ತಾಯಿಗಾಗಿ 100 ಅಡಿಯಷ್ಟು ಮನೆಯನ್ನೇ ಲಿಫ್ಟ್ ಮಾಡಲು ಮುಂದಾದ ಮಕ್ಕಳು: ಬೆಂಗಳೂರಿನಲ್ಲಿ ಇದೇ ಮೊದಲು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಯೊಂದನ್ನು ಶಿಫ್ಟ್ ಮಾಡಲಾಗುತ್ತಿದೆ. ಮಳೆ ನೀರಿನಿಂದ ತುಂಬಿಕೊಳ್ಳುತ್ತಿರುವುದರಿಂದ ಈ ಪ್ರಸ್ತುತ ಇರುವ ಮನೆಯನ್ನು ಸ್ಥಳದಿಂದ 100 ಅಡಿಯಷ್ಟು ಹಿಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ತನ್ನ ತಂದೆಯ ನೆನಪು ಮತ್ತು ತಾಯಿಯ ಕನಸ್ಸಿಗಾಗಿ ಮಕ್ಕಳು ಹಳೇ ಮನೆಯನ್ನು ನೆಲಸಮ ಮಾಡದೇ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿರುವುದು ಇದೇ ಮೊದಲು.

ಬೆಂಗಳೂರು, (ಫೆಬ್ರವರಿ 11): ಈ ಕಾಲದಲ್ಲಿ ತಂದೆ ತಾಯಿ ಕಟ್ಟಿದ ಹಳೆಯ ಮನೆಯನ್ನು ಡೆಮಾಲಿಷನ್ ಮಾಡಿ ಐಷಾರಾಮಿ ಮನೆ ಕಟ್ಟಿಕೊಳ್ಳುತ್ತಾರೆ. ಇಂತಹ ಕಾಲದಲ್ಲಿ ಕೋಟ್ಯಂತರ ರುಪಾಯಿ ಹಣವಿದ್ದರೂ ಸಹ ಇಲ್ಲಿಬ್ಬರು ಮಕ್ಕಳು ತನ್ನ ತಾಯಿಗಾಗಿ ತಂದೆ ಕಟ್ಟಿದ್ದ ಹಳೇ ಮನೆಯನ್ನು ನೆಲಸಮ ಮಾಡಿದೇ ಅವರ ನೆನಪಿಗಾಗಿ ಇರಲಿ ಎಂದು 100 ಅಡಿಯಷ್ಟು ಲಿಫ್ಟಿಂಗ್ ಮಾಡಲು ಮುಂದಾಗಿದ್ದಾರೆ. ಹೌದು…ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾದರೆ ಸಾಕು ಮೊದಲು ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಇಎಂಎಲ್ ಲೇಔಟ್ ನಲ್ಲಿರುವ ಯಲ್ಲಪ್ಪನ ಮನೆ ತುಂಬಾ ಜಲಾವೃತವಾಗುತ್ತಿತ್ತು. ಎರಡರಿಂದ ಮೂರು ಅಡಿಗಳಷ್ಟು ಕೊಳಚೆ ನೀರು ನಿಲ್ಲುತ್ತಿತಂತೆ. ಅದಕ್ಕೆ ಮಕ್ಕಳು ಮನೆಯನ್ನು ಡೆಮಾಲಿಷನ್ ಮಾಡಿ ಹೊಸ ಮನೆಯನ್ನು ನಿರ್ಮಾಣ ಮಾಡಲು ಪ್ಲಾನ್ ಮಾಡಿದ್ದರು. ಆದರೆ ತಾಯಿ ಯಲ್ಲಮ್ಮ, ನಾನು ನಿಮ್ಮ ತಂದೆ ಹೊಟ್ಟೆಬಟ್ಟೆ ಕಟ್ಟಿ ಈ ಮನೆಯನ್ನು ನಿರ್ಮಾಣ ಮಾಡಿದ್ದೇವೆ. ಡೆಮಾಲಿಷನ್ ಬೇಡ ಎಂದು ನೋವು ತೊಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ನೀರಿನಲ್ಲಿ ಮುಳುಗುವ ಮನೆಯನ್ನು ಕೆಡುವುದರ ಬದಲಾಗಿ ಶಿಫ್ಟ್ ಮಾಡಲು ಮುಂದಾಗಿದೆ.
ಬಿಹಾರ ಮೂಲದ ಕಂಪನಿಯಿಂದ ಮನೆ ಶಿಫ್ಟ್
ಇನ್ನು ಮನೆ ಶಿಫ್ಟ್ ಮಾಡಲು ಬಿಹಾರ ಮೂಲದ ಶ್ರೀರಾಮ್ ಹೌಸ್ ಲಿಫ್ಟಿಂಗ್ ಅಂಡ್ ಶಿಫ್ಟಿಂಗ್ ಕಂಪನಿಯನ್ನು ಸಂಪರ್ಕ ಮಾಡಿದ್ದಾರೆ . ನಂತರ ಮನೆಯನ್ನು ಡೆಮಾಲಿಷನ್ ಮಾಡುವುದು ಬೇಡ ಮನೆಯನ್ನು ನೂರು ಅಡಿಯಷ್ಟು ಹಿಂದಕ್ಕೆ ಶಿಫ್ಟಿಂಗ್ ಮಾಡಿ ಕೊಡುತ್ತೇವೆ ಎಂದಿದ್ದಾರೆ. ಮನೆ ಶಿಫ್ಟ್ ಮಾಡಲು ಶ್ರೀರಾಮ್ ಕಂಪನಿ ಈಗಾಗಲೇ ಬೇರೆ ಬೇರೆ ನಗರದಲ್ಲಿ ಮನೆಯನ್ನು ಶಿಫ್ಟಿಂಗ್ ಮಾಡಿದ್ರಂತೆ. ಇದೆ ಮೊದಲ ಬಾರಿಗೆ ಬೆಂಗಳೂರಲ್ಲಿ ಎರಡು ಅಂತಸ್ತಿನ ಮನೆಯನ್ನು ಇದೀಗ ಶಿಫ್ಟ್ ಮಾಡಲು ಮುಂದಾಗಿದ್ದಾರೆ.
ಮನೆ ಹೇಗೆ ಶಿಫ್ಟ್ ಮಾಡಲಾಗುತ್ತೆ, ಎಷ್ಟು ಖರ್ಚು?
ಇನ್ನೂ ಈ ಮನೆಯನ್ನು ಶಿಫ್ಟ್ ಮಾಡಲು 200 ಕಬ್ಬಿಣದ ಜಾಕ್ ಮತ್ತು 100 ಕಬ್ಬಿಣದ ರೋಲರ್ ಗಳ ಬಳಕೆ ಮಾಡಲಾಗಿದೆ. ಅಂದು13 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗ್ತಿತ್ತು, ಈಗ ಈ ಮನೆಯನ್ನು ನಿರ್ಮಾಣ ಮಾಡಲು ಅಂದಾಜು 70 ಲಕ್ಷ ರುಪಾಯಿ ಬೇಕಾಗುತ್ತದೆ. ಸದ್ಯ ಮನೆಯನ್ನು 15 ಅಡಿ ಹಿಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ನಂತರ 30 ದಿನಗಳಲ್ಲಿ 85 ಅಡಿ ಹಿಂದಕ್ಕೆ ಮನೆಯನ್ನು ಶಿಫ್ಟ್ ಮಾಡಲಾಗುತ್ತದೆ. ಇನ್ನು ಈ ಮನೆಯನ್ನು ಶಿಫ್ಟ್ ಮಾಡಲು ಶ್ರೀರಾಮ್ ಕಂಪನಿಗೆ ಹತ್ತು ಲಕ್ಷ ಗುತ್ತಿಗೆ ನೀಡಲಾಗಿದೆ.
ಈ ವೇಳೆ ಮಾತನಾಡಿದ ತಾಯಿ ಶಾಂತಮ್ಮ, ನಾನು ಬೀದಿ ಬೀದಿಯಲ್ಲಿ ಸೊಪ್ಪು ಮಾರಾಟ ಮಾಡಿ ನಾನು ನನ್ನ ಪತಿ ಸೇರಿ ಈ ಮನೆಯನ್ನು ಕಟ್ಟಿಸಿದ್ದೇವೆ. ಆದರೆ ಮಳೆಗಾಲದಲ್ಲಿ ಮಳೆ ನೀರಿನಿಂದ ತುಂಬಿಕೊಳ್ಳುತ್ತಿತ್ತು ಎಂದು ಡೆಮಾಲಿಷನ್ ಮಾಡಲು ಮಕ್ಕಳು ಮುಂದಾಗಿದ್ದರು. ಆದರೆ ಇದೀಗ ಮನೆ ಶಿಫ್ಟ್ ಮಾಡುತ್ತಿರುವುದು ತುಂಬಾ ಸಂತೋಷ ಆಗುತ್ತಿದೆ ಎಂದಿದ್ದಾರೆ