Bengaluru: ನಕಲಿ ಬ್ರ್ಯಾಂಡ್ನ ಶರ್ಟ್ ಗೋದಾಮಿನ ಮೇಲೆ ದಾಳಿ
Crime News: ನಾಯಂಡಹಳ್ಳಿಯಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಲಾಗಿದೆ. ರಾಹುಲ್ ಅಂಚಲಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಭೋರ್ ಸೇಥಿ ಎಂಬವರು ನೀಡಿದ ದೂರಿನ ಮೇರೆಗೆ ದಾಳಿ ಮಾಡಲಾಗಿದೆ.
ಬೆಂಗಳೂರು: ನಕಲಿ ಬ್ರ್ಯಾಂಡ್ನ ಶರ್ಟ್ ಗೋದಾಮಿನ ಮೇಲೆ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪಶ್ಚಿಮ ವಿಭಾಗದ ಪೊಲೀಸರಿಂದ ನಾಯಂಡಹಳ್ಳಿಯಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಲಾಗಿದೆ. ರಾಹುಲ್ ಅಂಚಲಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಭೋರ್ ಸೇಥಿ ಎಂಬವರು ನೀಡಿದ ದೂರಿನ ಮೇರೆಗೆ ದಾಳಿ ಮಾಡಲಾಗಿದೆ.
ಇಲ್ಲಿ 6000- 7000 ರೂಪಾಯಿ ಬೆಲೆಯ ಶರ್ಟ್ 350 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. 1,210 ನಕಲಿ ಬ್ರ್ಯಾಂಡ್ನ ಶರ್ಟ್, 1060 ಲ್ಯಾಕೋಸ್ಟ್ ಟ್ಯಾಗ್, 4,250 ಲ್ಯಾಕೋಸ್ಟ್ ಲೇಬಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಸೆಕ್ಷನ್ 212/2021, ಯು/ಎಸ್ 51(ಎ), 63 ಹಕ್ಕುಸ್ವಾಮ್ಯ ಕಾಯ್ದೆ, 420, 511 IPC ಅಡಿ ಕೇಸ್ ದಾಖಲು ಮಾಡಲಾಗಿದೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರಾಂಡ್ ಹೆಸರು, ಲೋಗೊ, ಡಿಸೈನ್ ನ ಹಕ್ಕು ದುರುಪಯೋಗದ ಆರೋಪ ಕೇಳಿಬಂದಿದೆ.
ನೆಲಮಂಗಲ: ಮಕ್ಕಳನ್ನು ಬಳಸಿ ಚಿನ್ನಾಭರಣ ದೋಚುವ ಗ್ಯಾಂಗ್ ಬಗ್ಗೆ ದೂರು ಚಲಿಸುತ್ತಿದ್ದ ಬಸ್ಸಿನಲ್ಲಿ ಮಕ್ಕಳನ್ನು ಬಳಸಿ ಚಿನ್ನಾಭರಣಗಳನ್ನು ದೋಚುವ ಗ್ಯಾಂಗ್ ಪ್ರಕರಣಕ್ಕೆ ಸಂಬಂಧಿಸಿ ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೆರಡು ಪ್ರಕರಣ ದಾಖಲು ಮಾಡಲಾಗಿದೆ. ತುಮಕೂರಿನಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದ ರಂಗನಾಥ ಮತ್ತು ಅಶ್ವಿನಿ ದಂಪತಿಗಳಿಂದ ಬಾಗಲಗುಂಟೆ ಠಾಣೆಗೆ ದೂರು ನೀಡಲಾಗಿದೆ. ಯಲಹಂಕದಿಂದ ಜಾಲಹಳ್ಳಿ ಕ್ರಾಸ್ ಗೆ ಬರುತ್ತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಶಿಕ್ಷಕಿ ಭಾರತಿ ಶರ್ಮಾ ಅವರಿಂದ ಸೋಲದೇವನಹಳ್ಳಿ ಠಾಣೆಗೆ ಮತ್ತೊಂದು ದೂರು ನೀಡಲಾಗಿದೆ.
ಅಶ್ವಿನಿ, ರಂಗನಾಥ ದಂಪತಿಗಳಿಗೆ ಸೇರಿದ ಬ್ಯಾಗ್ ನಲ್ಲಿ 3 ಲಕ್ಷ ಬೆಲೆಬಾಳುವ 70 ಗ್ರಾಂ ಚಿನ್ನಾಭರಣಗಳು, ಶಿಕ್ಷಕಿ ಭಾರತಿ ಶರ್ಮಾ ಅವರ 4 ಲಕ್ಷ ಬೆಲೆಬಾಳುವ 91 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿದೆ. 15 ದಿನದ ಹಿಂದೆಯಷ್ಟೇ ಯಲಹಂಕದಿಂದ ಬರುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಸಾವಿತ್ರಮ್ಮ ಬಳಿ ಒಂದುವರೆ ಲಕ್ಷ ಬೆಲೆಬಾಳುವ 35 ಗ್ರಾಂ ಚಿನ್ನ ಕಳವಾಗಿತ್ತು.
ಇದನ್ನೂ ಓದಿ: ವಿಜಯಪುರ: ಯುವಕನ ಕೊಲೆ; ಭೀಮಾತೀರದಲ್ಲಿ ಕೇಳಿಬಂತು ಮರ್ಯಾದೆ ಹತ್ಯೆ ಆರೋಪ
ಇದನ್ನೂ ಓದಿ: ಕೋಲಾರ: ಪತ್ನಿಯನ್ನು ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ