AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ಪರೇಡ್ ವೇಳೆ ಏಕಾಏಕಿ ಸಿಎಂ ಬಳಿ ನುಗ್ಗಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಖಾಕಿ

ಗಣರಾಜ್ಯೋತ್ಸವ ಪರೇಡ್ ವೇಳೆ ಮೈಸೂರು ಮೂಲದ ಪರಶುರಾಮ್ ಎಂಬ ವ್ಯಕ್ತಿ ಕರ ಪತ್ರ ಹಿಡಿದು ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ವೇಳೆ ಏಕಾಏಕಿ ಸಿಎಂ ಬಳಿ ನುಗ್ಗಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಖಾಕಿ
ಸಿಎಂ ಸಿದ್ದರಾಮಯ್ಯ
Anil Kalkere
| Edited By: |

Updated on:Jan 26, 2024 | 12:27 PM

Share

ಬೆಂಗಳೂರು, ಜ.26: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ವೇಳೆ ಅಪರಿಚಿತ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ (Siddaramaiah) ಬಳಿ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ಮೂಲದ ಪರಶುರಾಮ್​ ಕರ ಪತ್ರ ಹಿಡಿದು ಸಿಎಂ ಬಳಿ ನುಗ್ಗಲು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಬಂದಿದ್ದ ಪರಶುರಾಮ್ ಅವರನ್ನು ಸಿಎಂ ಬಳಿ ಬಿಡದಿದ್ದಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ತಮ್ಮ KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಪರಶುರಾಮ್ ಬಂದಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗಲು ಪೊಲೀಸರು ಬಿಡದಿದ್ದಾಗ ಪರಶುರಾಮ್ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲಿ ಮನವಿ ಪತ್ರ ಪ್ರದರ್ಶಿಸಿದ್ದಾರೆ. ಪರಶುರಾಮ್ ಮನವಿ ಪತ್ರ ಪ್ರದರ್ಶಿಸುತ್ತಿದ್ದ ಹಾಗೇ ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: Republic Day 2024: ಗಣರಾಜ್ಯೋತ್ಸವ: ಭಗವಂತ ರಾಮನಿಗೆ ಪ್ರಿಯವಾದ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ

ಈ ಬಾರಿ 132 ಸಾಧಕರು ಪದ್ಮ ಪ್ರಶಸ್ತಿಗಳಿಗೆ ಆಯ್ಕೆ

ಗಣರಾಜ್ಯೋತ್ಸವದ ಮುನ್ನಾ ದಿನ ರಾಷ್ಟ್ರಪತಿಗಳು ಪದ್ಮಪ್ರಶ್ತಿಗಳನ್ನು ಘೋಷಿಸಿದ್ದಾರೆ. 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಸೇರಿದಂತೆ ಒಟ್ಟು 132 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಈ ಪೈಕಿ ಕರುನಾಡಿನ 9 ಸಾಧಕರಿಗೆ ಪದ್ಮಶ್ರೀ ಲಭಿಸಿದೆ. ಇನ್ನು ಕರ್ನಾಟಕದ 9 ಸಾಧಕರಿಗೆ ಪದ್ಮಶ್ರೀ, ಒಬ್ಬರಿಗೆ ಪದ್ಮಭೂಷಣ ಸಿಕ್ಕಿದೆ.

ಕರ್ನಾಟಕದ ಪದ್ಮಶ್ರೀ ಪುರಸ್ಕೃತರು?

  • ಸೋಮಣ್ಣ – ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ
  • ಪ್ರೇಮಾ ಧನರಾಜ್ – ಪ್ಲಾಸ್ಟಿಕ್ ಸರ್ಜನ್ & ಸಾಮಾಜಿಕ ಕಾರ್ಯಕರ್ತೆ
  • ರೋಹನ್‌ ಬೋಪಣ್ಣ-ಕ್ರೀಡೆ
  • ಅನುಪಮಾ ಹೊಸಕೆರೆ-ಕಲೆ
  • ಶ್ರೀಧರ್ ಮಾಕಂ ಕೃಷ್ಣಮೂರ್ತಿ-ಸಾಹಿತ್ಯ & ಶಿಕ್ಷಣ
  • ಕೆ.ಎಸ್‌. ರಾಜಣ್ಣ- ಸಮಾಜ ಸೇವೆ
  • ಚಂದ್ರಶೇಖರ್ ಸಿ ರಾಜಣ್ಣಾಚಾರ್-ಮೆಡಿಸಿನ್‌
  • ಶಶಿ ಸೋನಿ- ವ್ಯಾಪಾರ & ಉದ್ಯಮ

ಪದ್ಮವಿಭೂಷಣ (ಕರ್ನಾಟಕ)

ಇನ್ನು ಕರ್ನಾಟಕದ ಸೀತಾರಾಜಮ್ ಜಿಂದಾಲ್ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:46 am, Fri, 26 January 24

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್