ಗಡುವು ಮುಗಿದರು ಸಿಗದ ಪರಿಹಾರ: ಸರ್ಕಾರದ ವಿರುದ್ಧ ಮತ್ತೆ ಐಟಿಬಿಟಿ ಕಂಪನಿಗಳು ಬೇಸರ, ಡಿಕೆಶಿಗೆ ಪತ್ರ
ಟ್ರಾಫಿಕ್, ವಾಹನ ದಟ್ಟಣೆ ಸೇರಿ ಹಲವು ಸಮಸ್ಯೆಗಳ ಬಗ್ಗೆ 100 ದಿನದೊಳಗೆ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸರ್ಕಾರದ ವಿರುದ್ಧ ಐಟಿಬಿಟಿ ಕಂಪನಿಗಳು ಮತ್ತೆ ಬೇಸರ ಹೊರಹಾಕಿದ್ದಾರೆ. 100 ದಿನವಾದರೂ ಪರಿಹಾರ ಸಿಗದಿದ್ದಕ್ಕೆ ಔಟರ್ ರಿಂಗ್ ರೋಡ್ ಕಂಪನಿ ಒಕ್ಕೂಟ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ.
ಬೆಂಗಳೂರು, ಜನವರಿ 23: ರಾಜ್ಯ ಸರ್ಕಾರದ ವಿರುದ್ಧ ಐಟಿಬಿಟಿ ಕಂಪನಿಗಳು ಮತ್ತೆ ಬೇಸರ ಹೊರಹಾಕಿದ್ದಾರೆ. ಅಕ್ಟೋಬರ್ 7 ರಂದು ಔಟರ್ ರಿಂಗ್ ರೋಡ್ ಕಂಪನಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಟ್ರಾಫಿಕ್, ವಾಹನ ದಟ್ಟಣೆ ಸೇರಿ ಹಲವು ಸಮಸ್ಯೆಗಳ ಬಗ್ಗೆ ಐಟಿಬಿಟಿ ಕಂಪನಿಗಳು ಹೇಳಿದ್ದವು. 100 ದಿನದೊಳಗೆ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಗಡುವು ನೀಡಿದ್ದರು. ಆದರೆ ಅಧಿಕಾರಿಗಳಿಗೆ ಕೊಟ್ಟ 100 ದಿನಗಳ ಗಡುವು ವಿಫಲವಾಗಿದೆ. 100 ದಿನವಾದರೂ ಪರಿಹಾರ ಸಿಗದಿದ್ದಕ್ಕೆ ಔಟರ್ ರಿಂಗ್ ರೋಡ್ ಕಂಪನಿ ಒಕ್ಕೂಟ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ.
17 ಕಿಮೀ ಉದ್ದದ ಔಟರ್ ರಿಂಗ್ ರೋಡ್ ರಸ್ತೆಯಲ್ಲಿ 500 ಕಂಪನಿಗಳಿದ್ದು 10 ಲಕ್ಷ ಜನ ನೆಲೆಸಿದ್ದಾರೆ. ಸಮಸ್ಯೆಗಳನ್ನ 100 ದಿನದೊಳಗೆ ಪರಿಹರಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ವಲಯ ಆಯುಕ್ತರಿಗೆ ಗಡುವು ಡಿಕೆ ಶಿವಕುಮಾರ್ ನೀಡಿದ್ದರು. ಇದೀಗ ನೀಡಿದ್ದ 100 ದಿನದ ಗುಡುವು ಮುಕ್ತಾಯವಾದರು ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.
ಇದನ್ನೂ ಓದಿ: ಹಾಸನ-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ರಾಫಿಕ್ ಜಾಮ್; ವಾಹನ ಸವಾರರ ಪರದಾಟ
ಸಂಚಾರ ಸಮಯದಲ್ಲಿ ಅಂದರೆ ಪೀಕ್ ಅವರ್ನಲ್ಲಿ ಬೆಳ್ಳಂದೂರು, ಔಟರ್ ರಿಂಗ್ ರೋಡ್ ಸುತ್ತಮುತ್ತ ಟ್ರಾಫಿಕ್ ಬಿಸಿ ತಟ್ಟುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಐಟಿಬಿಟಿ ಮಂದಿ ಸುಸ್ತಾಗಿದ್ದಾರೆ.
ಮೆಟ್ರೋ ಕಾಮಗಾರಿ ಕೂಡ ನಡಿಯುತ್ತಿರುವುದರಿಂದ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಹಿಗಾಗಿ ಟ್ರಾಫಿಕ್ನಿಂದ ಮುಕ್ತಿ ಯಾವಾಗ ಎನ್ನುತ್ತಿದ್ದಾರೆ ಜನರು. ವಾಹನದಟ್ಟಣೆಯಿಂದ ಮುಕ್ತಿ ಕೊಡಿ ಎಂದು ಐಟಿಬಿಟಿ ಕಂಪನಿಗಳ ಅಳಲು ತೊಡಿಕೊಂಡಿವೆ.
ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು ವಿಶ್ವ ಮಟ್ಟದಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಉದ್ಯಮಿಗಳ ಪಾತ್ರವು ಕೂಡ ಇದೆ. ಒಆರ್‌ಆರ್‌ಸಿಎ ಸಂಘದ ಸದಸ್ಯರ ಮನವಿಗೆ ಸರ್ಕಾರ ಸ್ಪಂದಿಸಲಿದೆ. ನಾವು ಕಲೆಕ್ಟಿವ್ ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕರ್ನಾಟಕ ಹೂಡಿಕೆಗೆ ಸೂಕ್ತವಾದ ಸ್ಥಳ ಇದಾಗಿದ್ದು, ಉದ್ಯಮಕ್ಕೆ ಪ್ರೋತ್ಸಾಹಿಸುವ ಸರ್ಕಾರ ರಾಜ್ಯದಲ್ಲಿದೆ. ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
ಇದನ್ನೂ ಓದಿ: ನಮ್ಮ ಮೆಟ್ರೋ ಕ್ಯೂಆರ್ ಕೋಡ್, ವಾಟ್ಸಪ್ ಪೇಮೆಂಟ್ ಸೌಲಭ್ಯಕ್ಕೆ ಪ್ರಯಾಣಿಕರು ಫಿದಾ: ಹೊಸ ದಾಖಲೆ
ನೂರಾರು ಐಟಿಬಿಟಿ ಕಂಪನಿಗಳು ನೆಲೆಸಿರುವ ಕಾರಣ ಈ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿದ್ದು, ಸುಗಮ ಸಂಚಾರಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದರು.
ವರದಿ: ಶಾಂತಾಮೂರ್ತಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.