AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಯಾತ್ರಿ ಬಳಕೆದಾರ ಆಟೋ ಚಾಲಕರಿಗೆ 25 ರೂ. ಚಾರ್ಜ್: ಆಟೋ ಡ್ರೈವರ್​ಗಳಿಂದ ಆಕ್ಷೇಪ

ಆಟೋ ಚಾಲಕರ ಒಕ್ಕೂಟವು ಆಟೋ ಚಾಲಕರ ಅನುಕೂಲಕ್ಕಾಗಿ ನಮ್ಮ ಯಾತ್ರಿ ಆ್ಯಪ್ ಬಳಕೆಗೆ ತಂದಿದೆ. ಆದರೆ, ಇತರೆ ಆ್ಯಪ್​ಗಳಂತೆ ಈ ಆ್ಯಪ್​​ ಬಳಕೆದಾರರು ಒಕ್ಕೂಟಕ್ಕೆ ದಿನಕ್ಕೆ 25 ರೂ. ಶುಲ್ಕು ಪಾವತಿಸಬೇಕಿದೆ. ಒಕ್ಕೂಟದ ಈ ನಿರ್ಧಾರಕ್ಕೆ ಆಟೋ ಚಾಲಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಯಾತ್ರಿ ಬಳಕೆದಾರ ಆಟೋ ಚಾಲಕರಿಗೆ 25 ರೂ. ಚಾರ್ಜ್: ಆಟೋ ಡ್ರೈವರ್​ಗಳಿಂದ ಆಕ್ಷೇಪ
ನಮ್ಮ ಯಾತ್ರಿ ಬಳಕೆದಾರ ಆಟೋ ಚಾಲಕರಿಗೆ 25 ರೂ. ಚಾರ್ಜ್ ಮಾಡುತ್ತಿರುವ ಆಟೋ ಚಾಲಕರ ಒಕ್ಕೂಟImage Credit source: PTI
Rakesh Nayak Manchi
|

Updated on:Aug 21, 2023 | 3:16 PM

Share

ಬೆಂಗಳೂರು, ಆಗಸ್ಟ್ 21: ಆಟೋ ಚಾಲಕರ ಅನುಕೂಲಕ್ಕಾಗಿ ಆಟೋ ಚಾಲಕರ ಒಕ್ಕೂಟವು (Autorickshaw drivers’ Union) ನಮ್ಮ ಯಾತ್ರಿ ಆ್ಯಪ್ (Namma Yatri App) ಬಳಕೆಗೆ ತಂದಿದೆ. ಆದರೆ, ಇತರೆ ಆ್ಯಪ್​ಗಳಂತೆ ಈ ಆ್ಯಪ್​ ಬಳಕೆದಾರರು ಒಕ್ಕೂಟಕ್ಕೆ ದಿನಕ್ಕೆ 25 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಸದ್ಯ ಒಕ್ಕೂಟದ ಈ ನಿರ್ಧಾರಕ್ಕೆ ಆಟೋ ಚಾಲಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

ನಮ್ಮ ಯಾತ್ರಿ ಆ್ಯಪ್ 2022 ರ ನವೆಂಬರ್ ತಿಂಗಳಲ್ಲಿ ಬಳಕೆಗೆ ತರಲಾಗಿದ್ದು, 2023ರ ಆಗಸ್ಟ್ 18 ರಿಂದ ಆಟೋ ಚಾಲಕರು ದಿನಕ್ಕೆ 25 ರೂಪಾಯಿಯನ್ನು ಒಕ್ಕೂಟಕ್ಕೆ ನೀಡಬೇಕು ಎಂಬ ನಿಯಮವನ್ನು ಜಾರಿ ಮಾಡಿದ್ದಾರೆ. ಹಲವಾರು ಚಾಲಕರು ಬುಕ್ಕಿಂಗ್ ದೃಢಪಡಿಸಿದ ಬಳಿಕ ಸ್ಥಳಕ್ಕೆ ಆಗಮಿಸಿ ಬುಕ್ಕಿಂಗ್ ರದ್ದುಗೊಳಿಸುವಂತೆ ಸವಾರರಿಗೆ ಮನವರಿಕೆ ಮಾಡಿದರೂ ಏನೂ ಪ್ರಯೋಜವಿಲ್ಲ. ದಿನಕ್ಕೆ ನಿಗದಿ ಮಾಡಿದ ಶುಲ್ಕ ಒಕ್ಕೂಟಕ್ಕೆ ಪಾವತಿಸಲೇಬೇಕು.

ಇದನ್ನೂ ಓದಿ: ಬೆಂಗಳೂರು: ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ

ಶುಲ್ಕ ನೀಡಬೇಕು ಎಂಬ ನಿಯಮ ಜಾರಿಯಿಂದ ನಾನು ದಿಗ್ಭ್ರಮೆಗೊಂಡೆ. ಉಚಿತ ಏನೂ ಇಲ್ಲ. ಇತರೆ ಆ್ಯಪ್​ ಮತ್ತು ಈ ಆ್ಯಪ್​​ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಆಟೋ ಚಾಲಕ ನಾಗರಾಜ್ ಹೇಳಿದ್ದಾಗಿ ನ್ಯೂಸ್ 9 ವರದಿ ಮಾಡಿದೆ.

ಆಟೋರಿಕ್ಷಾ ಚಾಲಕರ ಸಂಘ ನವೆಂಬರ್​ 2022 ರಲ್ಲಿ ನಮ್ಮ ಯಾತ್ರಿ ಎಂಬ ಆ್ಯಪ್​​ನ್ನು ತಯಾರಿಸಿತ್ತು. ಪ್ರಯಾಣಿಕರು ಈ ಆ್ಯಪ್ ಮೂಲಕ ಆಟೋ ಬುಕ್ ಮಾಡಿ ಸೇವೆ ಪಡೆಯಬಹುದಾಗಿದೆ. ನವೆಂಬರ್​​​ನಿಂದ ಇಲ್ಲಿಯವರಗೆ ಆ್ಯಪ್ ಮೂಲಕ ರಿಕ್ಷಾ ಚಾಕಲರು ಸುಮಾರು 5.6 ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾರೆ. ಆ್ಯಪ್​ನಿಂದ ದೊರೆತ ಮಾಹಿತಿ ಪ್ರಕಾರ, 41,112 ರಿಕ್ಷಾ ಚಾಲಕರು ಮತ್ತು 3,35,653 ಬಳಕೆದಾರರು ಆ್ಯಪ್​​ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಮಾರ್ಚ್​​ 6ರ ವರೆಗೆ ಚಾಲಕರು 3,37,762 ಟ್ರೀಪ್​​ಗಳನ್ನು ಪೂರ್ಣಗೊಳಿಸಿದ್ದು, ಮಾರ್ಚ್​​ 5ರ ವರೆಗೆ 9 ಲಕ್ಷ ಹಣ ಗಳಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Mon, 21 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ