ಈಡಿಗ ಸಮುದಾಯದ ನಾಯಕರ ಕಡೆಗಣನೆ: ಹೊಸ ಪಕ್ಷ ಸ್ಥಾಪನೆ ಎಚ್ಚರಿಕೆ ನೀಡಿದ ಪ್ರಣವಾನಂದ ಶ್ರೀ

ಕರ್ನಾಟಕ ರಾಜ್ಯದಲ್ಲಿ ಈಡಿಗ ಸಮುದಾಯದ ನಾಯಕರನ್ನ ಷಡ್ಯಂತ್ರದಿಂದ ಮುಗಿಸಿದ್ದಾರೆ. ಮೂರು ಪಕ್ಷಗಳಿಂದ ಅನ್ಯಾಯವಾದರೆ ಹೊಸ ಪಕ್ಷ ಸ್ಥಾಪನೆ ಮಾಡಲಾಗುವುದು ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮಿಜಿ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​​ ನಾಯಕರಿಗೆ ಎಚ್ಚರಿಕೆ ನೀಡಿದರು. ಅಲ್ಲದೆ, ಸಪ್ಟೆಂಬರ್ 9 ರಂದು ಅರಮನೆ ಮೈದಾನದಲ್ಲಿ ಸಮಾನ ಮನಸ್ಕರ ವಿಶೇಷ ಸಭೆ ಆಯೋಜಿಸಿದೆ.

ಈಡಿಗ ಸಮುದಾಯದ ನಾಯಕರ ಕಡೆಗಣನೆ: ಹೊಸ ಪಕ್ಷ ಸ್ಥಾಪನೆ ಎಚ್ಚರಿಕೆ ನೀಡಿದ ಪ್ರಣವಾನಂದ ಶ್ರೀ
ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ
Follow us
Vinay Kashappanavar
| Updated By: Rakesh Nayak Manchi

Updated on: Aug 21, 2023 | 3:44 PM

ಬೆಂಗಳೂರು, ಆಗಸ್ಟ್ 21: ನಮ್ಮ ಸಮುದಾಯದ ನಾಯಕರಿಗೆ ಮೂರು ಪಕ್ಷಗಳಿಂದ ಅನ್ಯಾಯವಾದರೆ ಹೊಸ ಪಕ್ಷ ಸ್ಥಾಪನೆ ಮಾಡಲಾಗುವುದು ಎಂದು ಈಡಿಗ ಸಮುದಾಯದ (Ediga Community) ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸಮಾಜದ ಸಂಖ್ಯೆಹೆಚ್ಚಿರುವ ಭಾಗದಲ್ಲಿ ಇತರೆ ಹಿಂದುಳಿದವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ರಚನೆ ಮಾಡಲಾಗುವುದು ಎಂದರು.

ಅರಮನೆ ಮೈದಾನದಲ್ಲಿ ಸಪ್ಟೆಂಬರ್ 9 ರಂದು ಈಡಿಗ ಬಿಲ್ಲವ ನಾಮಧಾರಿ ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ ಆಯೋಜಿಸಲಾಗಿದೆ. ಈ ಕುರಿತು ಖಾಸಗಿ ಹೊಟೇಲ್​ನಲ್ಲಿ ನಡೆದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದರು.

ಬಿಕೆ ಹರಿಪ್ರಸಾದ್ ಅವರಿಗೆ ಅನ್ಯಾಯ ಮಾಡಿದ್ದಾರೆ. ಹರಿಪ್ರಸಾದ್ ಅವರನ್ನ ಮಂತ್ರಿ ಮಾಡಬಾರದು ಎಂದು ಷಡ್ಯಂತ್ರ ಮಾಡಿದ್ದಾರೆ. ಯಾರಿಂದ ಅನ್ಯಾಯವಾಗಿದೆ ಎಂದು ಹೆಸರನ್ನ ಹೇಳಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಅವರ ಜಾತಿ ಪ್ರೇಮವನ್ನ ಹಿಂದುಳಿದ ವರ್ಗದ ನಾಯಕರು ಬೆಳಸಿಕೊಳ್ಳಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜಾತಿ ಪ್ರೇಮಿಗಳು ಎಂದು ಪರೋಕ್ಷವಾಗಿ ಹೇಳಿದರು.

ಕೆಲವರು ಬೆದರಿಕೆ ಕರೆ ಮಾಡುತ್ತಿದ್ದಾರೆ. ಸರ್ಕಾರದ ಭಾಗವಾದವರ ಕಡೆಯಿಂದಲೇ ಇವೆಲ್ಲವೂ ನಡೆಯುತ್ತಿವೆ. ಒತ್ತಡ ತಂದು ಹೋರಾಟ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಈ ಸರ್ಕಾರದದಲ್ಲಿ ಅನ್ಯಾಯ ಆಗುತ್ತದೆ ಎಂಬ ಆತಂಕವಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ತೀರ್ಮಾನ ಮಾಡುತ್ತೇವೆ. ಸ್ವಾತಂತ್ರ್ಯ ಪಕ್ಷವನ್ನು ಯಾಕೆ ಮಾಡಬಾರದು? ಕೆಲವು ಕಡೆ ಈಡಿಗಾ ಸಮುದಾಯದವರು ಹೆಚ್ಚಾಗಿದ್ದಾರೆ. ಹಾಗಾಗಿ ಸ್ವತಂತ್ರ ಪಕ್ಷ ಮಾಡುವ ರೀತಿಯ ಚಿಂತನೆ ನಡೆಯುತ್ತಿವೆ ಎಂದರು.

ಇದನ್ನೂ ಓದಿ: ಸ್ಮಶಾಣದಲ್ಲಿ ಪಿಶಾಚಿ ಕುಣಿದಂತೆ ಆಗುತ್ತೆ -ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ ಕೋಡಿಮಠ ಸ್ವಾಮೀಜಿ

ರಾಜ್ಯದಲ್ಲಿ ಈಡಿಗ ಸಮುದಾಯದ ನಾಯಕರನ್ನ ಷಡ್ಯಂತ್ರದಿಂದ ಮುಗಿಸಿದ್ದಾರೆ ಎಂದು ಹೇಳಿದ ಪ್ರಣವಾನಂದ ಸ್ವಾಮೀಜಿ, ನಾರಾಯಣ ಗುರುಗಳ‌ ಒಂದೇ ಒಂದು ಪುತ್ಥಳಿ ಬೆಂಗಳೂರಿನಲ್ಲಿಲ್ಲ. ಸರ್ಕಾರಕ್ಕೆ ಒಂದು ಪುತ್ಥಳಿ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮಾತೆತ್ತಿದ್ದರೆ ಅಂಬೇಡ್ಕರ್ ಹೆಸರನ್ನ ಹೇಳುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ನಾವು ಸರ್ಕಾರನ್ನ ದೂಷಣೆ ಮಾಡುತ್ತಿಲ್ಲ. ನಾವು ಸಾಮಾಜಿಕ‌ ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ. ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಈಡಿಗ ಸಮುದಾಯದವರಿಗೆ ಟಿಕೆಟ್ ಟಿಕೆಟ್ ಕೊಡಬೇಕು. ಆ ಎರಡು ಜಿಲ್ಲೆಯಲ್ಲಿ ಈಡಿಗ ಸಮಯಾದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

ಸರ್ಕಾರ ರಚನೆಯಲ್ಲಿ ಹಿಂದುಳಿದ ವರ್ಗಗಳ ಪಾತ್ರ ಅತ್ಯಮುಲ್ಯವಾಗಿದೆ. ಅತೀಹಿಂದುಳಿದ ವರ್ಗದವರು ಅಧಿಕಾರದಿಂದ ವಂಚಿತರಾಗಿದ್ದಾರೆ. ಈಡಿಗ ಬಿಲ್ಲವ ಸಮಯದಾಯದ ನೇತೃತ್ವದಲ್ಲಿ ಎಲ್ಲಾ ಅತಿ ಹಿಂದುಳಿದ ವರ್ಗಗಳ ಸಭೆ ನಡೆಯಲಿದೆ. ಸಮುದಾಯದ ನಾಯಕರನ್ನ ಮುಗಿಸುವ ಕುತಂತ್ರ ನಡಿತಿದೆ ಎಂದರು.

ಸಪ್ಟೆಂಬರ್ 9 ರಂದು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆ ಆಯೋಜನೆ ಹಿನ್ನೆಲೆ ನಮಗೆ ಬೆದರಿಕೆಗಳು ಬರುತ್ತಿವೆ. ಯಾವುದೆ ಬೆದರಿಕೆಗೂ ನಾವು ಹೆದರುವುದಿಲ್ಲ. ಅರಮನೆ ಮೈದಾನದಲ್ಲಿ ಸಭೆ ನಡೆದೆ ನಡೆಯುತ್ತದೆ. ಬೇರೆ ಬೇರೆ ರಾಜ್ಯಗಳ ಸಚಿವರುಗಳು ಭಾಗಿಯಾಗಲಿದ್ದಾರೆ. ರಾಜ್ಯದ ಸಚಿವರು‌ ಮತ್ತು ಮಾಜಿ ಸಚಿವರು ಭಾಗಿಯಾಗಲಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್