ಬೆಂಗಳೂರು: ಚಾಮರಾಜಪೇಟೆ ಮೈದಾನ (Chamarajpet Maidan) ದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಟ್ಟು ಹಿಡಿದ್ದು, ಮೈದಾನದಲ್ಲಿ ಗಣೇಶೋತ್ಸವ ಸಂಬಂಧ ಸರ್ಕಾರಕ್ಕೆ ಡೆಡ್ ಲೈನ್ ನೀಡಿದೆ. 5 ದಿನಗಳ ಕಾಲ ಕಂದಾಯ ಇಲಾಖೆಗೆ ಚಾಮರಾಜಪೇಟೆ ಒಕ್ಕೂಟ ಮತ್ತು ಹಿಂದೂಪರ ಸಂಘಟನೆಗಳು ಗಡುವು ಕೊಟ್ಟಿವೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ, ವಿಶ್ವ ಸನಾತನ ಪರಿಷತ್ ಸಂಘಟನೆಗಳು ಸಾಥ್ ನೀಡಿವೆ. ಜಮೀರ್ ಗಣೇಶ ಪೂಜೆ ಮಾಡಿದ್ರೂ ನಮ್ಗೆ ಅಡ್ಡಿ ಇಲ್ಲ. ಒಟ್ಟಿನಲ್ಲಿ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗ್ಲೇಬೇಕೆಂದು ಪಟ್ಟು ಹಿಡಿಯಲಾಗಿದೆ. ನಿನ್ನೆ ಮತ್ತೊಮ್ಮೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಹಿಂದೂ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆ.25ರೊಳಗೆ ಅನುನತಿ ನೀಡುವಂತೆ ಒಕ್ಕೂಟ ಡೆಡ್ ಲೈನ್ ನೀಡಿದ್ದು, ಅನುಮತಿ ನೀಡದಿದ್ದರೆ ಮುಂದಿನ ಹೋರಾಟ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ ಹಿಂದೂ ಸಂಘಟನೆಗಳಿಂದ ಸರ್ಕಾರಕ್ಕೆ, ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡೇ ಮಾಡ್ತೀವಿ ಅಂತ ಸವಾಲು ಹಾಕಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಾರು ಮೇಲೆ ಮೊಟ್ಟೆ ಎಸೆತ: ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಮುಂದಾದ ಅಭಿಮಾನಿಗಳು
ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ ಫಿಕ್ಸ್?
ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ ಫಿಕ್ಸ್ ಆಗಿದ್ದು, ಚಾಮರಾಜಪೇಟೆ ಗಣೇಶೋತ್ಸವ ತೀವ್ರ ಕೂತೂಹಲ ಕೆರಳಿಸಿದೆ. ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ದಿನಾಂಕ ಮತ್ತು ಸ್ಥಳ ಅನೌನ್ಸ್ ಮಾಡಿದ್ದು, ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಸಹಯೋಗದೊಂದಿಗೆ ಭರ್ಜರಿ ಪೋಸ್ಟರ್ ರಿಲೀಸ್ ಮಾಡಿದೆ. ಆಗಸ್ಟ್ 31ರಿಂದ ಸಪ್ಟೆಂಬರ್ 10ರವರೆಗೆ ಅದ್ಧೂರಿ ವಿನಾಯಕ ಮಹೋತ್ಸವ ನಡೆಯಲಿದ್ದು, ಒಟ್ಟು 11 ದಿನಗಳ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಆ.31ರ ಬೆಳಗ್ಗೆ 9 ಗಂಟೆಗೆ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮ ನಡೆಯಲಿದ್ದು, ಆ.10ರಂದು ಚಾಮರಾಜಪೇಟೆಯಲ್ಲಿ ಗಣೇಶನ ಅದ್ಧೂರಿ ಮೆರವಣಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ಗಣೇಶನಿಗೆ ಮಹಾ ಪೂಜೆಗೆ ವ್ಯವಸ್ಥೆ ಮಾಡಿದ್ದು, ಚಾಮರಾಜಪೇಟೆ, ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಅಂತ ಉಲ್ಲೇಖ ಮಾಡಲಾಗಿದೆ. ಗಣೇಶನ ಆಚರಣೆಗೆ ಕಂದಾಯ ಇಲಾಖೆಯಿಂದ ಇನ್ನೂ ಅಧಿಕೃತವಾಗಿ ಅನುಮತಿ ಸಿಕ್ಕಿಲ್ಲ. ಕಾದು ಹೇಳುವ ತಂತ್ರಕ್ಕೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಮುಂದಾಗಿದ್ದು, ಈ ಮಧ್ಯೆಯೇ ಸ್ಥಳ, ದಿನಾಂಕವನ್ನು ಗಣೇಶೋತ್ಸವ ಸಮಿತಿ ಅನೌನ್ಸ್ ಮಾಡಿದೆ.
ಗಣೇಶ ಹಬ್ಬ ಆಚರಣೆಗೆ ನಗರದಲ್ಲಿ ಯಾವುದೇ ಅಡೆತಡೆ ಇಲ್ಲ!
ಈ ಬಾರಿ ಗಣೇಶ ಹಬ್ಬ ಆಚರಣೆಗೆ ನಗರದಲ್ಲಿ ಯಾವುದೇ ಅಡೆತಡೆ ಇಲ್ಲ. ಕೊವಿಡ್ ರೂಲ್ಸ್ ಪಾಲಿಸಿ ಹಬ್ಬ ಆಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಕುರಿತು ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ. ಒಂದೇ ಜಾಗದಲ್ಲಿ ಪೊಲೀಸ್ ಪರವಾನಿಗೆ, ಬೆಸ್ಕಾಂ, ಬಿಬಿಎಂಪಿ ಅನುಮತಿ ನೀಡಲಾಗಿದೆ. ಗಣೇಶ ಚತುರ್ಥಿಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂದು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಸಭೆ ನಡೆಯಲಿದ್ದು, ಸಂಜೆ ಅಧಿಕಾರಿಗಳ ಸಭೆ ಬಳಿಕ ಅಧಿಕೃತವಾಗಿ ಆದೇಶ ಪ್ರಕಟ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಾರಿ ವಾರ್ಡ್ಗೆ ಒಂದೇ ಗಣೇಶ ಎಂಬ ರೂಲ್ಸ್ ಇರಲ್ಲ ಎಂದು ಮೂಲಗಳಿಂದ ಮಾಹಿತಿ ನೀಡಲಾಗಿದೆ.
ನಿಷೇಧಿತ ಪಿಒಪಿ ಗಣೇಶ ಬಳಕೆ ಮಾಡದಂತೆ ಮನವಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದು, 2019ರಲ್ಲಿ ಇದ್ದ ಆದೇಶದಂತೆ ಗಣೇಶ್ ಹಬ್ಬ ಆಚರಣೆ. ವಾರ್ಡ್ಗೆ ಒಂದೇ ಗಣೇಶ ಅಂತಾ ನಾವು ಹೇಳಿಲ್ಲ. ಹಿಂದಿನಂತೆ ಸಂಭ್ರಮದಿಂದ ಹಬ್ಬ ಆಚರಿಸಲು ಅವಕಾಶ ನೀಡಲಾಗಿದೆ. ಸಿಂಗಲ್ ವಿಂಡೋನಲ್ಲಿ ಪರ್ಮಿಶನ್ ನೀಡಲಾಗುತ್ತೆ. ಆಯಾ ಭಾಗದಲ್ಲಿ ಒಂದೇ ಜಾಗದಲ್ಲಿ ಪೊಲೀಸ್, ಬಿಬಿಎಂಪಿ, ಬೆಸ್ಕಾಂ, ಅಗ್ನಿ ಶಾಮಕದಳದಿಂದ ಅನುಮತಿ ನೀಡಲಾಗಿದೆ. ಗಣೇಶ ವಿಸರ್ಜನೆಗೆ ಕಲ್ಯಾಣಿ ಸೇರಿದಂತೆ ಇತರೆ ವ್ಯವಸ್ಥೆ ಮಾಡಲಾಗುವುದು.
ನಿಷೇಧಿತ ಪಿಒಪಿ ಗಣೇಶ ಬಳಕೆ ಮಾಡದಂತೆ ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:15 pm, Sat, 20 August 22