ಬೆಂಗಳೂರಲ್ಲಿ ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗಿ ಭೀಕರ ಸ್ಫೋಟ ಪ್ರಕರಣ: ಗೇಲ್ ಕಂಪನಿ ಹೇಳುವುದೇನು: ಇಲ್ಲಿದೆ ಮಾಹಿತಿ
ಗೇಲ್ ಕಂಪನಿಯ ಗ್ಯಾಸ್ ಪೈಪ್‌ಲೈನ್‌ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಬೆಂಗಳೂರು: ಗೇಲ್ (Gail) ಕಂಪನಿಯ ಗ್ಯಾಸ್ ಪೈಪ್‌ಲೈನ್‌ನಿಂದ (Gas Pipeline) ಗ್ಯಾಸ್ ಸೋರಿಕೆಯಾದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಹೆಚ್‌ಎಸ್‌ಆರ್ ಲೇಔಟ್‌ನ 2ನೇ ಹಂತದ 23ನೇ ಕ್ರಾಸ್ ನಿವಾಸಿಗಳಾದ ಲೈಕಾ ಅಂಜುಂ (46) ಮತ್ತು ಮುಬಾಶಿರಾ (40) ಗಾಯಗೊಂಡವರು. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಮದೀನ ಮಸೀದಿ ಬೆಂಗಳೂರು ಜಲಮಂಡಳಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಅಗೆಯಲಾಗಿದೆ. ಈ ವೇಳೆ ಗೇಲ್ನ ಗ್ಯಾಸ್ ಪೈಪ್ ಲೈನ್ಗೆ ಹಾನಿಯಾಗಿ ಗ್ಯಾಸ್ ಸೋರಿಕೆಯಾಗಿದೆ. ಸೋರಿಕೆಯಾದ ಗ್ಯಾಸ್ ಸ್ಯಾನಿಟರಿ ಪೈಪ್ ಮೂಲಕ ಲೈಕಾ ಅಂಜುಂ ಮತ್ತು ಮುಬಾಶಿರಾ ಅವರ ಅಡುಗೆ ಮನೆಗೆ ಹರಡಿಕೊಂಡಿದೆ. ಗುರುವಾರ (ಮಾ.16) ರಂದು ಬೆಳಿಗ್ಗೆ 9:30ರ ಸುಮಾರಿಗೆ ಇಬ್ಬರು ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ಎರಡೂ ಮನೆಯೊಳಗೆ ಏಕಾಏಕಿ ದೊಡ್ಡ ಸ್ಪೋಟ ಸಂಭಿಸಿದೆ. ಇದರಿಂದ ಲೈಕಾ ಮತ್ತು ಮುಬಾಶಿರಾ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರು ಕೂಡಲೇ ಮನೆ ಪ್ರವೇಶಿಸಿ ಗಾಯಾಳುಗಳನ್ನು ಹೊರಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
WATCH: 3 people seriously injured after a @gailindia pipeline broke and gas leak caused an explosion in HSR layout in #Bengaluru. BWSSB was digging the road when the pipeline broke. pic.twitter.com/5JNLfYAMAF
— Darshan Devaiah B P (@DarshanDevaiahB) March 16, 2023
ಪ್ರತಿ 3 ದಿನಗಳಿಗೊಮ್ಮೆ 1 ಗ್ಯಾಸ್ ಪೈಪ್‌ಲೈನ್ ಸೋರಿಕೆ
ನಗರದಲ್ಲಿ ಪ್ರತಿ 3 ದಿನಗಳಿಗೊಮ್ಮೆ 1 ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗುತ್ತಿದೆ ಎಂದು ಗೇಲ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್‌ನ ಮನೆಗಳಲ್ಲಿ ಸಂಭವಿಸಿದ ಸ್ಫೋಟಕಕ್ಕೆ ಸಂಬಂಧಿಸಿದಂತೆ, ಮನೆಗಳಿಗೆ ಶೌಚಾಲಯಕ್ಕೆ ಒಳಚರಂಡಿ ಮೂಲಕ ಅನಿಲ ಪ್ರವೇಶಿಸಿದೆ. ಇದರಿಂದ ದುರಂತ ಸಂಭವಿಸಿದೆ. ಇದು ನಗರದಲ್ಲಿ ಎರಡನೇ ಪ್ರಕರಣವಾಗಿದ್ದು, ಮೊದಲ ಘಟನೆ 2018 ರಲ್ಲಿ ಸಿಂಗಸಂದ್ರದಲ್ಲಿ ನಡೆದಿತ್ತು.
2016 ರಲ್ಲಿ ಬೆಂಗಳೂರಿನಲ್ಲಿ ಪಿಎನ್ಜಿ ಪೂರೈಕೆ ಪ್ರಾರಂಭವಾಗಿದೆ. ದುರಂತಗಳನ್ನು ತಡೆಗಟ್ಟಲು ಸೋರಿಕೆಯನ್ನು ತ್ವರಿತವಾಗಿ ಸರಿಪಡಿಸಲಾಗಿದೆ. ಇದು ನಿಜವಾಗಿಯೂ ಸುರಕ್ಷತೆಯ ಕಾಳಜಿಯಾಗಿದೆ. BWSSB ಅಥವಾ BESCOM ಗಳು ಅನುಮತಿಯನ್ನು ಪಡೆಯದೆ ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದಕ್ಕೆ ಹಾನಿಯುಂಟಾಗುತ್ತಿದೆ ಎಂದು ಗೇಲ್ ಉಪ ಪ್ರಧಾನ ವ್ಯವಸ್ಥಾಪಕ , ಕಾರ್ಯಾಚರಣೆ ಮತ್ತು ನಿರ್ವಹಣೆ ಅಧಿಕಾರಿ ರವಿಕುಮಾರ್ ರೆಬ್ಬಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ದುರಂತ: ಗಾಯಗೊಂಡಿದ್ದ ಮೂವರು ಸಾವು, ಅನಾಥವಾದ ಹಸುಗೂಸು
ಗೇಲ್ ಬಿಡ್ಲೂಎಸ್ಎಸ್ಬಿ ಮತ್ತು ಬೆಸ್ಕಾಂಗೆ ಕಾರ್ಯಾಚರಣೆಯ ವಿಧಾನವನ್ನು ಕಳುಹಿಸಿದೆ. ಅವರು ಕೆಲಸವನ್ನು ಪ್ರಾರಂಭಿಸುವ ಮೊದಲು ಕಂಪನಿಯ ಅನುಮತಿಯನ್ನು ತೆಗೆದುಕೊಳ್ಳಬೇಕು. ದಕ್ಷಿಣ ಬೆಂಗಳೂರು 1,600 ಕಿಮೀ ವ್ಯಾಪಿಸಿರುವ PNG ಪೈಪ್‌ಲೈನ್‌ಗಳನ್ನು ಹೊಂದಿದೆ. ಪೈಪ್‌ಲೈನ್‌ನಿಂದ ಅನಿಲ ಸೋರಿಕೆ ಆರಂಭವಾದಾಗ ಅಧಿಕಾರಿಗಳ ಗಮನಕ್ಕೆ ತರುವ ಬದಲು ಕಾರ್ಮಿಕರು ಹಾನಿಗೊಳಗಾದ ಭಾಗದ ಮೇಲೆ ಮಣ್ಣು ಮುಚ್ಚಿದರು. ಆದರೆ ಇದರಿಂದ ಸೋರಿಕೆ ತಡೆಯಲು ಸಾಧ್ಯವಾಗಲಿಲ್ಲ, ಹೀಗಾಗಿ ಕೆಲಸದ ಸ್ಥಳದ ಸಮೀಪವಿರುವ ಮನೆಯ ಅಡುಗೆಮನೆಗೆ ಅನಿಲ ಹರಡಿತು ಎಂದರು.
ಬೆಂಗಳೂರಿನಂತಹ ನಗರದಲ್ಲಿ ಹಾನಿ ಸಂಭವಿಸುತ್ತಲೇ ಇದೆ ಅದನ್ನು ಸರಿಪಡಿಸಲು ಗೇಲ್ ಸಾಕಷ್ಟು ಸಮರ್ಥವಾಗಿದೆ. ಆದಾಗ್ಯೂ, ಅನಿಲ ಸೋರಿಕೆಯ ಬಗ್ಗೆ ಗೇಲ್ಗೆ ತಿಳಿಸಲು ವಿಫಲವಾದ ಬಿಡ್ಲೂಎಸ್ಎಸ್ಬಿಯ ಅಜ್ಞಾನವೇ ದುರಂತಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 am, Sat, 18 March 23