ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಡಿ: ಬೆಂಗಳೂರು ಪೊಲೀಸರಿಗೆ ಹೈಕೋರ್ಟ್ ಸೂಚನೆ

| Updated By: ವಿವೇಕ ಬಿರಾದಾರ

Updated on: Sep 19, 2023 | 1:41 PM

ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 20 ರ ವಿಚಾರಣೆವರೆಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿಲ್ಲ. ಈ ಪ್ರಕರಣ ಸಾರ್ವಜನಿಕರಿಗೆ ಲಭ್ಯವಿರುವ ಕಾರಣ ಕಸ್ಟಡಿ ವಿಚಾರಣೆ ಕೂಡ ಅಗತ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಡಿ: ಬೆಂಗಳೂರು ಪೊಲೀಸರಿಗೆ ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು ಸೆ.19: ಹಿರಿಯ ಪತ್ರಕರ್ತ ಸುಧೀರ್ ಚೌಧರಿ (Sudhir Chaudhary) ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ (High Court) ಶುಕ್ರವಾರ ಬೆಂಗಳೂರು (Bengaluru) ನಗರ ಪೊಲೀಸರಿಗೆ ಮೌಖಿಕವಾಗಿ ಸೂಚಿಸಿದೆ. ಆಜ್ ತಕ್ ನ್ಯೂಸ್ ಚಾನೆಲ್ ಮತ್ತು ಟಿವಿ ಟುಡೇ ನೆಟ್‌ವರ್ಕ್ ಲಿಮಿಟೆಡ್‌ನ ಆ್ಯಂಕರ್ ಸುಧೀರ್​ ಚೌಧರಿ ವಿರುದ್ಧ ಸೆಪ್ಟೆಂಬರ್ 12 ರಂದು, ದ್ವೇಷವನ್ನು ಉತ್ತೇಜಿಸುವ ಮಾತುಗಳು ಮತ್ತು ತಪ್ಪು ಮಾಹಿತಿ ರವಾನೆ ಎಂದು ಶೇಷಾದ್ರಿಪುರಂ ಪೊಲೀಸ್​​ ಠಾಣೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ಅವರು ದೂರು ದಾಖಲಿಸಿದ್ದರು.

ಸೆಪ್ಟೆಂಬರ್ 11 ರಂದು ಆಜ್ ತಕ್‌ನಲ್ಲಿ ‘ಬ್ಲ್ಯಾಕ್ & ವೈಟ್’ ಶೀರ್ಷಿಕೆ ಅಡಿಯಲ್ಲಿ ಪ್ರಸಾರವಾದ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮದಲ್ಲಿ ಸುನಿಲ್​​ ಚೌಧರಿ ಅವರು “ಟ್ಯಾಕ್ಸಿಗಳು, ಗೂಡ್ಸ್​​ ವಾಹನಗಳು ಮತ್ತು ಆಟೋರಿಕ್ಷಾಗಳನ್ನು ಖರೀದಿಸುವ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಬ್ಯಾಂಕ್ 50 ಪ್ರತಿಶತ ಸಬ್ಸಿಡಿಯಲ್ಲಿ, ಗರಿಷ್ಠ 3 ಲಕ್ಷದ ವರೆಗೆ ಸಾಲ ನೀಡುತ್ತದೆ. ಅಲ್ಲದೇ ಈ ಯೋಜನೆಯು ಹಿಂದೂಯೇತರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದರು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತಪವಾಗಿವೆ ಎಂದು ದೂರಿನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಆದೇಶ ಪ್ರಶ್ನಿಸಿ ಮೇಲ್ಮನವಿ: ಹೈಕೋರ್ಟ್​ನಲ್ಲಿ ಭಾನುವಾರವೂ ನಡೆದ ವಿಶೇಷ ಕಲಾಪ

ಸದ್ಯ ಈ ಯೋಜನೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ದಿನಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯವನ್ನು ಯೋಜನೆಯಡಿಯಲ್ಲಿ ತರಲು ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದರು. ಈ ಸಂಬಂಧ ಸುನೀಲ್​ ಚೌದರಿ ವಿರುದ್ಧ ಐಪಿಸಿಯ ಸೆಕ್ಷನ್ 153 ಎ ಮತ್ತು 505 ರ ಅಡಿಯಲ್ಲಿ ಎಫ್​ಐ​​​ಆರ್ ದಾಖಲಾಗಿದೆ.

ಈ ಎಫ್‌ಐಆರ್ ಅನ್ನು ಪ್ರಶ್ನಿಸಿ ಸುನಿಲ್​ ಚೌಧರಿ ಮತ್ತು ಇತರರು ಹೈಕೋರ್ಟ್​ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಸೆಪ್ಟೆಂಬರ್ 20 ರ ವಿಚಾರಣೆವರೆಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬೇಡ. ಈ ಪ್ರಕರಣ ಎಲ್ಲವೂ ಸಾರ್ವಜನಿಕರಿಗೆ ಲಭ್ಯವಿರುವ ಕಾರಣ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಮೌಖಿಕವಾಗಿ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ