ಹಲ್ಲೆ ಯತ್ನ, ಅವಾಚ್ಯ ಶಬ್ದಗಳಿಂದ ಇನ್ಸ್ಪೆಕ್ಟರ್ಗೆ ಅವಾಜ್; ಪಿಎಸ್ಐ ಅಭ್ಯರ್ಥಿ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲು
ಪಿಎಸ್ಐ (PSI) ಅಭ್ಯರ್ಥಿ ಜಗದೀಶ್ ಎಂಬಾತ ಇನ್ಸ್ಪೆಕ್ಟರ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಾಜ್ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಟ್ಟೆ ಬಿಚ್ಚಿಸ್ತಿನಿ ಹುಡುಗರನ್ನ ಕರೆ ತಂದು ಘೇರಾವ್ ಹಾಕ್ತಿನಿ ಎಂದು ಜಗದೀಶ್ ಇನ್ಸ್ಪೆಕ್ಟರ್ ಸಂದೀಪ್ ಅವರಿಗೆ ಅವಾಜ್ ಹಾಕಿದ್ದಾನೆ.
ಬೆಂಗಳೂರು, ಡಿ.16: ತಾನು ಪ್ರೀತಿಸಿದ ಮಹಿಳೆ ಬೇರೆಯವರೊಂದಿಗೆ ಸ್ನೇಹ ಬೆಳೆಸಿದ್ದಾಳೆ ಎಂದು ಮಹಿಳೆ ಮನೆ ಮುಂದೆ ಗಲಾಟೆ ಮಾಡುತ್ತಿದ್ದ ಪಿಎಸ್ಐ (PSI) ಅಭ್ಯರ್ಥಿ ಜಗದೀಶ್ ಎಂಬಾತನನ್ನು ಸಮಾಲಿಸಲು ಬಂದ ಇನ್ಸ್ಪೆಕ್ಟರ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಾಜ್ ಹಾಕಿದ ಘಟನೆ ನಡೆದಿದೆ. ಬಟ್ಟೆ ಬಿಚ್ಚಿಸ್ತಿನಿ ಹುಡುಗರನ್ನ ಕರೆ ತಂದು ಘೇರಾವ್ ಹಾಕ್ತಿನಿ ಎಂದು ಜಗದೀಶ್ ಇನ್ಸ್ಪೆಕ್ಟರ್ ಸಂದೀಪ್ ಅವರಿಗೆ ಅವಾಜ್ ಹಾಕಿದ್ದಾನೆ. ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ (Girinagar Police Station) ಎಫ್ಐಆರ್ ದಾಖಲಾಗಿದೆ.
ಪಿಎಸ್ಐ ಪರೀಕ್ಷೆ ಬರೆದು ಫೇಲ್ ಆಗಿದ್ದ ಜಗದೀಶ್ ಎಂಬ ವ್ಯಕ್ತಿ ಮದುವೆ ಆದರೂ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಆ ಮಹಿಳೆ ಬೇರೆಯವರಿಗೆ ಮೆಸೇಜ್ ಮಾಡ್ತಿದಾಳೆಂದು ತಿಳಿಯುತ್ತಿದ್ದಂತೆ ಮಹಿಳೆ ಮನೆ ಮುಂದೆ ಬಂದು ಕಿರಿಕ್ ಮಾಡಿದ್ದ. ಇದನ್ನ ಗಮನಿಸಿದ ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಹೊಯ್ಸಳ ಬಂದು ಆತನನ್ನ ಕರೆದೊಯ್ಯುವಾಗ ಎಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಬಳಿಕ ಇನ್ಸ್ಪೆಕ್ಟರ್ ಸಂದೀಪ್ ಸ್ಥಳಕ್ಕೆ ಬರುತ್ತಿದ್ದಂತೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ.
ಇದನ್ನೂ ಓದಿ: ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಆಕಸ್ಮಿಕವಾಗಿ ಹತ್ಯೆಗೈದ ಇಸ್ರೇಲ್ ಸೇನೆ, ನೇತನ್ಯಾಹು ಹೇಳಿದ್ದೇನು?
ಏನೂ ಕಿತ್ಕೋಳೋಕಾಗಲ್ಲ ಎಂಬಂತಹ ಕೀಳು ಪದ ಬಳಸಿ ಜಗದೀಶ್ ಇನ್ಸ್ಪೆಕ್ಟರ್ಗೆ ನಿಂದಿಸಿದ್ದಾನೆ. ಸಮಾಧಾನ ಮಾಡಲು ಹೋದರೂ ಹಲ್ಲೆ, ನಿಂದನೆ ಮಾಡಿದ್ದಾನೆ. ಬಟ್ಟೆ ಬಿಚ್ಚಿಸ್ತೀನಿ ಹುಡುಗರನ್ನ ಕರೆ ತಂದು ಘೇರಾವ್ ಹಾಕ್ತಿನಿ. ನೀನು ತ್ರಿಬಲ್ ಸ್ಟಾರ್ ಅಷ್ಟೇ, ನನಗೆ ಅರ್ಧ ಮಾರ್ಕ್ನಿಂದ ಪಿಎಸ್ಐ ಎಕ್ಸಾಂ ಹೋಯ್ತು. ನನ್ ಕೈಲಿ ರಿವಾಲ್ವರ್ ಇದ್ದಿದ್ರೆ ಕಥೆನೇ ಬೇರೆ ಇರ್ತಿತ್ತು. ನಿನಗೆ ಹ್ಯೂಮನ್ ರೈಟ್ಸ್ ಅವರು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕ್ತೀನಿ. 500-1000 ತಗೊಂಡು ಕೆಲಸ ಮಾಡ್ತಿರಾ ಎಂದು ಜಗದೀಶ್ ಇನ್ಸ್ಪೆಕ್ಟರ್ ಸಂದೀಪ್ ಅವರಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ