AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರೂಣ ಹತ್ಯೆ ಪತ್ತೆ ಪ್ರಕರಣ; ಆಸ್ಪತ್ರೆಗಳಿಂದ ವರದಿ ಕೇಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಭ್ರೂಣ ಹತ್ಯೆ ಹಾಗೂ ಪತ್ತೆಯ ಬಗ್ಗೆ ವರದಿ ನೀಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಭ್ರೂಣ ಹತ್ಯೆ ಪತ್ತೆ ಪ್ರಕರಣ; ಆಸ್ಪತ್ರೆಗಳಿಂದ ವರದಿ ಕೇಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ದಿನೇಶ್​ ಗೂಂಡು ರಾವ್​
Vinay Kashappanavar
| Edited By: |

Updated on: Nov 29, 2023 | 10:22 PM

Share

ಬೆಂಗಳೂರು, ನ.29: ರಾಜ್ಯದಲ್ಲಿ ಭ್ರೂಣ ಹತ್ಯೆ ಪತ್ತೆ ಪ್ರಕರಣ ಬೆಳಕಿಗೆ ಬಂದ ಹಿನ್ನಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಭ್ರೂಣ ಹತ್ಯೆ ಹಾಗೂ ಪತ್ತೆಯ ಬಗ್ಗೆ ವರದಿ ನೀಡುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಭ್ರೂಣ ಹತ್ಯೆ ಪರಿಶೀಲಿಸಿರುವ ಬಗ್ಗೆ ವಿಸ್ತೃತ ಅಂಕಿ-ಅಂಶಗಳು, ಎಷ್ಟು ದಾಳಿ ಮಾಡಲಾಗಿದೆ, ಎಷ್ಟು ಸ್ಕ್ಯಾನಿಂಗ್ ಮಿಷನ್ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಈ ಎಲ್ಲದರ ಸಂಪೂರ್ಣ ವಿವರ ಕುರಿತು ವರದಿ ನೀಡುವಂತೆ ತಿಳಿಸಿದ್ದಾರೆ.

ಒಟ್ಟು ಆರು ಅಂಶಗಳನ್ನು ಉಲ್ಲೇಖಿಸಿರುವ ದಿನೇಶ್ ಗುಂಡೂರಾವ್

1. PC&PNDT ಪ್ರಕಾರ ರಾಜ್ಯ ನೋಡಲ್ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಪರಿಶೀಲಿಸಿರುವ ಅಂಕಿ ಅಂಶ.. ಎಷ್ಟು ಸ್ಕ್ಯಾನಿಂಗ್ ಸೆಂಟರ್ & ಆಸ್ಪತ್ರೆಯಲ್ಲಿ ಪರಿಶೀಲನೆ ನಡೆದಿದೆ?

2. ಪರಿಶೀಲನೆ ನಡೆಸಿರುವ ಕಡೆ PC ಮತ್ತು PNDT ಕಾಯ್ದೆ ಉಲ್ಲಂಘನೆ ಆಗಿದ್ಯಾ? ಆಗಿದ್ದಲ್ಲಿ ಕೋರ್ಟ್‌ನಲ್ಲಿ ಎಷ್ಟು ಕೇಸ್ ನಡೀತಿದೆ ಮತ್ತು ಯಾವ ಹಂತದಲ್ಲಿದೆ?

3. PC ಮತ್ತು PNDT ಕಾಯ್ದೆ ಉಲ್ಲಂಘಿಸಿದವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ?

4. PC ಮತ್ತು PNDT ಕಾಯ್ದೆ ಪ್ರಕಾರ ಎಷ್ಟು ಸ್ಕ್ಯಾನಿಂಗ್ ಮೆಷಿನ್ ಜಪ್ತಿ ಮಾಡಲಾಗಿದೆ? ವಶಪಡಿಸಿದ ಮೆಷಿನ್ ಕುರಿತು 48 ಗಂಟೆಯಲ್ಲಿ ಕೋರ್ಟ್‌ನಲ್ಲಿ ಎಷ್ಟು ಕೇಸ್ ಹಾಕಲಾಗಿದೆ?

5. ಪರಿವೀಕ್ಷಣೆ ಸಮಯದಲ್ಲಿ MTP ಕಾಯ್ದೆ ಅನುಸರಿಸಿದ್ದರ ಬಗ್ಗೆ ವರದಿ ನೀಡಿ. (MTP- Medical Termination of Pregnancy Act, 1971)

6. ರಾಜ್ಯ ಪರಿವೀಕ್ಷಣೆ ಹಾಗೂ ಉಸ್ತುವಾರಿ ಸಮಿತಿ (SIMC) ಜಿಲ್ಲಾ ಪರಿವೀಕ್ಷಣೆ ಹಾಗೂ ಉಸ್ತುವಾರಿ ಸಮಿತಿ (DIMC)

ಈ ಎರಡೂ ಸಮಿತಿ ಇಲ್ಲಿಯವರೆಗೆ ಮಾಡಿರುವ ಪರಿವೀಕ್ಷಣೆ ಬಗ್ಗೆ ವರದಿ ನೀಡಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ