡುತ್ತೇನೆ. ರಾಷ್ಟ್ರದ್ರೋಹಿ ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸುತ್ತೇನೆ. ಸಿಎಂ ಹಾಗೂ ಗೃಹಸಚಿವರಿಗೆ ಮನವಿ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

100 ಅಥವಾ 200 ವರ್ಷಕ್ಕೆ ಭಗವಾಧ್ವಜ ರಾಷ್ಟ್ರಧ್ವಜ ಆಗಬಹುದು ಎಂದಿದ್ದೆ; ಹೇಳಿಕೆ ಸಮರ್ಥಿಸಿಕೊಂಡ ಕೆಎಸ್ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
Follow us
TV9 Web
| Updated By: ganapathi bhat

Updated on:Feb 16, 2022 | 6:14 PM

ಬೆಂಗಳೂರು: ಕಾಂಗ್ರೆಸ್​ ಹಿಜಾಬ್​ ವಿವಾದ ರಾಜಕೀಯಕ್ಕೆ ಬಳಸಿಕೊಂಡಿದೆ. ಕಾಂಗ್ರೆಸ್​ನವರು ಬರೀ ಸುಳ್ಳುಗಳನ್ನೇ ಹೇಳಿಕೊಂಡು ಬರ್ತಿದ್ದಾರೆ. ಕೇಸರಿ ಶಾಲುಗಳನ್ನ ತರಿಸಿ ಹಂಚಿದ್ದಾರೆಂದು ಡಿಕೆಶಿ ಹೇಳಿದ್ದಾರೆ. ಇಂದು ತಮ್ಮ ಪ್ರತಿಭಟನೆಗೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿದ್ದಾರೆ. ಧ್ವಜದ ನೀತಿ ಸಂಹಿತಿ ಮೀರಿ ಧ್ವಜ ದುರ್ಬಳಕೆ ಮಾಡಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ರಾಷ್ಟ್ರಧ್ವಜವನ್ನ ತಂದು ಅಪಮಾನ ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಹಿಂದೂ, ಮುಸ್ಲಿಂ ವಿದ್ಯಾರ್ಥಿಗಳನ್ನ ಬೇರ್ಪಡಿಸುವ ದುಷ್ಕೃತ್ಯ ಮಾಡಲಾಗುತ್ತಿದೆ. ಸಮಾಜದಲ್ಲಿ ಇಂತಹ ಕುಕೃತ್ಯವನ್ನು ಕಾಂಗ್ರೆಸ್​ ಮಾಡುತ್ತಿದೆ. ಭಗವಾಧ್ವಜದ ಬಗ್ಗೆ ಚರ್ಚೆ ನಡೆಯುತ್ತಿದೆ. 100 ವರ್ಷ ಅಥವಾ 200 ವರ್ಷಕ್ಕೆ ಹಾರಬಹುದು ಎಂದಿದ್ದೆ. ನನ್ನ ಹೇಳಿಕೆಯನ್ನ ಕಾಂಗ್ರೆಸ್​ ದುರುಪಯೋಗಪಡಿಸಿಕೊಂಡಿದೆ. ಧರ್ಮ ಧರ್ಮಗಳ ಮಧ್ಯೆ ಕಾಂಗ್ರೆಸ್​ ಬೆಂಕಿ ಹಚ್ಚುತ್ತಿದೆ. ನಾನು ಸಿಎಂ, ಗೃಹ ಸಚಿವರ ಜೊತೆಗೆ ಮಾತನಾಡುತ್ತೇನೆ. ರಾಷ್ಟ್ರದ್ರೋಹಿ ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸುತ್ತೇನೆ. ಸಿಎಂ ಹಾಗೂ ಗೃಹಸಚಿವರಿಗೆ ಮನವಿ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಬೇಲ್​​ ಮೇಲೆ ಹೊರಗಡೆ ಓಡಾಡುತ್ತಿದ್ದಾರೆ. ಡಿಕೆಶಿ ಯಾವಾಗ ಜೈಲಿಗೆ ಹೋಗುತ್ತಾರೆ ಅವರಿಗೆ ಗೊತ್ತಿಲ್ಲ. ನಾನು ಡಿಕೆಶಿಯಂತೆ ರಾಷ್ಟ್ರದ್ರೋಹಿ ಕೆಲಸವನ್ನ ಮಾಡಿಲ್ಲ. ತುರ್ತುಪರಿಸ್ಥಿತಿಯಲ್ಲಿ ಮಾತ್ರ ಜೈಲಿಗೆ ಹೋಗಿದ್ದೆ. ಭಾರತ್​ ಮಾತಾಕಿ ಜೈ ಎಂದು ನಾನು ಜೈಲಿಗೆ ಹೋಗಿದ್ದೆ. ಡಿಕೆಶಿ ಯಾಕೆ ಜೈಲಿಗೆ ಹೋಗಿದ್ದರು ಎಂದು ಹೇಳಲಿ? ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್​ನವರು ಸದನದಲ್ಲಿ ಇಲ್ಲಸಲ್ಲದ ವಿಚಾರ ಮಾತಾಡ್ತಿದ್ದಾರೆ. ಕಾಂಗ್ರೆಸ್​ನವರು ರಾಷ್ಟ್ರಧ್ವಜವನ್ನು ರಾಜಕಾರಣಕ್ಕೆ ಬಳಸಿಕೊಳ್ತಿದ್ದಾರೆ. ಇಂದು ವಿರೋಧ ಪಕ್ಷವಾಗಿರಲು ಕಾಂಗ್ರೆಸ್​ ವಿಫಲವಾಗಿದೆ. ಇಂತಹ ವರ್ತನೆಗಳಿಂದ ಕಾಂಗ್ರೆಸ್​ ದೇಶದಲ್ಲಿ ನೆಲಕಚ್ಚುತ್ತಿದೆ. ರಾಜಕಾರಣಕ್ಕೆ ರಾಷ್ಟ್ರಧ್ವಜ ಬಳಸಿಕೊಂಡಿದ್ದು ಖಂಡನೀಯ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ನವರು ರಾಷ್ಟ್ರಧ್ವಜವನ್ನು ಧರಣಿಗೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್​​ನವರು ರಾಜಕಾರಣಕ್ಕೆ ಧ್ವಜ ಬಳಸಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಮನಸ್ಸಿಗೆ ಬಂದಂತೆ ಧ್ವಜ ಬಳಸಿಕೊಂಡಿದ್ದಾರೆ. ಕಾಂಗ್ರೆಸ್​​ನವರು ಯಾವಾಗಿಂದ ಧ್ವಜದ ಬಗ್ಗೆ ಗೌರವ ಬಂತು? ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್​ ವ್ಯಂಗ್ಯವಾಡಿದ್ದಾರೆ.

ಪರಿಷತ್​​ನಲ್ಲಿ ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ತೀರ್ಮಾನ

ಪರಿಷತ್​​ನಲ್ಲಿ ನಾಳೆ (ಫೆಬ್ರವರಿ 17) ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ನಾಳೆ ಸಂಜೆ ಅಹೋರಾತ್ರಿ ಧರಣಿಗೆ ‘ಕೈ’​ ಸದಸ್ಯರ ತೀರ್ಮಾನಿಸಿಕೊಂಡಿದ್ದಾರೆ. ನಾಳೆ ಬೆಳಗ್ಗೆ 10.30ರವರೆಗೆ ಕಾದು ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲಾಗದಿದ್ರೆ ಧರಣಿಗೆ ತೀರ್ಮಾನ ಮಾಡಲಾಗಿದೆ, ನಾಳೆ ಸಂಜೆ ಅಹೋರಾತ್ರಿ ಧರಣಿಗೆ ‘ಕೈ’​ ಸದಸ್ಯರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು; ಸಂಪುಟದಿಂದ ಕೈಬಿಡಬೇಕು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಗ್ರಹ

ಇದನ್ನೂ ಓದಿ: ಸಂಧಾನ ಸಭೆ ವಿಫಲ: ವಿಧಾನಸಭೆಯಲ್ಲಿ ಧರಣಿ ಮುಂದುವರಿಸಲು ವಿಪಕ್ಷ ಕಾಂಗ್ರೆಸ್ ನಿರ್ಧಾರ

Published On - 6:12 pm, Wed, 16 February 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ