ರಾಜ್ಯೇತರ ಸಿವಿಲ್ ಸರ್ವಿಸ್ ಅಧಿಕಾರಿಗಳಿಗೆ ಐಎಎಸ್ ವೃಂದ ಪಡೆಯಲು ಪರೀಕ್ಷೆ ಕಡ್ಡಾಯ
ಬಡ್ತಿ ವೇಳೆ ವ್ಯಕ್ತಿಗತ ಶಿಫಾರಸು ತಡೆಗಟ್ಟಲು ಲಿಖಿತ ಪರೀಕ್ಷೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು: ರಾಜ್ಯೇತರ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನು ಐಎಎಸ್ ವೃಂದಕ್ಕೆ ಶಿಫಾರಸು ಮಾಡಲು ಇನ್ನು ಮುಂದೆ ಲಿಖಿತ ಪರೀಕ್ಷೆ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಲಿಖಿತ ಪರೀಕ್ಷೆಯು ಕೆಪಿಎಸ್‌ಸಿ ಮೂಲಕ ನಡೆಯಲಿದೆ. ಬಡ್ತಿ ವೇಳೆ ವ್ಯಕ್ತಿಗತ ಶಿಫಾರಸು ತಡೆಗಟ್ಟಲು ಲಿಖಿತ ಪರೀಕ್ಷೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಗುಜರಾತ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಿಖಿತ ಪರೀಕ್ಷೆ ಜಾರಿಯಲ್ಲಿದೆ.
ಸರ್ವೇ ಶುಲ್ಕ ಪರಿಷ್ಕರಣೆ
ಸರ್ವೇ ಶುಲ್ಕವನ್ನು ಮತ್ತೊಮ್ಮೆ ಪರಿಷ್ಕರಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಸರ್ವೆ ಶುಲ್ಕ ಹೆಚ್ಚಿಸಿ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಆದೇಶವನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಗ್ರಾಮೀಣ ಭಾಗದಲ್ಲಿ ಸರ್ವೇ ಮಾಡಲು ಈ ಮೊದಲು ಎಕರೆಗೆ 3500 ರೂಪಾಯಿಯಿಂದ 4000 ರೂಪಾಯಿ ಹಾಗೂ ನಗರ ಭಾಗಕ್ಕೆ 5 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದೀಗ ಆದೇಶವನ್ನು ಪರಿಷ್ಕರಿಸಿರುವ ಸರ್ಕಾರವು ಗ್ರಾಮೀಣ ಭಾಗದಲ್ಲಿ ಸರ್ವೆಗೆ ಎಕರೆಗೆ 3500 ರೂಪಾಯಿ, 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 400 ರೂಪಾಯಿ ನಿಗದಿಪಡಿಸಿದೆ. ನಗರ ಪ್ರದೇಶಗಳಲ್ಲಿ 2 ಎಕರೆವರೆಗೆ 2500 ರೂಪಾಯಿ ಇದ್ದು, ಅದಕ್ಕಿಂತ ಮೇಲ್ಪಟ್ಟಿದ್ದರೆ ಪ್ರತಿ ಎಕರೆಗೆ 1000 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ.
ಕೆಲ ವಿವಿಗಳಲ್ಲಿ ಆನ್‌ಲೈನ್ ತರಗತಿ
ರಾಜ್ಯದಲ್ಲಿ ಕಾಲೇಜುಗಳನ್ನು ಮತ್ತೆ ಆರಂಭಿಸುವ ಕುರಿತು ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲ ವಿವಿಗಳಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು.
ಇದನ್ನೂ ಓದಿ: 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ
ಇದನ್ನೂ ಓದಿ: ಅಧಿಕಾರಿಗಳಲ್ಲಿ ಭಯ ಹುಟ್ಟಿಸಲಿದೆ ಐಎಎಸ್ ನಿಯೋಜನೆ ನಿಯಮಗಳ ಬದಲಾವಣೆ: ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್