ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !

ಈ ವ್ಯಕ್ತಿ ಗುಜರಾತ್​ ಮೂಲದ ಉದ್ಯಮಿಯಾಗಿದ್ದು, ಈತನ ಪತ್ನಿ ಅದೇ ಕಂಪನಿಯಲ್ಲಿ ಡೈರೆಕ್ಟರ್​. ಉದ್ಯಮಿಯ ಪತ್ನಿಗೆ ಮೊದಲಿನಿಂದಲೂ ಪತಿ ಮೇಲೆ ಅನುಮಾನವಿತ್ತು.

ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Feb 05, 2022 | 10:42 AM

ಪುಣೆ: 41 ವರ್ಷದ ವ್ಯಕ್ತಿ ಮತ್ತು ಆತನ ಪ್ರೇಯಸಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಪುಣೆಯ ಹೋಟೆಲ್​​ವೊಂದಕ್ಕೆ ಪ್ರಿಯತಮೆಯೊಂದಿಗೆ ಹೋಗಿದ್ದ. ಅಲ್ಲಿ ತಪಾಸಣೆ ಮಾಡುವಾಗ ತನ್ನ ಪ್ರಿಯತಮೆಯ ಗುರುತು ದೃಢೀಕರಿಸಲು ಪತ್ನಿಯ ಆಧಾರ್ ಕಾರ್ಡ್​ ಕೊಟ್ಟಿದ್ದಾನೆ. ಸದ್ಯ ವ್ಯಕ್ತಿ ಮತ್ತು ಆತನ ಪ್ರೇಯಸಿ ಇಬ್ಬರ ವಿರುದ್ಧವೂ ಹಿಂಜೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ವ್ಯಕ್ತಿ ಗುಜರಾತ್​ ಮೂಲದ ಉದ್ಯಮಿಯಾಗಿದ್ದು, ಈತನ ಪತ್ನಿ ಅದೇ ಕಂಪನಿಯಲ್ಲಿ ಡೈರೆಕ್ಟರ್​. ಉದ್ಯಮಿಯ ಪತ್ನಿಗೆ ಮೊದಲಿನಿಂದಲೂ ಪತಿ ಮೇಲೆ ಅನುಮಾನವಿತ್ತು. ಇದೇ ಕಾರಣಕ್ಕೆ ಪತಿಯ ಕಾರಿನಲ್ಲಿ ಜಿಪಿಎಸ್​ ಕೂಡ ಅಳವಡಿಸಿದ್ದರು.  ಕಳೆದ ನವೆಂಬರ್​​ನಲ್ಲಿ ಈತ ಬೆಂಗಳೂರಿಗೆ ಬಿಜಿನೆಸ್​ ಟ್ರಿಪ್​ಗೆ ಹೋಗುತ್ತೇನೆ ಎಂದು ಹೇಳಿದ್ದ, ಆದರೆ ಆಕೆ ಜಿಪಿಎಸ್ ಟ್ರ್ಯಾಕರ್​​ನಲ್ಲಿ ಚೆಕ್​ ಮಾಡಿದಾಗ ಕಾರು ಪುಣೆಗೆ ಹೋಗಿದ್ದು ಬೆಳಕಿಗೆ ಬಂದಿದೆ.

ಮಹಿಳೆ ಸುಮ್ಮನಿರದೆ ಜಿಪಿಎಸ್​ ಟ್ರ್ಯಾಕರ್​ ತೋರಿಸಿದ ಲೊಕೇಶನ್​​ನ ಹೋಟೆಲ್​ಗೆ ಕರೆ ಮಾಡಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಹೋಟೆಲ್​ ಸ್ಟಾಪ್​,  ಉದ್ಯಮಿ ತಮ್ಮ ಪತ್ನಿಯೊಂದಿಗೇ ಇಲ್ಲಿಗೆ ಬಂದಿದ್ದಾಗಿ ತಿಳಿಸಿದಾಗ ನಿಜವಾದ ಪತ್ನಿ ಶಾಕ್​ ಆಗಿದ್ದಾರೆ.  ಆದರೆ ಬಳಿಕ ಗೊತ್ತಾದ ಸತ್ಯವೇನೆಂದರೆ, ಈ ಉದ್ಯಮಿ ಪತ್ನಿಯ ಆಧಾರ್​ ಕಾರ್ಡ್ ತೋರಿಸಿ, ಇನ್ನೊಬ್ಬ ಮಹಿಳೆಯೊಂದಿಗೆ ಹೋಟೆಲ್​ ಹೋಗಿದ್ದಾನೆ. ಸದ್ಯ ಆಕೆ ನಾಪತ್ತೆಯಾಗಿದ್ದು, ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Hrithik Roshan: ಮತ್ತೆ ಸಬಾ ಜತೆ ಕಾಣಿಸಿಕೊಂಡ ಹೃತಿಕ್; ಅಭಿಮಾನಿಗಳಿಗೆ ಹೆಚ್ಚಿತು ಅನುಮಾನ

Published On - 9:59 am, Sat, 5 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ