ಅವ್ಯವಹಾರ ಬಯಲು ಮಾಡಿದಕ್ಕೆ RTI ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ, ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ RTI ಕಾರ್ಯಕರ್ತ ಬಚಾವ್

ಯಲಹಂಕ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ರನ್ನು ರಕ್ಷಣೆ ಮಾಡಿದ್ದಾರೆ. ಘಟನೆ ವೇಳೆ ಅದೇ ರಸ್ತೆಯಲ್ಲೇ ತೆರಳುತ್ತಿದ್ದ ಯಲಹಂಕ ಇನ್ಸ್ಪೆಕ್ಟರ್ ಸತ್ಯನಾರಾಯಣ್, ಹೆಚ್.ಎಂ.ವೆಂಕಟೇಶ್ ಕಾರು ಅಡ್ಡಗಟ್ಟಿದ್ದನ್ನು ಗಮನಿಸಿದ್ದರು. ಬಳಿಕ ಪಿಐ ಸತ್ಯನಾರಾಯಣ ತಮ್ಮ ಪೊಲೀಸ್ ಜೀಪ್ನಿಂದ ಇಳಿದು ಓಡಿಹೋಗಿ ವೆಂಕಟೇಶ್ರನ್ನು ರಕ್ಷಿಸಿದ್ದಾರೆ.

ಅವ್ಯವಹಾರ ಬಯಲು ಮಾಡಿದಕ್ಕೆ RTI ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ, ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ RTI ಕಾರ್ಯಕರ್ತ ಬಚಾವ್
ಅವ್ಯವಹಾರ ಬಯಲು ಮಾಡಿದಕ್ಕೆ RTI ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ, ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ RTI ಕಾರ್ಯಕರ್ತ ಬಚಾವ್
Updated By: ಆಯೇಷಾ ಬಾನು

Updated on: Apr 22, 2022 | 8:47 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ RTI ಕಾರ್ಯಕರ್ತ ವೆಂಕಟೇಶ್ ಮೇಲೆ ಹಲ್ಲೆ ಯತ್ನ ನಡೆದಿದೆ. ದುಷ್ಕರ್ಮಿಗಳ ಗ್ಯಾಂಗ್ ಹೆಚ್.ಎಂ.ವೆಂಕಟೇಶ್ ಮೇಲೆ 3 ಬಾರಿ ಹಲ್ಲೆಗೆ ಯತ್ನಿಸಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೊದಲ ಬಾರಿಗೆ ಹೆಬ್ಬಾಳ ಫ್ಲೈಓವರ್ನಲ್ಲಿ ಹಲ್ಲೆಗೆ ಯತ್ನಿಸಿದ್ದ ಗ್ಯಾಂಗ್ ನಂತರ ಕಾರು ಹಿಂಬಾಲಿಸಿಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದಾರೆ. 3ನೇ ಬಾರಿಗೆ ನ್ಯಾಯಾಂಗ ಬಡಾವಣೆ ಬಳಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಯಲಹಂಕ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ರನ್ನು ರಕ್ಷಣೆ ಮಾಡಿದ್ದಾರೆ. ಘಟನೆ ವೇಳೆ ಅದೇ ರಸ್ತೆಯಲ್ಲೇ ತೆರಳುತ್ತಿದ್ದ ಯಲಹಂಕ ಇನ್ಸ್ಪೆಕ್ಟರ್ ಸತ್ಯನಾರಾಯಣ್, ಹೆಚ್.ಎಂ.ವೆಂಕಟೇಶ್ ಕಾರು ಅಡ್ಡಗಟ್ಟಿದ್ದನ್ನು ಗಮನಿಸಿದ್ದರು. ಬಳಿಕ ಪಿಐ ಸತ್ಯನಾರಾಯಣ ತಮ್ಮ ಪೊಲೀಸ್ ಜೀಪ್ನಿಂದ ಇಳಿದು ಓಡಿಹೋಗಿ ವೆಂಕಟೇಶ್ರನ್ನು ರಕ್ಷಿಸಿದ್ದಾರೆ. ಈ ಹಿಂದೆ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಆರ್ಟಿಐ ಮೂಲಕ H.M.ವೆಂಕಟೇಶ್ ಬಯಲಿಗೆಳೆದಿದ್ದರು. ಇದೇ ಕಾರಣಕ್ಕೆ ದುಷ್ಕರ್ಮಿಗಳ ಗ್ಯಾಂಗ್ ಹಿಂಬಾಲಿಸಿಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದರು. ಪಿಐ ಸತ್ಯನಾರಾಯಣ ಸಮಯಪ್ರಜ್ಞೆಯಿಂದ H.M.ವೆಂಕಟೇಶ್ ಬಚಾವ್ ಆಗಿದ್ದಾರೆ. ಈ ಬಗ್ಗೆ ಆರ್ಟಿಐ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ರಿಂದ ಕೇಸ್ ದಾಖಲಾಗಿದ್ದು ಘಟನೆ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಾಗ ಚೈತನ್ಯ- ಸಮಂತಾ ನಟನೆಯ ಚಿತ್ರ ನಿರ್ದೇಶಿಸಿದ್ದ ಡೈರೆಕ್ಟರ್ ಜತೆ ಹೊಸ ಸಿನಿಮಾ ಒಪ್ಪಿಕೊಂಡ ಸಮಂತಾ; ನಾಯಕ ಯಾರು?

ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್​ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ