ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಅಗ್ನಿ, ಒಂದು ಬೋಗಿ ಭಸ್ಮ

ಬೆಂಗಳೂರು: ನಿಂತಿದ್ದ ರೈಲಿನ ಎಸಿ ಬೋಗಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ. ಬಿಕಾನೇರ್‌ನಿಂದ ಯಶವಂತಪುರಕ್ಕೆ ಬಂದು ಸ್ಥಳಾವಕಾಶ ಇಲ್ಲದೆ ಇರುವುದರಿಂದ ಮೂರು ದಿನದ ಹಿಂದೆ ಬಂದಿದ್ದ 16588 ಹವಾ ನಿಯಂತ್ರಿತ ರೈಲು, ಚಿಕ್ಕಬಾಣಾವಾರ ನಿಲ್ದಾಣದಲ್ಲಿ ತಂಗಿತ್ತು. ರೈಲಿನ ಸೀಟ್‌ ನಂಬರ್ 25ರ ಬಳಿ ಬೆಂಕಿ ಹೊತ್ತುಕೊಂಡಿದ್ದು, ಸುಮಾರು 10 ಸೀಟುಗಳು ಸುಟ್ಟು ಭಸ್ಮವಾಗಿವೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೀಣ್ಯ ಅಗ್ನಿಶಾಮಕ ತಂಡದವರು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಮೂರು ದಿನಗಳಿಂದ ನಿಂತಿರುವುದರಿಂದ […]

ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಅಗ್ನಿ, ಒಂದು ಬೋಗಿ ಭಸ್ಮ
ಸಾಧು ಶ್ರೀನಾಥ್​

Updated on: Dec 26, 2019 | 12:16 PM

ಬೆಂಗಳೂರು: ನಿಂತಿದ್ದ ರೈಲಿನ ಎಸಿ ಬೋಗಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ. ಬಿಕಾನೇರ್‌ನಿಂದ ಯಶವಂತಪುರಕ್ಕೆ ಬಂದು ಸ್ಥಳಾವಕಾಶ ಇಲ್ಲದೆ ಇರುವುದರಿಂದ ಮೂರು ದಿನದ ಹಿಂದೆ ಬಂದಿದ್ದ 16588 ಹವಾ ನಿಯಂತ್ರಿತ ರೈಲು, ಚಿಕ್ಕಬಾಣಾವಾರ ನಿಲ್ದಾಣದಲ್ಲಿ ತಂಗಿತ್ತು. ರೈಲಿನ ಸೀಟ್‌ ನಂಬರ್ 25ರ ಬಳಿ ಬೆಂಕಿ ಹೊತ್ತುಕೊಂಡಿದ್ದು, ಸುಮಾರು 10 ಸೀಟುಗಳು ಸುಟ್ಟು ಭಸ್ಮವಾಗಿವೆ.

ಈ ವೇಳೆ ಸ್ಥಳಕ್ಕಾಗಮಿಸಿದ ಪೀಣ್ಯ ಅಗ್ನಿಶಾಮಕ ತಂಡದವರು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಮೂರು ದಿನಗಳಿಂದ ನಿಂತಿರುವುದರಿಂದ ಕಿಡಿಗೇಡಿಗಳ್ಯಾರೋ ಧೂಮಪಾನ ಮಾಡಿರುವುದರಿಂದ ಅಗ್ನಿ ಅವಘಡ ಸಂಭವಿಸಿರಬಹುದು ಅಥವಾ ಎಸಿ ಸರ್ಕ್ಯೂ‌ಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ಹಾಗು ಯಶವಂತಪುರ ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us