ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪೋಸ್ಟ್ ಹರಿಬಿಟ್ಟ ತೆಲಂಗಾಣದ ಮಾಜಿ ಕಾರ್ಪೊರೇಟರ್ ಪುತ್ರ ಅರೆಸ್ಟ್
ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಆರೋಪಿ ರವಿಕಾಂತ ಶರ್ಮಾ, ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿಬಿಟ್ಟಿದ್ದರು. ಈ ಸಂಬಂಧ ತೆಲಂಗಾಣದ ಮಾಜಿ ಕಾರ್ಪೊರೇಟರ್ ಪುತ್ರ ರವಿಕಾಂತ ಶರ್ಮಾ(33) ಅವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಡಿ.16: ಸಚಿವ ಕೆ.ಜೆ. ಜಾರ್ಜ್ (K.J. George) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟ ಹಿನ್ನೆಲೆ ತೆಲಂಗಾಣದ ಮಾಜಿ ಕಾರ್ಪೊರೇಟರ್ ಪುತ್ರ ರವಿಕಾಂತ ಶರ್ಮಾ(33) ಅವರನ್ನು ಸೈಬರ್ ಕ್ರೈಂ ಪೊಲೀಸರು (Cyber Crime Police) ಬಂಧಿಸಿದ್ದಾರೆ. ಬಿಆರ್ಎಸ್ ಪಾರ್ಟಿಯ ಐಟಿ ಸೆಲ್ ಉದ್ಯೋಗಿಯಾಗಿರುವ, ತೆಲಂಗಾಣದ ಕರೀಂನಗರದ ನಿವಾಸಿ ರವಿಕಾಂತ ಶರ್ಮಾನನ್ನು ಅರೆಸ್ಟ್ ಮಾಡಲಾಗಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಆರೋಪಿ ರವಿಕಾಂತ ಶರ್ಮಾ, ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿಬಿಟ್ಟಿದ್ದರು. ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ ಯೋಜನೆ ಬಗ್ಗೆ ನಕಲಿ ಆಡಿಯೋ ಕ್ಲಿಪ್ವೊಂದನ್ನ ಶೇರ್ ಮಾಡಿ ಪೋಸ್ಟ್ ಹರಿಬಿಟ್ಟಿದ್ದರು. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತೆಲಂಗಾಣದ ಬಿಆರ್ಎಸ್ ಪಕ್ಷದಲ್ಲಿ ರವಿಕಾಂತ ಶರ್ಮಾ ಗುರುತಿಸಿಕೊಂಡಿದ್ದಾರೆ. ಅವರ ತಂದೆ, ತಾಯಿ ಕೂಡ ಮಾಜಿ ಕಾರ್ಪೋರೆಟರ್ಗಳು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಬಲೆಗೆ ಬಿದ್ದ ಉದ್ಯಮಿ: ದಂಪತಿ ಸಹಿತ ನಾಲ್ವರನ್ನು ಬಂಧಿಸಿದ ಸಿಸಿಬಿ
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ BMW ಕಾರು ಡಿಕ್ಕಿ
ಬೆಂಗಳೂರಿನ ಜಯನಗರದ ಆರ್.ವಿ.ರಸ್ತೆಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ BMW ಕಾರು ಡಿಕ್ಕಿ ಹೊಡೆದಿದೆ. ಮಹಾರಾಷ್ಟ್ರ ನೋಂದಣಿಯ BMW ಕಾರು ಅಪಘಾತವಾಗಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿಯಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಕಾರು ತೆರವುಗೊಳಿಸಿದ್ದಾರೆ. ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ