AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಯಡಿಯೂರಪ್ಪ ಕಣ್ಣೀರು ಹಾಕುವಂತೆ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ; ಸಚಿವ ಪ್ರಿಯಾಂಕ ಖರ್ಗೆ

ಬಿಎಸ್ ಯಡಿಯೂರಪ್ಪರನ್ನು ಬಿಜೆಪಿಯವರು ಹೇಗೆ ನಡೆಸಿಕೊಂಡರು ಅಂತ ಗೊತ್ತಿದೆ. ಈಗ ಅಲ್ಲಿ ಕ್ಯಾಪ್ಟನ್ ಆಗುವುದಕ್ಕೂ ಯಾರೂ ರೆಡಿ ಇಲ್ಲ. ಕ್ಯಾಪ್ಟನ್ನೂ ಇಲ್ಲ ಎಮದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು.

Follow us
ಪ್ರಸನ್ನ ಗಾಂವ್ಕರ್​
| Updated By: ಆಯೇಷಾ ಬಾನು

Updated on:Aug 19, 2023 | 2:02 PM

ಬೆಂಗಳೂರು, ಆ.19: ಲೋಕಸಭಾ ಚುನಾವಣೆ(Lok Sabha Election) ಹಿನ್ನೆಲೆ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ತಯಾರಿ ನಡೆಸಿದ್ದು ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ತಮ್ಮ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಆಪರೇಷನ್‌ ಹಸ್ತದ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯುತ್ತಿರುವುದು ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆದಿದೆ. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ(, ಬಿಜೆಪಿ ಈಗ ಮುಳುಗುತ್ತಿರುವ ಹಡಗು ಎಂದಿದ್ದಾರೆ.

ಬಿಎಸ್ ಯಡಿಯೂರಪ್ಪರನ್ನು ಬಿಜೆಪಿಯವರು ಹೇಗೆ ನಡೆಸಿಕೊಂಡರು ಅಂತ ಗೊತ್ತಿದೆ. ಈಗ ಅಲ್ಲಿ ಕ್ಯಾಪ್ಟನ್ ಆಗುವುದಕ್ಕೂ ಯಾರೂ ರೆಡಿ ಇಲ್ಲ. ಕ್ಯಾಪ್ಟನ್ನೂ ಇಲ್ಲ. ಯಡಿಯೂರಪ್ಪದು ಈಗ ಮಾತು ನಡೆಯುತ್ತಿದ್ರೆ ಇಷ್ಟು ಜನ ಬಿಜೆಪಿಯವರು ಬಿಟ್ಟು ಬರ್ತಾ ಇದ್ರಾ? ಚುನಾವಣೆ ಬಂದಾಗ ಯಡಿಯೂರಪ್ಪ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದ್ರು. ಯಡಿಯೂರಪ್ಪ ಹೇಳಿದವರಿಗೆ ಎಷ್ಟು ಜನರಿಗೆ ಟಿಕೇಟ್ ಕೊಟ್ಟರು ಹೇಳಿ? ಯಡಿಯೂರಪ್ಪ ಅವರಿಗೆ ಕಣ್ಣೀರು ತರಿಸಿ ಇಳಿಸಿದ್ದನ್ನು ಎಲ್ಲರೂ ನೋಡಿದ್ದಾರೆ. ಬಿಜೆಪಿ ಈಗ ಮುಳುಗುತ್ತಿರುವ ಹಡಗು ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಬಿಜೆಪಿ ಪಕ್ಷ ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡಿರುವ ಬಗ್ಗೆ ಕಿಡಿಕಾರಿದರು.

ಇದನ್ನೂ ಓದಿ: Karnataka Politics: ಬಿಜೆಪಿಗೆ ಮತ್ತೆ ಅನಿವಾರ್ಯವಾದರೇ ಬಿಎಸ್ ಯಡಿಯೂರಪ್ಪ, ಇತ್ತೀಚಿನ ಬೆಳವಣಿಗೆಗಳು ಹೇಳುವುದೇನು?

ಪಕ್ಷದ ತತ್ವ ಸಿದ್ಧಾಂತ ಒಪ್ಪಿ, ಷರತ್ತು ಹಾಕದೆ ಬಂದರೆ ಸ್ವಾಗತ

ಇನ್ನು ಇದೇ ವೇಳೆ ವಲಸಿಗರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ ಖರ್ಗೆ, ಪಕ್ಷದ ತತ್ವ ಸಿದ್ಧಾಂತ ಒಪ್ಪಿ, ಷರತ್ತು ಹಾಕದೆ ಬಂದರೆ ಸ್ವಾಗತ ಎಂದರು. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ. ಬಿಜೆಪಿ, ಜೆಡಿಎಸ್​​​​ ಪಕ್ಷ ಒಡೆಯಲು ಹೋಗುತ್ತಿಲ್ಲಾ. ಯಾರ ಅಸ್ತಿತ್ವ ಏನು ಅಂತಾ ಜನರೇ ತೋರಿಸಿಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ತನ್ನ ಅಸ್ತಿತ್ವ ಕಾಪಾಡಿಕೊಂಡು ಹೋಗಲಿ. ಸಚಿವ ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ಹೈಕ ಭಾಗದಲ್ಲಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ನಮ್ಮ ಭಾಗಕ್ಕೆ ದನ ಕಾಯುವ ಮಂತ್ರಿಗೆ ಬಿಜೆಪಿಯವರು ಖಾಯಂ ಸ್ಥಾನ ಕೊಡ್ತಿದ್ರು. ಘರ್ ವಾಪ್ಸಿ ಅಂತ ಮಾಡೋಕೆ ಹೋದರೆ ಅರ್ಧ ಬಿಜೆಪಿ ಅರ್ಧ ಜೆಡಿಎಸ್ ಖಾಲಿಯಾಗುತ್ತದೆ ಎಂದರು.

ಸುಧಾಮ್ ದಾಸ್ ಪರ ಸಚಿವ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ಪರಿಷತ್​ಗೆ ಸುಧಾಮ್​ ದಾಸ್ ನಾಮನಿರ್ದೇಶನಕ್ಕೆ ವಿರೋಧ ವಿಚಾರ ಸಂಬಂಧ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸುಧಾಮ್ ದಾಸ್​ಗೆ ಸ್ಥಾನ ಕೊಡಲೇಬಾರದು ಅಂತಾ ಏನೂ ಹೇಳಿಲ್ಲ. ಸುಧಾಮ್ ದಾಸ್ ಹೆಸರು ಪರಿಶೀಲಿಸಿ ಅಂತಾ ಪತ್ರ ಬರೆದಿದ್ದಾರೆ. ಈ ಕುರಿತು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. 3 ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್​ಗೆ ಬಂದಿದ್ದಾರೆ ಅನ್ನೋದು ಬೇಡ. ಪಕ್ಷದಲ್ಲಿ ಸುಧಾಮ್ ದಾಸ್ ಶ್ರಮ ಹಾಕಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಸುಧಾಮ್ ದಾಸ್ ಪರ ಸಚಿವ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್ ಮಾಡಿದರು

ರಾಜ್ಯ ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:46 pm, Sat, 19 August 23