ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನ.16ರಿಂದ ಮೊಬೈಲ್ ಕ್ಯೂಆರ್ ಮೂಲಕ ಟಿಕೆಟ್ ಖರೀದಿಗೆ ರಿಯಾಯ್ತಿ
ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಪರದಾಡುವ ಪ್ರಯಾಣಿಕರು ಮನೆ, ಕಚೇರಿ ಅಥವಾ ತಾವಿದ್ದ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್ ಪಡೆಯಬುದು. ಇದರಿಂದ ಸಮಯವೂ ಉಳಿತಾಯವಾಗಲಿದೆ ಹಾಗೂ ಟೋಕನ್ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿ ಕೂಡ ಸಿಗಲಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು, ನ.11: ನಮ್ಮ ಮೆಟ್ರೋಗೆ (Namma Metro) ಅವಲಂಬಿತರಾಗಿರುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನ ಮೆಟ್ರೋ ನಿಲ್ದಾಣದ ಒಳಗೆ ಪ್ರತಿ ಬಾರಿಯೂ ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಂತು ಸಮಯ ಹರಣವಾಗುತ್ತಿದ್ದ ಬಗ್ಗೆ ಬೇಸರ ಹೊರ ಹಾಕುತ್ತಿದ್ದರು. ಸದ್ಯ ಈಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ (BMRCL) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಮೆಟ್ರೋ ಪ್ರಯಾಣಿಕರು ಟಿಕೆಟ್ಗಾಗಿ ಕ್ಯೂ ನಿಲ್ಲಬೇಕಿಲ್ಲ. ವಾಟ್ಸಪ್, ಯಾತ್ರಾ QR ಕೋಡ್ ಬಳಸಿ ಟಿಕೆಟ್ ಖರೀದಿಸಬಹುದು. ಜೊತೆಗೆ ಮೊಬೈಲ್ QR ಟಿಕೆಟ್‌ಗಳು ಟೋಕನ್ ದರಕ್ಕಿಂತ 5% ರಿಯಾಯ್ತಿ ಇರಲಿದೆ. ಇದೇ ನವೆಂಬರ್ 16ರಿಂದ ಈ ಹೊಸ ಸೌಲಭ್ಯ ಸಿಗಲಿದೆ.
ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಪರದಾಡುವ ಪ್ರಯಾಣಿಕರು ಮನೆ, ಕಚೇರಿ ಅಥವಾ ತಾವಿದ್ದ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್ ಪಡೆಯಬುದು. ಇದರಿಂದ ಸಮಯವೂ ಉಳಿತಾಯವಾಗಲಿದೆ ಹಾಗೂ ಟೋಕನ್ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿ ಕೂಡ ಸಿಗಲಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವೆಂಬರ್ 16ರಿಂದಲೇ ಮೊಬೈಲ್ ಕ್ಯೂಆರ್ ಕೋಡ್ ಗ್ರೂಪ್ ಟಿಕೆಟ್‌ಗಳನ್ನು ಪರಿಚಯಿಸಲು ಬಿಎಮ್ಆರ್ಸಿಎಲ್ ಮುಂದಾಗಿದೆ.
ಪ್ರಸ್ತುತ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್ ನೀಡಲಾಗುತ್ತಿದೆ. ಗುಂಪು ಟಿಕೆಟ್‌ಗಳನ್ನೂ ಕ್ಯೂಆರ್ ಕೋಡ್ ಮೂಲಕ ನೀಡಬೇಕು ಎಂದು ಪ್ರಯಾಣಿಕರು ಈ ಹಿಂದೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿಗೆ ತರಲಾಗಿದೆ. ಈ ಟಿಕೆಟ್‌ಗಳು ಟೋಕನ್ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿಯನ್ನು ಹೊಂದಿರುತ್ತವೆ. ನ.16 ರಿಂದ ಒಮ್ಮೆ ಆರು ಜನರ ಗುಂಪು ಪ್ರಯಾಣಿಸಲು ಅನುಕೂಲವಾಗುವಂತೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳ ಪರಿಚಯ ಮಾಡಲಾಗುತ್ತಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಬಿಎಂಟಿಸಿ ಕಲೆಕ್ಷನ್ಗೆ ಹೊಡೆತ
ಕ್ಯೂರ್ ಟಿಕೆಟ್ ಪಡೆಯುವುದು ಹೇಗೆ, ಅನುಕೂಲತೆಗಳೇನು?
- ನಿಮ್ಮ ಮೊಬೈಲ್ ಅಪ್ಲಿಕೇಶನ್ ನಮ್ಮ ಮೆಟ್ರೋ, ಪೇಟಿಯಂ, ವಾಟ್ಸಾಪ್ ಮತ್ತು ಯಾತ್ರಾ ಮೂಲಕ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಪಡೆಯಬಹುದು.
- ಒಂದು ಬಾರಿ ಆರು ಜನರ ಗುಂಪು ಟಿಕೆಟ್ ಪಡೆದರೆ ಟೋಕನ್ ದರಕ್ಕಿಂತ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು.
- ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಪ್ರಯಾಣಿಕರ ಸಂಖ್ಯೆ, ಎನ್‌ಕ್ರಿಪ್ಟ್ ಮಾಡಿದ ಒಂದು ಕ್ಯೂಆರ್ ಟಿಕೆಟ್ ಅನ್ನು ಸ್ವೀಕರಿಸುತ್ತಾರೆ.
- ನಂತ್ರ ಬಳಕೆಗಾಗಿ, ಈ ಕ್ಯೂಆರ್ ಟಿಕೆಟ್ ಅನ್ನು ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ಕಟ್ಟಿ ಎಫ್ ಸಿ ಗೇಟ್ ಗಳಲ್ಲಿ ಸ್ಕ್ಯಾನ್ ಮಾಡಬೇಕು.
- ಇದ್ರಿಂದಾಗಿ ಟಿಕೆಟ್ ಕೌಂಟರ್ ಗಳಲ್ಲಿ ಟೋಕನ್‌ಗಳನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ
- ಪ್ರಯಾಣಿಕರು ತಮ್ಮ ಅನೂಕೂಲಕ್ಕೆ ತಕ್ಕಂತೆ ಮನೆ ಕಚೇರಿಯಿಂದ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದು
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ