ರಾಜ್ಯ ಕಾಂಗ್ರೆಸ್‌ನಲ್ಲಿ ಪರಿಷತ್​ ಟಿಕೆಟ್​ಗಾಗಿ ಜೋರಾದ ಫೈಟ್: ಮತ್ತೆ ದೆಹಲಿಗೆ ಹಾರಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: May 23, 2022 | 12:00 PM

ತಿಪ್ಪಣ್ಣ ಕಮಕನೂರ್ ಪರ ಮಲ್ಲಿಕಾರ್ಜುನ್ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಪಸಂಖ್ಯಾತರ ಕೋಟಾದಡಿ ಜಬ್ಬರ್ ಮತ್ತು ನಿವೇದಿತ್ ಆಳ್ವಾ ಕೂಡ ಫೈಟ್​ ನಡೆಸಿದ್ದಾರೆ. 

ರಾಜ್ಯ ಕಾಂಗ್ರೆಸ್‌ನಲ್ಲಿ ಪರಿಷತ್​ ಟಿಕೆಟ್​ಗಾಗಿ ಜೋರಾದ ಫೈಟ್: ಮತ್ತೆ ದೆಹಲಿಗೆ ಹಾರಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಪರಿಷತ್​ ಟಿಕೆಟ್​ಗಾಗಿ ಫೈಟ್ ಜೋರಾಗಿದ್ದು, ನಿನ್ನೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೆ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್​​ನಲ್ಲಿ ಟಿಕೆಟ್​ಗಾಗಿ ರೇಸ್‌ನಲ್ಲಿರುವ ಎಂ.ಸಿ.ವೇಣುಗೋಪಾಲ್, ಎಂ.ಆರ್.ಸೀತಾರಾಮ್, ತಿಪ್ಪಣ್ಣ ಕಮಕನೂರ್, ಎಸ್​.ಆರ್.ಪಾಟೀಲ್​, ಎಸ್‌.ಆರ್‌.ಪಾಟೀಲ್ ಪರ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್ ಮಾಡಿದರೆ, M.R.ಸೀತಾರಾಮ್, ವೇಣುಗೋಪಾಲ್ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದು, ತಿಪ್ಪಣ್ಣ ಕಮಕನೂರ್ ಪರ ಮಲ್ಲಿಕಾರ್ಜುನ್ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಪಸಂಖ್ಯಾತರ ಕೋಟಾದಡಿ ಜಬ್ಬರ್ ಮತ್ತು ನಿವೇದಿತ್ ಆಳ್ವಾ ಕೂಡ ಫೈಟ್​ ನಡೆಸಿದ್ದಾರೆ.

ಪರಮೇಶ್ವರ್ ಗೈರಿನ ಬಗ್ಗೆ ಸಾಕಷ್ಟು ಚರ್ಚೆ: ಜಿಲ್ಲೆಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ

ತುಮಕೂರು: ನಿನ್ನೆ (ಮೇ 22) ಜಿಲ್ಲೆಯಲ್ಲಿ ಎರಡು ಬೃಹತ್ ಸಮಾವೇಶಗಳು ನಡೆದಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಬಣದಿಂದ ಮೊದಲು ಅಹಿಂದ ಅಸ್ತ್ರ ಪ್ರಯೋಗಿಸಲಾಗಿದೆ. ಇದರಂತೆ ನಿನ್ನೆ ಮಡಿವಾಳ ಸಮಾಜದ ರಾಜ್ಯ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಜಿಲ್ಲಾ ಸಮಾವೇಶ ನಡೆಸಲಾಗಿದೆ. ಆದರೆ ಈ ಸಮಾವೇಶಕ್ಕೆ ಡಿಸಿಎಮ್ ಡಾ. ಜಿ ಪರಮೇಶ್ವರ್ ಭಾಗಿಯಾಗಿರಲಿಲ್ಲ. ಜಿಲ್ಲೆಯಲ್ಲಿ ಇದ್ದರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಮಡಿವಾಳ ಸಮಾಜದ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ಮೊದಲನೆಯದಾಗಿ ಹೆಸರನ್ನ ಹಾಕದ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಪರಮೇಶ್ವರ್ ಹೆಸರು ಬದಲು ರಾಮಲಿಂಗರೆಡ್ಡಿಯವರ ಹೆಸರು ಮುದ್ರಿಸಿದಕ್ಕೆ ಅಸಮಾಧಾನದ ವ್ಯಕ್ತಪಡಿಸಲಾಗಿದೆ. ಮಡಿವಾಳ ಸಮಾಜದ ಮುಖಂಡರ ಮೇಲೆ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ. ಹೆಗ್ಗೆರೆಯ ಸಿದ್ದಾರ್ಥ ಮೆಡಿಕಲ್ ಕಾಲೇಜ್ ಬಳಿ ಸಮಾವೇಶ ನಡೆದಿದೆ. ಪರಮೇಶ್ವರ್ ಗೈರಿನ ಬಗ್ಗೆ ಜಿಲ್ಲೆಯ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಪೋಟವಾಯ್ತ ಅಂತಾ ಚರ್ಚೆ ನಡೆಯುತ್ತಿದ್ದು, ಟಿವಿ9 ಗೆ ಕಾಂಗ್ರೆಸ್ ಮೂಲಗಳ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಹಿಜಾಬ್​ ಧರಿಸಿ ಕಾಣಿಸಿಕೊಳ್ಳುತ್ತಿರುವ ಸ್ಟಾರ್​ ನಟಿಯರು; ಕುತೂಹಲ ಹುಟ್ಟುಹಾಕಿವೆ ಈ ಪಾತ್ರಗಳು

ಬಳಿಕ ಮತ್ತೊಂದು ಆಹ್ವಾನ ಪತ್ರಿಕೆಯನ್ನ ಮುದ್ರಿಸಿರುವ ಮಡಿವಾಳ ಸಮಾಜದ ಮುಖಂಡರು, ಪರಮೇಶ್ವರ್ ಹೆಸರು ಮೊದಲು ಮುದ್ರಿಸಿ ಉಳಿದ ನಾಯಕರ ಹೆಸರು ಬಳಿಕ ಮುದ್ರಿಸಿದ್ದಾರೆ. ಆದರೂ ಸಮಾವೇಶಗಳಿಗೆ ಪರಮೇಶ್ವರ್ ಹೋಗಿಲ್ಲ. ಜೊತೆಗೆ ಮಡಿವಾಳ ಸಮಾವೇಶದ ಉಸ್ತುವಾರಿ ಬಹುತೇಕ ಮಾಜಿ ಶಾಸಕ ಕೆಎನ್ ರಾಜಣ್ಣ ಹಾಗೂ ಪುತ್ರ ಎಮ್ ಎಲ್ ಸಿ ರಾಜೇಂದ್ರ ವಹಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಪರಮೇಶ್ವರ್ ಯಾಕೆ ಬಂದಿಲ್ಲ, ಏನಾಯ್ತು ಅಂತಾ ಡಿ.ಕೆ.ಶಿವಕುಮಾರ ಕೇಳಿದ್ದಾರೆ. ಅಲ್ಲದೇ ರಮ್ಯಾ ಟ್ವಿಟ್ ವಿಚಾರವಾಗಿ ನಲಪಾಡ್ ವಿರುದ್ಧ ರಾಜೇಂದ್ರ ವಾಗ್ದಾಳಿ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಏನು ರಮ್ಯಾ ಬಗ್ಗೆ ನಲಪಾಡ್ ವಿಚಾರವಾಗಿ ಮಾತನಾಡಿದಿಯಲ್ಲ ಅಂತಾ ಕೇಳಿರುವ ಡಿ.ಕೆ. ಶಿವಕುಮಾರ, ನಿನ್ನೆ ಮಡಿವಾಳ ಸಮಾಜದ ಸಮಾವೇಶಕ್ಕೆ ಆಗಮಿಸಿದ ವೇಳೆ ಪ್ರಸಂಗ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.