ಬೆಂಗಳೂರು; ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ, ಆರೋಪಿ ಅರೆಸ್ಟ್

| Updated By: ಆಯೇಷಾ ಬಾನು

Updated on: Nov 11, 2023 | 11:05 AM

ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತರು ಮದ್ಯ ಪಾರ್ಟಿ ಮಾಡಲೆಂದು ನಿರ್ಜನ ಪ್ರದೇಶಕ್ಕೆ ಹೋಗಿ ಮದ್ಯ ಸೇವನೆ ಮಾಡುವಾಗ ಇಬ್ಬರ ನಡುವೆ ಜಗಳ ಶುರುವಾಗಿದ್ದು ಮಾತಿಗೆ ಮಾತು ಬೆಳೆದು ಮಾದೇಶ ಎಂಬ ಆರೋಪಿ ತನ್ನ ಕಾರಿನಲ್ಲಿದ್ದ ಚಾಕುವನ್ನು ತೆಗೆದು ಸ್ನೇಹಿತ ರಾಜ್ ಕುಮಾರ್​ಗೆ ಚುಚ್ಚಿದ್ದ. ಬಳಿಕ ತಾನೇ ಆಸ್ಪತ್ರೆಗೆ ಸೇರಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು; ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ, ಆರೋಪಿ ಅರೆಸ್ಟ್
ಅಪರಾಧ
Image Credit source: Indian Express
Follow us on

ಬೆಂಗಳೂರು, ನ.11: ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ (Murder) ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೆಳೆಯನಿಗೆ (Friends) ಚಾಕು ಇರಿದು ನಾಟಕವಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದೇಶ್ ಬಂಧಿತ ಆರೋಪಿ. ರಾಜಕುಮಾರ್ ಕೊಲೆಯಾದ ಸ್ನೇಹಿತ. ಇದೇ ತಿಂಗಳ 5ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಮಾದೇಶ ಮತ್ತು ಮೃತ ರಾಜ್ ಕುಮಾರ್ ಇಬ್ಬರೂ ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದರು. ನ.05ರಂದು ಎಣ್ಣೆ ಹೊಡೆಯಲೆಂದು ಮೀಟ್ ಆಗಿ ಅಂಗಡಿಯಲ್ಲಿ ಮದ್ಯ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಇವರಿಬ್ಬರ ನಡುವೆ ಶುರುವಾದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ರಾಜಕುಮಾರ್ ನಿಂದಿಸಿದ್ದ. ಈ ವೇಳೆ ಕೋಪಗೊಂಡ ಮಾದೇಶ ತನ್ನ ಕಾರ್ ನಲ್ಲಿದ್ದ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿದ್ದ. ಚಾಕುವಿನಿಂದ ಚುಚ್ಚುತ್ತಿದ್ದಂತೆ ಗಾಬರಿಗೊಂಡು ತಾನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೋಡ ಕೊಡಿಸಿದ್ದಾನೆ. ಬಳಿಕ ರಾಜ್ ಕುಮಾರ್ ಸಂಬಂಧಿಕರಿಗೆ ಕರೆ ಮಾಡಿ ಯಾರೋ ಅಪರಿಚಿತರು ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. ಹೀಗೆ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ. ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರಾಜ್ ಕುಮಾರ್ ಮೃತಪಟ್ಟಿದ್ದು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾದೇಶ ಪರಾರಿಯಾಗಿದ್ದ. ಸದ್ಯ ಕೊಲೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ವೇಳೆ ಅಸಲಿ ಸಂಗತಿ ಬಯಲಾಗಿದೆ. ನಾಪತ್ತೆಯಾಗಿದ್ದ ಮಾದೇಶನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಪೊಲೀಸರ ದಾಳಿ: ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ, ರಕ್ತಚಂದನ ವಶ; ಇಬ್ಬರು ಅರೆಸ್ಟ್​

ರೌಡಿಶೀಟರ್ ಕೊಂದ 8 ಆರೋಪಿಗಳು ಅರೆಸ್ಟ್

ಬೆಂಗಳೂರಿನಲ್ಲಿ ರೌಡಿಶೀಟರ್ ಸಹದೇವ್ ಬರ್ಬರ ಹತ್ಯೆ ಪ್ರಕರಣ ಸಂಬಂಧ ವಿನಯ್ ಸೇರಿ 8 ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗಣೇಶ ಹಬ್ಬದಿಂದಲೂ ಗಲಾಟೆ ಮಾಡಿಕೊಳ್ಳುತ್ತಿದ್ದ ಎರಡು ಗ್ಯಾಂಗ್ ಗಣೇಶ ಮೂರ್ತಿ ಬಿಡುವ ವಿಚಾರಕ್ಕೆ ಮತ್ತೆ ಗಲಾಟೆ ಮಾಡಿಕೊಂಡಿದ್ದರು. ಸಹದೇವ್, ವಿನಯ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ವಿನಯ್ ಮೇಲೆ ಸಹದೇವ್ ಹಲ್ಲೆ ಮಾಡಿದ್ದ. ಬಳಿಕ ಆರೋಪಿ ವಿನಯ್ ತಮ್ಮನ ಮೇಲೂ ಹಲ್ಲೆಗೈದಿದ್ದ. ಆಗ ಸಹದೇವ್ ಮತ್ತು ವಿನಯ್ ಗ್ಯಾಂಗ್ ಕೈಕೈ ಮಿಲಾಯಿಸಿದ್ದರು. ಗಲಾಟೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇಷ್ಟೆಲ್ಲ ಆದ ಬಳಿಕ ನವೆಂಬರ್ 8ರಂದು ರಾತ್ರಿ ಟೀ ಕುಡಿಯಲು ಬಂದಿದ್ದ ಸಹದೇವ್​ ಜೊತೆ ಕ್ಷುಲ್ಲಕ ವಿಚಾರಕ್ಕೆ ವಿನಯ್ ಕಿರಿಕ್ ಮಾಡಿಕೊಂಡಿದ್ದ. ಮಾರಕಾಸ್ತ್ರಗಳಿಂದ ವಿನಯ್ ಗ್ಯಾಂಗ್​ನಿಂದ ಸಹದೇವ್ ಮೇಲೆ ಹಲ್ಲೆ ನಡೆದಿತ್ತು. ಈ ಪರಿಣಾಮ ರೌಡಿಶೀಟರ್ ಸಹದೇವ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ. ಸದ್ಯ ಈ ಘಟನೆ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ