AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಯಾರು ಇಲ್ಲದಿದ್ದಾಗ ಶಂಕರ್ ಮನೆಯಲ್ಲಿ ಚಿನ್ನಾಭರಣ ದೋಚಲು ಯತ್ನಿಸಿದ ಕಳ್ಳ, ಸ್ಥಳೀಯರಿಂದ ಗೂಸಾ

ಕುಟುಂಬಸ್ಥರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಶಂಕರ್ ಈಗಾಗಲೆ ಜೈಲು ಪಾಲಾಗಿದ್ದಾರೆ. ನಾಲ್ಕು ತಿಂಗಳಿನಿಂದ ಕರೆಂಟ್ ಕೂಡ ಕಟ್ ಆಗಿತ್ತು. ಈ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿದ್ದಾನೆ.

ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಯಾರು ಇಲ್ಲದಿದ್ದಾಗ ಶಂಕರ್ ಮನೆಯಲ್ಲಿ ಚಿನ್ನಾಭರಣ ದೋಚಲು ಯತ್ನಿಸಿದ ಕಳ್ಳ, ಸ್ಥಳೀಯರಿಂದ ಗೂಸಾ
ಶಂಕರ್ ಮನೆ, ಕಳ್ಳತನಕ್ಕೆ ಯತ್ನಿಸಿದ ಕಳ್ಳ
TV9 Web
| Updated By: sandhya thejappa|

Updated on: Feb 05, 2022 | 12:20 PM

Share

ಬೆಂಗಳೂರು: ಬ್ಯಾಡರಹಳ್ಳಿಯ (Byadarahalli) ಶಂಕರ್ ಮನೆಯಲ್ಲಿ ಐವರು ಆತ್ಮಹತ್ಯೆ (Suicide) ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಮನೆಯಲ್ಲಿ ಯಾರು ಇಲ್ಲ. ಯಾರೂ ಇಲ್ಲದಿದ್ದರಿಂದ ಕಳ್ಳನೊಬ್ಬ ಮನೆಯಲ್ಲಿದ್ದ ವಸ್ತುಗಳನ್ನ ದೋಚಲು ಯತ್ನಿಸಿದ್ದಾನೆ. ಕಳ್ಳ ಟಾರ್ಚ್ ಲೈಟ್ ಹಾಕಿ ಮನೆಯಲ್ಲಿ ಚಿನ್ನಾಭರಣ ಹುಡುಕುತ್ತಿದ್ದ. ಟಾರ್ಚ್ ಲೈಟ್ ಹಾಕಿದ್ದಕ್ಕೆ ಕಳ್ಳನನ್ನು ಅಕ್ಕಪಕ್ಕದ ಜನರು ದೆವ್ವ ಅಂದುಕೊಂಡಿದ್ದರು. ಟಾರ್ಚ್ ಲೈಟ್ ಕಂಡು ಸ್ಥಳೀಯರು ಶಂಕರ್ ಮನೆ ಬಳಿ ತೆರಳಿದ್ದರು. ತಮ್ಮನ್ನು ಹಿಡಿಯುತ್ತಾರೆಂದು ದೆವ್ವಾ ದೆವ್ವಾ ಎಂದು ಕಳ್ಳ ಕಿರುಚಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಗೂಸಾ ಕೊಟ್ಟಿದ್ದಾರೆ.

ಕುಟುಂಬಸ್ಥರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಶಂಕರ್ ಈಗಾಗಲೆ ಜೈಲು ಪಾಲಾಗಿದ್ದಾರೆ. ನಾಲ್ಕು ತಿಂಗಳಿನಿಂದ ಕರೆಂಟ್ ಕೂಡ ಕಟ್ ಆಗಿತ್ತು. ಈ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿದ್ದಾನೆ. ಬೆಳಕನ್ನ ಕಂಡ ಹಿನ್ನೆಲೆ ಸ್ಥಳೀಯರು ಶಂಕರ್ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಧೈರ್ಯ ಮಾಡಿ ಒಳ ನುಗ್ಗಿದಾಗ ಕುಟುಂಬಸ್ಥರು, ಸ್ಥಳೀಯರಿಗೆ ಶಾಕ್ ಆಗಿದೆ. ದೆವ್ವ ದೆವ್ವ ಅಂತ ಕಿರುಚುತ್ತ ವ್ಯಕ್ತಿ ಹೊರಗೆ ಬಂದಿದ್ದಾನೆ. ನಂತರ ಸತ್ಯ ಬೆಳಕಿಗೆ ಬಂದಿದೆ.

ಚಿನ್ನಾಭರಣ ದೋಚಲು ಕಳ್ಳ ಟಾರ್ಚ್ ಲೈಟ್ ಹಾಕಿ ಮನೆಯಲ್ಲಿ ಹುಡುಕಾಡುತ್ತಿದ್ದ. ಈ ಲೈಟ್ಗೆ ಸ್ಥಳೀಯರು ಹೆದರಿದ್ದರು. ವಿಚಾರ ತಿಳಿದು ಕಳ್ಳ ಭರತ್ ಕುಮಾರ್ ಎಂಬಾತನಿಗೆ ಗೂಸಾ ನೀಡಿದ ಸ್ಥಳೀಯರು, ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದ ಮನೆಯಲ್ಲಿ ಸೆ.17 ರಂದು ಒಂದೇ ಕುಟುಂಬದ ಐವರ ಮೃತದೇಹ ಪತ್ತೆಯಾಗಿತ್ತು. ತಾಯಿ, ಮೂವರು ಮಕ್ಕಳು ನೇಣಿಗೆ ಶರಣಾಗಿದ್ದರು. ಇನ್ನು 9 ತಿಂಗಳ ಮಗುವನ್ನು ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಈ ಘಟನೆಗೆ ಪತಿ ಶಂಕರ್ ಕಾರಣ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು. ಆತ್ಮಹತ್ಯಗೆ ಪ್ರಚೋದನೆ ನೀಡಿದ ಹಿನ್ನೆಲೆ ಶಂಕರ್ ಸದ್ಯ ಜೈಲು ಪಾಲಾಗಿದ್ದಾನೆ. ಹೀಗಾಗಿ ಮನೆ ಖಾಲಿಯಾಗಿದೆ. ಈ ವೇಳೆ ಕಳ್ಳ ಮನೆಗೆ ನುಗ್ಗಿ ದೋಚಲು ಯತ್ನಿಸಿದ್ದಾನೆ.

ಇದನ್ನೂ ಓದಿ

ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ; ಕಂಪ್ಯೂಟರ್ ಪ್ರಿಂಟರ್ ಸೇರಿದಂತೆ ಶಾಲೆ ದಾಖಲಾತಿ ಕಳವು

ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !