ಬೆಂಗಳೂರು, ಸೆ.28: ಕಳೆದ ವರ್ಷ ಅಕ್ಟೋಬರ್ 7 ರ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಕರ್ನಾಟಕ ತಮಿಳು ನಾಡು ಬಾರ್ಡರ್ನ ಹೈವೆ ಪಕ್ಕದ ಗೋಡೌನ್ನಲ್ಲಿ ಸಂಭವಿಸಿದ್ದ ಪಟಾಕಿ ದುರಂತ 15ಕ್ಕೂ ಹೆಚ್ಚು ಜನರ ಬದುಕು ಕಸಿದಿತ್ತು. ಈ ಪ್ರಕರಣದಲ್ಲಿ ಅತ್ತಿಬೆಲೆ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್, ಸೇರಿ ಸಂಬಂಧ ಪಟ್ಟ ಸ್ಥಳೀಯ ವಿವಿಧ ಇಲಾಖೆ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿತ್ತು. ಈ ಗಂಭೀರ ದುರ್ಘಟನೆ ಮತ್ತೆಂದು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಮುಂಜಾಗ್ರತ ಕ್ರಮವಾಗಿ ಲೈಸೆನ್ಸ್ ಗೂ ಮುನ್ನವೇ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ನೇತೃತ್ವದಲ್ಲಿ ಇನ್ ಫ್ಯಾಂಟ್ರಿ ರಸ್ತೆ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಲಾಯ್ತು.
ಪಟಾಕಿ ಮಾರಾಟಗಾರರು ತಮ್ಮ ಕೆಲವು ಸಮಸ್ಯೆಗಳ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಈ ಬಾರಿ ಪಟಾಕಿ ಗ್ರಾಹಕರಿಗೆ ವರ್ತಕರು ಮಕ್ಕಳಿಗೆ ಪಟಾಕಿ ವೇಳೆ ಹಾನಿಯಾಗದಿರಲೆಂದು ಉಚಿತವಾಗಿ ಕನ್ನಡಕಗಳನ್ನು ವಿತರಿಸುವುದಾಗಿ ವರ್ತಕರು ಹೇಳಿದ್ದಾರೆ.
ಇದನ್ನೂ ಓದಿ: ಹೆಚ್ಚಿದ ಕ್ರೈಂ: ಮನೆ ಬಾಡಿಗೆ ಕೊಡಲು ಬೇಡಿಕೆಗಳ ಪಟ್ಟಿಯಿಟ್ಟ ಬೆಂಗಳೂರಿನ ಮನೆ ಮಾಲೀಕರು
ಕಳೆದ ವರ್ಷ ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದರಿಂದ ವರ್ತಕರ ಸಭೆ ಕರೆದಿದ್ದು, ನಗರದ ಎಲ್ಲಾ ವಿಭಾಗದ ಡಿಸಿಪಿಗಳು, ಅಗ್ನಿಶಾಮಕ, ಬಿಬಿಎಂಪಿ, ಬೆಸ್ಕಾಂ ಸೇರಿ ಪಟಾಕಿ ವರ್ತಕರ ಸಭೆಯಲ್ಲಿ ಭಾಗವಹಿಸಿದ್ದರು. ಪಟಾಕಿ ಮಳಿಗೆಗಳ ವ್ಯವಸ್ಥೆ, ಭದ್ರತಾ ಕ್ರಮಗಳು ಸೇರಿದಂತೆ ಲೈಸೆನ್ಸ್ ವಿಚಾರವಾಗಿ ಚರ್ಚೆ ನಡೆಸಲಾಯ್ತು. ಅನಧಿಕೃತ ಪಟಾಕಿಗಳ ಮಾರಾಟಕ್ಕೆ ಬ್ರೇಕ್, ಗ್ರೀನ್ ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪಟಾಕಿ ವರ್ತಕರಿಗೆ ಸೂಚಿಸಿದ್ದಾರೆ.
ಒಟ್ನಲ್ಲಿ ನಗರದಾದ್ಯಂತ 200ಕ್ಕೂ ಹೆಚ್ಚು ಪಟಾಕಿ ಮಳಿಗೆಗಳ ಸ್ಥಾಪನೆಗೆ ಸ್ಥಳ ಗುರುತಿಸಿದ್ದು ಮೈದಾನಗಳ ಪಟ್ಟಿ ಮಾಡಲಾಗಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ, ಕಂದಾಯ ಇಲಾಖೆ, ಬಿಬಿಎಂಪಿ, ಬೆಸ್ಕಾಂ ಅನುಮತಿ ಪಡೆದುಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪಟಾಕಿ ಮಳಿಗೆ ತೆರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ