ಏಪ್ರಿಲ್ ತಿಂಗಳಲ್ಲಿ ಬೆಂಗಳೂರಲ್ಲಿ ಸಾಲು ಸಾಲು ಕಾರ್ಯಕ್ರಮಗಳು: ಇಲ್ಲಿದೆ ವೇಳಾಪಟ್ಟಿ
ಏಪ್ರಿಲ್ ತಿಂಗಳಲ್ಲಿ ನಗರದಲ್ಲಿ ಸರಣಿ ಕಾರ್ಯಕ್ರಮಗಳು ನಡೆಯಲಿವೆ. ರಾಜಕಾರಣಿಗಳ ಕಾರ್ಯಕ್ರಮದಿಂದ ಹಿಡಿದು ಖ್ಯಾತ ಹಿನ್ನಲೆ ಗಾಯಕಿ ಕೆ.ಎಸ್. ಚಿತ್ರಾ ಅವರ ಕಾರ್ಯಕ್ರಮದವರೆಗು ಅನೇಕ ಕಾರ್ಯಕ್ರಮಗಳು ಶೆಡ್ಯುಲ್ ಆಗಿವೆ.
ಬೆಂಗಳೂರು: ಬೇಸಿಗೆ ರಜೆ ಸಮಯ ಶಾಲೆಗಳು ರಜೆ ಇರುತ್ತವೆ. ಈ ಸಮಯದಲ್ಲಿ ಉತ್ಸವ, ಹಬ್ಬಗಳು ಜೋರಾಗಿಯೇ ನಡೆಯುತ್ತಿರುತ್ತವೆ. ಅದರಲ್ಲಂತೂ ಐಪಿಎಲ್, ಚುನಾವಣಾ ಕಾವು ಜೋರಾಗಿಯೇ ಇದೆ. ಈ ಮಧ್ಯೆ ರಾಜ್ಯ ರಾಜಧಾನಿ ಜನರಿಗೆ ಸಿಹಿ ಸುದ್ದಿಯೊಂದು ಇದೆ. ಹೌದು ಏಪ್ರಿಲ್ (April) ತಿಂಗಳಲ್ಲಿ ನಗರದಲ್ಲಿ ಸರಣಿ ಕಾರ್ಯಕ್ರಮಗಳು ನಡೆಯಲಿವೆ. ರಾಜಕಾರಣಿಗಳ (Politicians) ಕಾರ್ಯಕ್ರಮದಿಂದ ಹಿಡಿದು ಖ್ಯಾತ ಹಿನ್ನಲೆ ಗಾಯಕಿ ಕೆ.ಎಸ್. ಚಿತ್ರಾ ಅವರ ಕಾರ್ಯಕ್ರಮದವರೆಗು ಅನೇಕ ಕಾರ್ಯಕ್ರಮಗಳು ನಿಗದಿಯಾಗಿವೆ. ಈ ಹಿನ್ನೆಲೆ ಬೆಂಗಳೂರಿಗರು ಕಾರ್ಯಕ್ರಮಗಳ ದಿನಾಂಕ ಸೇವ್ ಮಾಡಿಟ್ಟುಕೊಳ್ಳಿ.
1. ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 9 ರಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. “ಪ್ರಾಜೆಕ್ಟ್ ಟೈಗರ್” ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದಿವೆ. ಈ ಹಿನ್ನೆಲೆ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಲಿದ್ದಾರೆ.
2. ರಾಹುಲ್ ಗಾಂಧಿ ಸತ್ಯಮೇವ ಜಯತೆ ಸಮಾವೇಶ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಪ್ರಿಲ್ 9 ರಂದು ಕೋಲಾರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಕೋಲಾರದಲ್ಲಿ ನಡೆಯುವ ಸತ್ಯಮೇವ ಜಯತೆ ಸಮಾವೇಶದಲ್ಲಿ ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ.
3. ರಾಂಬೊ ಸರ್ಕಸ್ ಅಂತರಾಷ್ಟ್ರೀಯ ಉತ್ಸವ: ಬೆಂಗಳೂರಿನ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಏಪ್ರಿಲ್ 8 ರಿಂದ 23 ರವರೆಗೆ, ಈ ಬೇಸಿಗೆಯಲ್ಲಿ ಹವಾನಿಯಂತ್ರಿತ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಸರ್ಕಸ್ ಉತ್ಸವವನ್ನು ಆನಂದಿಸಿ. ಮೂರು ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೂಕ್ತವಾಗಿದೆ. ಪ್ರವೇಶ ಟಿಕೆಟ್ 500 ರೂ. ಇದೆ
4. ಗ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರೊಂದಿಗೆ ಮಲಯಾಳಂ ಮಧುರ ಹಾಡುಗಳು: ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ಏಪ್ರಿಲ್ 8 ರಂದು ಸಂಜೆ 6:30 ರ ಸುಮಾರಿಗೆ ಆಯೋಜಿಸಲಾಗಿದೆ, ಪ್ರಸಿದ್ಧ ಗಾಯಕ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕೆಎಸ್ ಚಿತ್ರಾ ಜೊತೆಗೆ 13 ತುಣುಕುಗಳ ಆರ್ಕೆಸ್ಟ್ರಾದೊಂದಿಗೆ ಭಾವಪೂರ್ಣ ಸಂಜೆ ಆನಂದಿಸಿ. ಪ್ರವೇಶ ಟಿಕೆಟ್ 500 ರೂ. ಇದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:31 am, Mon, 3 April 23