ಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಕಂಪನಿಗೆ ಯುವತಿಯಿಂದ ಬಾಂಬ್ ಬೆದರಿಕೆ ಕರೆ, ಮುಂದೇನಾಯ್ತು?

| Updated By: ವಿವೇಕ ಬಿರಾದಾರ

Updated on: Nov 14, 2023 | 3:09 PM

ಬೆಳಗಾವಿ ಮೂಲದ ಯುವತಿ ಟಿ.ಸಿ.ಎಸ್​ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಇತ್ತೀಚಿಗೆ ಕೆಲಸದಿಂದ ತೆಗೆಯಲಾಗಿತ್ತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗೆ ಯುವತಿ ಕ್ಯಾಬ್ ಚಾಲಕನನ್ನು ಪರಿಚಯ ಮಾಡಿಕೊಂಡಿದ್ದಳು. ಪರಿಚಿತ ಕ್ಯಾಬ್ ಚಾಲಕನಿಗೆ ಕುಡಿದ ಮತ್ತಿನಲ್ಲಿ ಯುವತಿ ಕರೆ ಮಾಡಿ... ಮುಂದೇನಾಯ್ತು ಇಲ್ಲಿದೆ ಓದಿ

ಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಕಂಪನಿಗೆ ಯುವತಿಯಿಂದ ಬಾಂಬ್ ಬೆದರಿಕೆ ಕರೆ, ಮುಂದೇನಾಯ್ತು?
ಟಿಸಿಎಸ್​ ಕಂಪನಿ
Follow us on

ಬೆಂಗಳೂರು ನ.14: ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡ ಯುವತಿ (Young Girl) ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿ.ಸಿ.ಎಸ್​ ಕಂಪನಿಗೆ ​ಹುಸಿ ಬಾಂಬ್ ಕರೆ (Bomb threat) ಮಾಡಿದ್ದಾಳೆ. ಬೆಳಗಾವಿಯ ಶೃತಿ ಶೆಟ್ಟಿ ಹುಸಿ ಬಾಂಬ್​ ಕರೆ ಮಾಡಿದ ಆರೋಪಿ. ಶೃತಿ ಶೆಟ್ಟಿ  ಈ ಹಿಂದೆ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಎಂಬಿಎ ಓದುವ ಸಲುವಾಗಿ ಕೆಲಸ ಬಿಟ್ಟು ಬೆಳಗಾವಿಗೆ ಬಂದು ವಾಪಸಾಗಿದ್ದಳು. ಆದರೆ ಅದೇನು ತಿಳಿಯಿತು ಏನೊ ಯುವತಿ ಶೃತಿ ಶೆಟ್ಟಿ ಅರ್ಧಕ್ಕೆ ಓದು ನಿಲ್ಲಿಸಿ‌ ಮತ್ತೆ ಕೆಲಸಕ್ಕೆ ಸೇರಬೇಕೆಂದು ಬೆಂಗಳೂರಿಗೆ ಹೋಗಿದ್ದಳು. ಈ ಹಿಂದೆ ಕೆಲಸ ಮಾಡುತ್ತಿದ್ದ ಟಿಸಿಎಸ್ ಕಂಪನಿಯಲ್ಲೇ ಕೆಲಸಕ್ಕೆ ಮನವಿ ಮಾಡಿದಳು. ಆದರೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಅಂತ ಕಂಪನಿಯವರು ಹೇಳಿದ್ದರು.

ಇದರಿಂದ ಮನನೊಂದು ಶೃತಿ ಶೆಟ್ಟಿ ಬೆಳಗಾವಿಗೆ ವಾಪಸ್ ಆಗಿದ್ದಳು. ಕೆಲಸ ಸಿಗದಿದ್ದಕ್ಕೆ ಶೃತಿ ಶೆಟ್ಟಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಶೃತಿ ಶೆಟ್ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕ್ಯಾಬ್ ಚಾಲಕನನ್ನು ಪರಿಚಯ ಮಾಡಿಕೊಂಡಿದ್ದಳು. ಇಂದು (ನ.14) ಬೆಳಿಗ್ಗೆ ಶೃತಿ ಶೆಟ್ಟಿ ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನಿಗೆ ಕರೆ ಮಾಡಿ ಕಂಪನಿಯ ಬಿ ಬ್ಲಾಕ್​ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಳು.

ಇದನ್ನೂ ಓದಿ: ಮಸೀದಿ ಸಿಬ್ಬಂದಿಗಳ ಮೇಲಿನ ಕೋಪಕ್ಕೆ ಕುಚೇಷ್ಟೇ; ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿಯ ಬಂಧನ

ಕ್ಯಾಬ್​ ಚಾಲಕ ಈ ವಿಚಾರವನ್ನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ತಿಳಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಉದ್ಯೋಗಿಗಳು ಕಂಪನಿಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಆಗಮಿಸಿ ಮೂಲೆ-ಮೂಲೆ ಜಾಲಾಡಿದ ನಂತರ ಇದೊಂದು ಹುಸಿ ಬಾಂಬ್​ ಕರೆ ಎಂದು ಖಚಿತವಾಗಿದೆ.  ಪೊಲೀಸರ ತನಿಖೆ ವೇಳೆ ಯುವತಿ ಕರೆ ಮಾಡಿರುವುದು ಕನ್ಫರ್ಮ್ ಆಗಿದ್ದು, ಶೃತಿ ಶೆಟ್ಟಿಯನ್ನ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:32 am, Tue, 14 November 23