ಡಿಪೋ ಮ್ಯಾನೇಜರ್ ಕಿರುಕುಳ: ನೌಕರನ ಶವವಿಟ್ಟು ಪತ್ನಿಯಿಂದ ಪ್ರತಿಭಟನೆ, ತಂದೆ ಕಳೆದುಕೊಂಡು ಕಣ್ಣೀರಿಡುತ್ತಿರುವ ಅಂಗವಿಕಲ ಮಗಳು
ಪ್ರತಿಭಟನಾ ಸ್ಥಳಕ್ಕೆ ಆರ್ಆರ್ ನಗರ ಪೊಲೀಸರು ಭೇಟಿ ನೀಡಿ ಪ್ರತಿಭಟನೆ ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ಶವವನ್ನು ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು: ಆರ್ಆರ್ ನಗರ ಬಿಎಂಟಿಸಿ ಡಿಪೋ ಮುಂದೆ ಬಿಎಂಟಿಸಿ ನೌಕರ ಹೊಳೆಬಸಪ್ಪ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ಹೊಳೆಬಸಪ್ಪ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಧರಣಿ ನಡೆಸುತ್ತಿದ್ದು ಕೆಆರ್ಎಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ. ನೂರಾರು ಸಂಖ್ಯೆಯಲ್ಲಿ ನೌಕರರು ಜಮಾಯಿಸಿ ಸ್ಥಳಕ್ಕೆ ಸಾರಿಗೆ ಸಚಿವರು ಬರುವಂತೆ ಪಟ್ಟು ಹಿಡಿದಿದ್ದಾರೆ. ಹಾಗೂ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಬಂಧಿಸಬೇಕು ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆ ವೇಳೆ ಹೊಳೆಬಸಪ್ಪ ಪತ್ನಿ ತಲೆ ತಿರುಗಿ ಬಿದ್ದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆರ್ಆರ್ ನಗರ ಪೊಲೀಸರು ಭೇಟಿ ನೀಡಿ ಪ್ರತಿಭಟನೆ ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ಶವವನ್ನು ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಆದ್ರೆ ಇತ್ತ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯನನ್ನು ವಶಕ್ಕೆ ಪಡೆಯಬೇಕು. ಆತನನ್ನು ಸಸ್ಪೆಂಡ್ ಮಾಡಬೇಕು, ಆದರೆ ಆತನಿಗೆ ಬೇರೆ ಡಿಪೋದಲ್ಲಿ ಡ್ಯೂಟಿ ಮಾಡಲು ಅವಕಾಶ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ನೌಕರ ಆತ್ಮಹತ್ಯೆ ಮಾಡಿಕೊಂಡ್ರು ಸ್ಥಳಕ್ಕೆ ಸಚಿವರು ಬಂದಿಲ್ಲ. ಒಬ್ಬ ನೌಕರ, ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೌಜನಕ್ಕೂ ಸಾರಿಗೆ ಸಚಿವ ಶ್ರೀ ರಾಮುಲು, ಬಿಎಂಟಿಸಿ ಎಂಡಿ ಜಿ. ಸತ್ಯವತಿ ಹಾಗೂ ನಂದೀಶ್ ರೆಡ್ಡಿ ಭೇಟಿ ನೀಡಿಲ್ಲ. ಸಾವಿಗೆ ಕಾರಣನಾದ ಡಿಪೋ ಮ್ಯಾನೇಜರ್ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆತನಿಗೆ ಪಕ್ಕದ ಡಿಪೋ ಗೆ ಶಿಫ್ಟ್ ಮಾಡಿ ಸೇಫ್ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಒಂದು ಗಂಟೆಯಿಂದ ಡಿಪೋ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಲಾಗುತ್ತಿದೆ. ತಂದೆಯನ್ನು ಕಳೆದುಕೊಂಡು ಅಂಗವಿಕಲ ಮಗಳು ಕಣ್ಣೀರು ಹಾಕುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:34 pm, Tue, 30 August 22