ಲಾಂಗ್ ಡ್ರೈವ್ ಹೋಗಿದ್ದ ಲವರ್ಸ್ ಮೇಲೆ ಹಲ್ಲೆ ಮಾಡಿ ಸುಲಿಗೆ ಕೇಸ್: ಮೂವರ ಬಂಧನ
ಕಾರವಾರದಲ್ಲಿ ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಹಿಳೆಗೆ ನ್ಯಾಯಾಲಯ 25,500 ರೂ. ದಂಡ ವಿಧಿಸಿದೆ.
ಬೆಂಗಳೂರು: ಲಾಂಗ್ ಡ್ರೈವ್ ಹೋಗಿದ್ದ ಲವರ್ಸ್ಗೆ ಹಲ್ಲೆ (Attack) ಮಾಡಿ ಸುಲಿಗೆ ಮಾಡಿದ್ದ ಮೂವರನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅನಿಲ್, ಕಿರಣ್, ಸುಬ್ರಹ್ಮಣ್ಯ ಬಂಧಿತ ಸುಲಿಗೆಕೋರರು. ಜುಲೈ 9 ರಂದು ಮಾರತ್ತಹಳ್ಳಿಯಿಂದ ದೇವನಹಳ್ಳಿಗೆ FZ ಬೈಕ್‌ನಲ್ಲಿ ಲಾಂಗ್ ಡ್ರೈವ್ಗೆ ಜೋಡಿ ಹೋಗಿತ್ತು. ಎಂಜಿನಿಯರ್ ಕಿರಣ್ ಎಂಬಾತ ತನ್ನ ಗೆಳತಿ ಜೊತೆಗೆ ಲಾಂಗ್ ಡ್ರೈವ್ ಹೋಗಿದ್ದ. ವಾಪಸ್ ಬರೋ ವೇಳೆ ದೇವನಹಳ್ಳಿ ಬೈಪಾಸ್ ಬಳಿ ಮೂತ್ರ ವಿಸರ್ಜನೆಗೆ ಬೈಕ್ ನಿಲ್ಲಿಸಿದ್ದ. ಈ ವೇಳೆ ಕಬ್ಬಿಣದ ರಾಡ್ ಹಿಡಿದು ಸುಲಿಗೆಕೋರರು ಎಂಟ್ರಿಕೊಟ್ಟಿದ್ದು, ಕಿರಣ್ ಎಡಗಾಲಿಗೆ ಹೊಡೆದು ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಕಸಿದಿಕೊಂಡಿದ್ದರು. ನಂತರ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ರು, ಹಣ ಕೊಡದಿದ್ರೆ ನಿನ್ನ ಲವ್ವರ್ನ್ನ ಇಲ್ಲೆ ಮುಗಿಸ್ತೀವಿ ಎಂದಿದ್ರು. ನನ್ನ ಬಳಿ ಹಣವಿಲ್ಲ ಎಟಿಎಂನಲ್ಲಿ ಡ್ರಾ ಮಾಡಿ ಕೊಡ್ತೀನಿ ಎಂದು ಕಿರಣ್ ಹೇಳಿದ್ದ.
ನಂತರ ಹುಡುಗಿಯನ್ನ ಒತ್ತೆಯಾಳಿಗಿರಿಸಿಕೊಂಡ ಇಬ್ಬರು ಸುಲಿಗೆಕೋರರು, ಕಡೆಗೆ ಕಿರಣ್ ಜೊತೆ ಓರ್ವ ಬೈಕ್‌ನಲ್ಲಿ ತೆರಳಿ ದೇವನಹಳ್ಳಿ ವಿಜಿಪುರ ಕ್ರಾಸ್ ಬಳಿ ಎಟಿಎಂನಿಂದ 15 ಸಾವಿರ ಹಣ ಡ್ರಾ ಮಾಡಿದ್ದಾನೆ. ನಂತರ ಕಿರಣ್ ನನ್ನ ಬೈಕ್‌ನಲ್ಲಿ ಚಿಕ್ಕಬಳ್ಳಾಪುರ ರಸ್ತೆಯ ಪಲ್ಲವಿ ಡಾಬಾಗೆ ಕರೆದೊಯ್ಯುವ ಓರ್ವ ಸುಲಿಗೆಕೋರ, ಪಲ್ಲವಿ ಡಾಬಾದಲ್ಲಿ ತನ್ನಿಬ್ಬರು ಗೆಳೆಯರಿಗೆ ಊಟ ಮತ್ತು ಎಣ್ಣೆ ಪಾರ್ಸಲ್ ತೆಗೆದುಕೊಳ್ಳುತ್ತಾನೆ. ಕಡೆಗೆ ಕಿರಣ್ ಹಾಗೂ ಆತನ ಗೆಳತಿಯನ್ನ ಆರೋಪಿಗಳಾದ ಅನಿಲ್, ಪವನ್, ಸುಬ್ರಮಣಿ ಬಿಟ್ಟು ಕಳಿಸಿದ್ದಾರೆ.
ಅಮಾಯಕ ವ್ಯಕ್ತಿಯನ್ನು ಕಾರಿನಲ್ಲಿ ಸುಟ್ಟುಹಾಕಿದ್ದ ಪ್ರಕರಣ: ನಾಲ್ವರು ಕೊಲೆ ಆರೋಪಿಗಳಿಗೆ 5 ದಿನ ಪೊಲೀಸ್ ಕಸ್ಟಡಿ
ಉಡುಪಿ: ಅಮಾಯಕ ವ್ಯಕ್ತಿಯನ್ನು ಕಾರಿನಲ್ಲಿ ಸುಟ್ಟುಹಾಕಿದ್ದ ಪ್ರಕರಣ ಸಂಬಂಧ ನಾಲ್ವರು ಕೊಲೆ ಆರೋಪಿಗಳಿಗೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸದಾನಂದ, ಶಿಲ್ಪಾಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಉಡುಪಿ ಜಿಲ್ಲೆ ಬೈಂದೂರಿನ ಹೇನಬೇರ್ ಬಳಿ ಘಟನೆ ನಡೆದಿತ್ತು. ವ್ಯಕ್ತಿಗೆ ನಿದ್ದೆ ಮಾತ್ರೆ ತಿನ್ನಿಸಿ ಜೀವಂತವಾಗಿ ಸುಟ್ಟು ಹಾಕಿದ್ದರು. ಕಾರ್ಕಳದಲ್ಲಿ ಇಬ್ಬರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಮಣಿಪಾಲ ಪೇಟೆಯ ಖಾಸಗಿ ಲಾಡ್ಜ್ನ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಫ್ಯಾಮಿಲಿ ರೆಸ್ಟೋರೆಂಟ್ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸತತ ಕಾರ್ಯಚರಣೆಯಿಂದ ಬೆಂಕಿ ಆರಿಸಲಾಗಿದೆ.
ಇದನ್ನೂ ಓದಿ: Rape: ಮದುವೆಯಾಗುವ ಆಮಿಷವೊಡ್ಡಿ 14 ವರ್ಷದ ಬಾಲಕಿ ಮೇಲೆ 2 ತಿಂಗಳಿಂದ ಅತ್ಯಾಚಾರ ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಹಿಳೆಗೆ ದಂಡ
ಉತ್ತರ ಕನ್ನಡ: ಕಾರವಾರದಲ್ಲಿ ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಮಹಿಳೆಗೆ ನ್ಯಾಯಾಲಯ 25,500 ರೂ. ದಂಡ ವಿಧಿಸಿದೆ. ಜು.13ರಂದು ಸ್ಕೂಟರ್ ಚಾಲನೆ ಮಾಡುವಾಗ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆ PSI ನಾಗಪ್ಪ ಮತ್ತು ಸಿಬ್ಬಂದಿ ಕೈಗೆ ಅಪ್ರಾಪ್ತ ಸಿಕ್ಕಿಬಿದ್ದಿದ್ದಾನೆ. ಸಂಚಾರಿ ನಿಯಮ ಉಲ್ಲಂಘನೆ ಅಡಿ ಸ್ಕೂಟರ್ ಜಪ್ತಿ ಮಾಡಲಾಗಿದೆ.
ಮೂವರು ದರೋಡೆಕೋರರ ಬಂಧನ
ಚಿತ್ರದುರ್ಗ: ಮೂವರು ದರೋಡೆಕೋರರನ್ನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್, ವೆಂಕಟೇಶ್, ಅಭಿಷೇಕ್ ಬಂಧತ ಆರೋಪಿಗಳು. ಆಟೋ, ಮಾರಕಾಸ್ತ್ರ, ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆದ್ದಾರಿಯಲ್ಲಿ ಆರೋಪಿಗಳು ದರೋಡೆ ಮಾಡುತ್ತಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Published On - 10:30 am, Fri, 15 July 22