ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಫೋಟೋ ಲೊಕೇಶನ್ ಮೂಲಕ ನಡೀತಿದ್ದ ನಶೆ ಏರಿಸೋ ಆಟಕ್ಕೆ ಫೋಟೋ ಫಿನಿಷ್ ಕೊಟ್ಟ ಸಿಸಿಬಿ

ಮರದಡಿಯಲ್ಲಿ ಕಿಕ್ಕೇರಿಸುವ ಸಿಂಥೆಟಿಕ್ ಡ್ರಗ್ಸ್ ಬಚಿಟ್ಟು ಅದರ ಫೋಟೋ ಮತ್ತು ಲೊಕೇಶನ್ನನ್ನು ಗ್ರಾಹಕರಿಗೆ ಕಳಿಸಲಾಗುತ್ತಿತ್ತು. ಡ್ರಗ್ಸ್ ಪೆಡ್ಲರ್ ಕೊಟ್ಟ ಸುಳಿವಿನ ಆಧಾರದ ಮೇಲೆ ಗ್ರಾಹಕರು ಫೋಟೋದಲ್ಲಿದ್ದ ಲೊಕೇಶ್ ಹುಡುಕಿ ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು.

ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಫೋಟೋ ಲೊಕೇಶನ್ ಮೂಲಕ ನಡೀತಿದ್ದ ನಶೆ ಏರಿಸೋ ಆಟಕ್ಕೆ ಫೋಟೋ ಫಿನಿಷ್ ಕೊಟ್ಟ ಸಿಸಿಬಿ
ಮಾದಕ ವಸ್ತುಗಳು
Follow us
TV9 Web
| Updated By: ಆಯೇಷಾ ಬಾನು

Updated on: Dec 10, 2021 | 8:56 AM

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಡ್ರಗ್ಸ್ ಮಾರಾಟಕ್ಕಾಗಿ, ಗ್ರಾಹಕರನ್ನು ತಲುಪಲು ಪೆಡ್ಲರ್ಗಳು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಡ್ರಗ್ಸ್ ಮಾರಾಟ ಮಾಡಲು ದಿನಸಿ ಪೂರೈಕೆ ಸೋಗಿನಲ್ಲಿ ತಮ್ಮ ಗ್ರಾಹಕರ ಮನೆಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 6 ಮಂದಿಯನ್ನು ಸಿಸಿಬಿ ತನ್ನ ಬಲೆಗೆ ಬೀಳಿಸಿತ್ತು. ಈಗ ಇದೇ ರೀತಿಯ ಮತ್ತೊಂದು ಹೊಸ ರೀತಿಯ ಪ್ಲಾನ್ ಬಯಲಾಗಿದೆ.

ಡ್ರಗ್ಸ್ ಮಾರಾಟ ಮಾಡಲು ಪೆಡ್ಲರ್ಗಳು ಕಂಡುಕೊಂಡಿದ್ದ ಹೊಸ ಮಾರ್ಗವನ್ನು ಸಿಸಿಬಿ ಪತ್ತೆ ಮಾಡಿದೆ. ಮಡಿವಾಳ ಬಳಿ ಐವರು ಡ್ರಗ್ಸ್ ಮಾರಾಟ ಮಾಡಲು ಯತ್ನಿಸಿದವರನ್ನ ಡಿಸಂಬರ್ 4 ರಂದು ಸಿಸಿಬಿ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದ ತಂಡ ಬಂಧಿಸಿತ್ತು. ಸದ್ಯ ವಿಚಾರಣೆ ವೇಳೆ ರಾತ್ರಿಯಲ್ಲಿ ನಡೆಯುತ್ತಿದ್ದ ಮತ್ತೇರಿಸುವ ಡ್ರಗ್ ಡೀಲ್ ಆಟದ ಹೊಸ ಮಾರ್ಗ ಬಯಲಾಗಿದೆ. ಬೆಳಗ್ಗೆ ಸಮಯದಲ್ಲಿ ಡ್ರಗ್ಸ್ ಮಾರಾಟ ಮಾಡಿದ್ರೆ ಸಿಕ್ಕಿ ಬೀಳುತ್ತೇವೆಂದು ಖಾಕಿ ಕಣ್ತಪ್ಪಿಸಲು ಡ್ರಗ್ ಪೆಡ್ಲರ್ಗಳು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.

ಮರದಡಿಯಲ್ಲಿ ಕಿಕ್ಕೇರಿಸುವ ಸಿಂಥೆಟಿಕ್ ಡ್ರಗ್ಸ್ ಬಚಿಟ್ಟು ಅದರ ಫೋಟೋ ಮತ್ತು ಲೊಕೇಶನ್ನನ್ನು ಗ್ರಾಹಕರಿಗೆ ಕಳಿಸಲಾಗುತ್ತಿತ್ತು. ಡ್ರಗ್ಸ್ ಪೆಡ್ಲರ್ ಕೊಟ್ಟ ಸುಳಿವಿನ ಆಧಾರದ ಮೇಲೆ ಗ್ರಾಹಕರು ಫೋಟೋದಲ್ಲಿದ್ದ ಲೊಕೇಶ್ ಹುಡುಕಿ ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಈ ರೀತಿ ಮಾಡುವುದರಿಂದ ಗ್ರಾಹಕನಿಗೆ ಡ್ರಗ್ಸ್ ನೀಡುತ್ತಿರುವುದು ಯಾರು ಹಾಗೂ ಡ್ರಗ್ಸ್ ಖರೀದಿಸುತ್ತಿರುವುದು ಯಾರು ಅಂತನೇ ಗೊತ್ತಾಗುತ್ತಿರಲಿಲ್ಲ. ಈ ಟೆಕ್ನಿಕ್ ಎಲ್ಲರಿಗೂ ಸೇಫ್. ಸದ್ಯ ಸಿಸಿಬಿ ಇದನ್ನು ಬಯಲು ಮಾಡಿದೆ.

ಸುಳಿವು ಬಿಟ್ಟು ಕೊಡದೆ ನಡೆಯುತ್ತೆ ಡ್ರಗ್ಸ್ ಡೀಲ್ ಡ್ರಗ್ ಡೀಲ್ ಹೇಗೆಲ್ಲಾ ನಡೆಯುತ್ತೆ ಅನ್ನೋದನ್ನ ನೋಡಿದ್ರೆ ಶಾಕ್ ಆಗ್ತಿರ. ಬೆಂಗಳೂರಿನಲ್ಲಿದ್ದ ಡ್ರಗ್ಸ್ ಮಾರಾಟ ಮಾಡುವವರಿಗೆ ಬೇರೆ ಬೇರೆ ರಾಜ್ಯದಿಂದ ಡ್ರಗ್ಸ್ ಸಾಗಿಸಲು ಡೈರೆಕ್ಷನ್ ಬರ್ತಿತ್ತು. ಇವರಿಗೆ ಡೈರೆಕ್ಷನ್ ಕೊಡ್ತಾ ಇದ್ದದ್ದು ಯಾರು ಅನ್ನೋದೆ ಇವರಿಗೆ ಗೊತ್ತಾಗುತ್ತಿರಲಿಲ್ಲ. ಡ್ರಗ್ಸ್ ಖರೀದಿ ಮಾಡುವವನಿಗೂ ಕಳಿಸುವವನು ಯಾರು ಅನ್ನೋದು ಗೊತ್ತಾಗೋದಿಲ್ಲ. ಖರೀದಿ ಮಾಡುವವನಿಗೆ ನೇರವಾಗಿ ಡ್ರಗ್ಸ್ ನೀಡ್ತಾ ಇರಲಿಲ್ಲ. ಎಲ್ಲವೂ ನಡಿತಾ ಇದ್ದದ್ದು ಒಂದು ಫೋಟೋ ಮತ್ತು ಲೊಕೇಶನ್ ಮೂಲಕ. ಮಾತುಕತೆ ನಡಿತಾ ಇದ್ದದ್ದು ಕೂಡ ವಾಟ್ಸ್ ಆ್ಯಪ್ ಕಾಲ್, ಇಂಟರ್ನೆಟ್ ಕಾಲ್ ಮೂಲಕ. ಖರೀದಿದಾರ ಆನ್ ಲೈನ್ ಮೂಲಕ ಬೇಕಾದ ಡ್ರಗ್ಸ್ ಬುಕ್ ಮಾಡ್ತಿದ್ದ. ಸಪ್ಲೆ ಗಿಂತ ಮೊದಲು ಫೋನ್ ಪೇ ಮೂಲಕ ಹಣ ಹಾಕ್ತಿದ್ದ. ಹಣ ಕಳಿಸಿದ ಖಾತೆ ಪರಿಶೀಲಿಸಿದ್ರೆ ಅದು ಮತ್ಯಾರದ್ದೊ ಹೆಸರಿನಲ್ಲಿರುತ್ತೆ. ಹಣ ಬರ್ತಾ ಇದ್ದಂತೆ ಬೆಂಗಳೂರಿನ ಪೆಡ್ಲರ್ ಗೆ ಪಾರ್ಸಲ್ ಬರ್ತಾ ಇತ್ತು. ಅದನ್ನ ಒಂದು ಮರದ ಕೆಳಗೆ ಇಟ್ಟು ಫೋಟೋ ತೆಗೆದುಕೊಳ್ತಿದ್ರು.

ಡ್ರಗ್ಸ್ ಮಾರಾಟ ಮಾಡುವವರಿಗೆ ಪ್ರತಿ‌ ತಿಂಗಳು 25 ಸಾವಿರ ಸಂಬಳ ಖಾತೆಗೆ ಬರ್ತಾ ಇತ್ತು. ಮೊದಲಿಗೆ ಡ್ರಗ್ಸ್ ಇಟ್ಟ ಲೊಕೇಶನ್ ಮತ್ತು ಫೋಟೋ ಬೇರೆ ರಾಜ್ಯದಲ್ಲಿರುವ ಪೆಡ್ಲರ್ಗೆ ಕಳುಹಿಸುತ್ತಿದ್ರು ಇಷ್ಟು ಮಾಡಿ ಅವರು ಅಲ್ಲಿಂದ ಹೊರಡ್ತಿದ್ರು. ಅದೇ ಫೋಟೊ ಮತ್ತು ಲೊಕೇಶನ್ನನ್ನು ಪೆಡ್ಲರ್ ಡ್ರಗ್ಸ್ ಖರೀದಿ ಮಾಡಿದವನಿಗೆ ಕಳಿಸುತ್ತಿದ್ದ. ಆತ ಮಧ್ಯ ರಾತ್ರಿ 11 ರಿಂದ 12 ಗಂಟೆಗೆ ಅಲ್ಲಿ ಬಂದು ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದ. ಡ್ರಗ್ಸ್ ಖರೀದಿ ಮಾಡುವವನ ಮೂಲಕ ಖಾಕಿ ಲಾಕ್ ಮಡ್ತಾರೆ ಎಂದು ಈ ಪ್ಲಾನ್ ಮಾಡಿಕೊಂಡಿದ್ದರು.

ಇದನ್ನೂ ಓದಿ: ಸೀಕ್ರೆಟ್​ ಆಗಿ ಹಸೆಮಣೆ ಏರಿದ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಬಾಲಿವುಡ್​ ಸೆಲೆಬ್ರಿಟಿಗಳು ವಿಶ್​ ಮಾಡಿದ್ದು ಹೇಗೆ?