ಹೋಟೆಲ್ ಮಾಲೀಕರ ಸಂಘದಿಂದ ಸಚಿವ ಸುಧಾಕರ್ಗೆ ಮನವಿ ಪಟ್ಟಿ, 24/7 ಹೋಟೆಲ್ ತೆರೆಯಲು ಅನುಮತಿಗೆ ಒತ್ತಾಯ
ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಯಿಂದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದೆ. ಪಿ.ಸಿ.ರಾವ್ ಹೋಟೆಲ್ ಮಾಲೀಕರ ಸಂಘದಿಂದ ಸಚಿವ ಸುಧಾಕರ್ಗೆ ಸಲಹೆ ಪಟ್ಟಿ ಸಲ್ಲಿಸಿದರು.
ಬೆಂಗಳೂರು: ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಯಿಂದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, FKCCI ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಸೇರಿದಂತೆ ಬಿಬಿಎಂಪಿ ಹೋಟೆಲ್ ಮಾಲೀಕರು ಭಾಗಿಯಾಗಿದ್ದಾರೆ. ಇನ್ನು ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 2ಗಂಟೆಗೆ ಹೋಟೆಲ್ ಮಾಲೀಕರ ಸಂಘ ಸಭೆ ಕರೆದಿದೆ. ಸಭೆಯಲ್ಲಿ ಹೋಟೆಲ್ ತಿಂಡಿ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆಯಲಿದೆ.
ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಯಿಂದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಜೊತೆಯ ಸಭೆ ಬಳಿಕ ಮಾತನಾಡಿದ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್, ಹೋಟೆಲ್ ಉದ್ಯಮ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದರು. ವಿರೋಧ ಪಕ್ಷದವರು ಸಮಸ್ಯೆ ತೆಗೆದುಕೊಂಡು ನಮ್ಮ ಬಳಿ ಯಾಕೆ ಬರ್ತಿರಾ ಅಂತಾರೆ. ನಾನು ಅವರಿಗೆ ವೈಯಕ್ತಿಕವಾಗಿ ಹೇಳುತ್ತೇನೆ. ನಾನು ಬಿಜೆಪಿ, ನಮ್ಮ ಅಪ್ಪ ಬಿಜೆಪಿ, ನಮ್ಮ ತಾತಾ ಬಿಜೆಪಿ ಮುಂದೆಯೂ ಬಿಜೆಪಿಯೇ. ಜಿಎಸ್ಟಿ ಹೆಚ್ಚಳ ಮಾಡಿದಾಗ, ನಮ್ಮ ಸಂಘಟನೆಯವರು ಮನವಿಯನ್ನ ಸಲ್ಲಿಸಿದ್ವೀ. ಆಗ ತಕ್ಷಣಕ್ಕೆ 5% ಜಿಎಸ್ಟಿ ಕಡಿಮೆ ಮಾಡಿದ್ದಾರೆ. ಈ ರೀತಿ ಜನರ ಮಾತಿಗೆ ಬೆಲೆ ಕೊಡುವ ಪಕ್ಷ ಅಂದ್ರೆ ಅದು ಬಿಜೆಪಿ ಎಂದು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಬೆಲೆ ಏರಿಕೆ: ಇಂದು ಹೋಟೆಲ್ ಮಾಲೀಕರ ಸಂಘದ ಸಭೆ, ಹೋಟೆಲ್ ಊಟ-ತಿಂಡಿ ದರ ಏರಿಕೆಯಾಗಲಿದ್ಯಾ?
ಹೋಟೆಲ್ ಮಾಲೀಕರ ಸಂಘದಿಂದ ಸಚಿವ ಸುಧಾಕರ್ಗೆ ಸಲಹೆ ಪಟ್ಟಿ ಸಲ್ಲಿಸಿದ ಪಿ.ಸಿ.ರಾವ್
- ಹೋಟೆಲ್ ಉದ್ದಿಮೆಯ ಬಗ್ಗೆ ಇಂಡಸ್ಟ್ರಿಯಲ್ ಸ್ಟೇಟಸ್ ನೀಡಬೇಕು
- 24/7 ಹೋಟೆಲ್ ತೆರೆದಿಡಲು ಅನುಮತಿ ನೀಡಬೇಕು
- ಸಣ್ಣಪುಟ್ಟ ಹೋಟೆಲ್ ಹಾಗೂ ಬೇಕರಿಗಳ ಜನರ ಮೇಲೆ ರೌಡಿಗಳು ಹಲ್ಲೆ ಮಾಡುತ್ತಿದ್ದಾರೆ ಅದರ ವಿರುದ್ದ ಕಾನೂನಿನ ಮೂಲಕ ಕ್ರಮ ತೆಗೆದುಕೊಳ್ಳಬೇಕು
- ರ್ಯಾಪಿಡ್ ಆಕ್ಷನ್ ಫೋರ್ಸ್ ನ್ನು ತರಬೇಕು
- ಹೋಟೆಲ್ ಮಾಡಲು ಎಲ್ಲ ಕಡೆ ಲೈಸೆನ್ಸ್ ತೆಗೆದುಕೊಳ್ಳಬೇಕು. ಆ ಲೈಸೆನ್ಸ್ ಗಳ ಅಗತ್ಯವಿಲ್ಲ, ಆದ್ರಿಂದ ಆ ಲೈಸೆನ್ಸ್ ಗಳನ್ನ ರದ್ದು ಮಾಡಬೇಕು.
ಹೋಟೆಲ್ ಮಾಲೀಕರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ
ಇನ್ನು ಮತ್ತೊಂದೆಡೆ ಸಭೆ ಬಳಿಕ ಮಾತನಾಡಿದ ಸಚಿವ ಕೆ.ಸುಧಾಕರ್, ಹೋಟೆಲ್ ಉದ್ದಿಮೆಯವರನ್ನ ಭೇಟಿ ಮಾಡಿ ತುಂಬ ಖುಷಿಯಾಗಿದೆ. ಬಿಜೆಪಿ ಪಕ್ಷ ಎಲ್ಲ ಜನರ ಜೊತೆ ಬೆರೆತು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಭಾರತದಲ್ಲಿ ಬಿಜೆಪಿಯೊಂದೆ ಜನರ ಬಳಿ ಹೋಗಿ ಅವರ ಅಭಿಪ್ರಾಯ ತಿಳಿದು ಪ್ರಣಾಳಿಕೆ ಮಾಡುತ್ತಿದೆ. ನೈಜತೆಯಿಂದ ಕೂಡಿರುವ ಪ್ರಣಾಳಿಕೆಯನ್ನ ಬಿಡುಗಡೆ ಮಾಡಬೇಕು. ಒಂದು ಪಕ್ಷ ತರ ತರ ಪ್ರಣಾಳಿಕೆಗಳನ್ನ ಬಿಡುಗಡೆ ಮಾಡುತ್ತಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಇರುವ ಅಂಶಗಳು ಯಾವುದೇ ಕಾರಣಕ್ಕೂ ವಾಸ್ತವದಲ್ಲಿ ಆಗುವುದಿಲ್ಲ. ಇನ್ನೊಂದು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಆ ಯಾತ್ರೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಹೈಟೆಕ್ ಆಸ್ಪತ್ರೆ ಮಾಡುವುದಾಗಿ ಅವರ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ನಾನು ಒಬ್ಬ ಆರೋಗ್ಯ ಸಚಿವನಾಗಿ ಹೇಳುತ್ತಿದ್ದೇನೆ. ಪ್ರತಿ ತಾಲೂಕಿನಲ್ಲೇ ನಾವು ಆಸ್ಪತ್ರೆಯನ್ನ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಇನ್ನು ಪಂಚಾಯಿತಿಗಳಲ್ಲಿ ಆಸ್ಪತ್ರೆ ತೆರೆಯಲು ಸಾಧ್ಯನಾ? ಮುಂದಿನ ದಿನಗಳಲ್ಲಿ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿರುವವರ ಬಳಿ ಕೂಡ ಚರ್ಚೆ ಮಾಡುತ್ತೇವೆ. ನೀವು ಕೊಟ್ಟಿರುವ ಸಲಹೆಗಳನ್ನ ನೋಡಿದೆ. ಹೋಟೆಲ್ ಉದ್ದಿಮೆ ತೆರೆಯಲು ಲೈಸೆನ್ಸ್ ತೆಗೆದುಕೊಂಡು ಕೊಳ್ಳುವುದೇ ಕಷ್ಟವಾಗಿದೆ. ಆದ್ರಿಂದ ಸುಲಭವಾಗಿ ನಿಮಗೆ ಲೈಸೆನ್ಸ್ ನ್ನು ಒಂದೇ ಸೂರಿನಡಿಯಲ್ಲಿ ಕೊಡುವುದರ ಬಗ್ಗೆ ಚರ್ಚಿಸಿ ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ನೀವು ಕೊಟ್ಟಿರುವ ಎಲ್ಲ ಸಲಹೆಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಇದನ್ನು ನಮ್ಮ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡುತ್ತೇವೆ. ಸುಮ್ಮನೆ ನಾವು ಭರವಸೆ ನೀಡುವುದಿಲ್ಲ. ಯಾವ ಬೇಡಿಕೆ ಈಡೇರಿಸಲು ಸಾಧ್ಯವೋ ಆ ಬೇಡಿಕೆಯನ್ನ ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:04 pm, Mon, 3 April 23