ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಯುವತಿಯನ್ನು ದಂಧೆಗೆ ನೂಕಿದ ಗ್ಯಾಂಗ್: ಪ್ರಿಯಕರ ಸೇರಿದಂತೆ ಮೂವರ ಬಂಧನ
ಐಷಾರಾಮಿ ಜೀವನಕ್ಕಾಗಿ ಹಾಗೂ ವಕೀಲರಿಗೆ ಹಣ ನೀಡಲು ಹಣವಿಲ್ಲದೆ ಸುಲಿಗೆಗಿಳಿದ ರೌಡಿ ಆಸಾಮಿಗಳನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.
ಬೆಂಗಳೂರು: ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ತಂದು ವೇಶ್ಯವಾಟಿಗೆ (prostitution) ದಂಧೆಗೆ ನೂಕಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮಂಜುಳ, ಬ್ರಹ್ಮೇಂದ್ರ, ಶಿವಾನಂದ ಸರ್ಕಲ್ ಬಳಿ ಇರುವ ಸಾಯಿ ಲಾಡ್ಜ್ ಮಾಲೀಕ ಸಂತೋಷ್ ಕೂಡ ಬಂಧನ ಮಾಡಲಾಗಿದೆ. ವೇಶ್ಯಾವಾಟಿಕೆ ಅಡ್ಡ ಮೇಲೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಗ್ಯಾಂಗ್ ರೇಪ್ ಮಾಡಲಾಗಿದೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಮೂದ ಯುವತಿಯನ್ನು ಪ್ರಿಯಕರನೇ ಬೆಂಗಳೂರಿಗೆ ಕರೆತಂದು ಮಂಜುಳ ಸಂಪರ್ಕಕ್ಕೆ ಬಿಟ್ಟಿದ್ದು, ಮಂಜುಳ ಯುವತಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದಾಳೆ. ದಂಧೆಗಾಗಿ ಹೊಟೇಲ್ಗೆ ಕಳುಹಿಸುತ್ತಿದ್ದ ಪಿಂಪ್ಗಳು, ಈ ವೇಳೆ ಹಲವರು ಏಕಕಾಲಕ್ಕೆ ದೌರ್ಜನ್ಯ ಎಸಗಿರುವುದಾಗಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಸ್ಮಾರ್ಟ್ ಕಾರ್ಡ್ ಹೆಸರಲ್ಲಿ ಜನರಿಗೆ ವಂಚನೆ: ಪ್ರತಿಷ್ಠಿತ ಕಂಪನಿ ವಿರುದ್ಧ ಗಂಭೀರ ಆರೋಪ
ವೇಶ್ಯಾವಾಟಿಕೆಗೆ ಬೆಂಬಲ ನೀಡಿದ ಲಾಡ್ಜ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದು, ಯುವತಿ ಹೇಳಿಕೆಯನ್ನು ಹೈಗ್ರೌಂಡ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ದಂಧೆಯಲ್ಲಿ ಹಲವು ರೌಡಿಗಳು ಭಾಗಿಯಾಗಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ಹಾಗೂ ರೌಡಿಶೀಟರ್ಗಳ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಬರುತಿದ್ದವರೆ ಇವರ ಟಾರ್ಗೆಟ್:
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಹಾಗೂ ವಕೀಲರಿಗೆ ಹಣ ನೀಡಲು ಹಣವಿಲ್ಲದೆ ಸುಲಿಗೆಗಿಳಿದ ರೌಡಿ ಆಸಾಮಿಗಳನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ಮಾರತ್ ಹಳ್ಳಿ ಹಾಗೂ ಪರಪ್ಪನ ಅಗ್ರಹಾರ ರೌಡಿ ಆಸಾಮಿಗಳು ತಮ್ಮ ಮತ್ತಿಬ್ಬರು ಸಹಚರರೊಂದಿಗೆ ಸೇರಿ ಕೃತ್ಯ ಎಸಗಿದ್ದರು. ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಬರುತಿದ್ದವರ ಟಾರ್ಗೆಟ್ ಮಾಡಿ, ಮಾರಕಾಸ್ತ್ರ ತೊರಿಸಿ ಬೆದರಿಕೆ, ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಿದ್ದು, ಬಂಧಿತರಿಂದ ಮಾರಕಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೊಬ್ಬ ಹೆಚ್ ಎ ಎಲ್ ರೌಡಿ ಆಸಾಮಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಮೂರು ವರ್ಷದ ಬಾಲಕಿ ಕಿಡ್ನ್ಯಾಪ್ಗೆ ಯತ್ನ: ಸ್ಥಳೀಯರಿಗೆ ಹೆದರಿ ಮಗು ಬಿಟ್ಟು ಪರಾರಿ
ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ
ಬಳ್ಳಾರಿ: ಕುರುಗೋಡು ತಾಲೂಕಿನ ಬಾದನಹಟ್ಟಿಯಲ್ಲಿ ಸಾಲಬಾಧೆ ತಾಳಲಾರದೆ ರೈತ ರಾಮಪ್ಪ(30) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಬ್ಯಾಂಕ್ ಸೇರಿದಂತೆ ವಿವಿಧೆಡೆ 18 ಲಕ್ಷ ರೈತ ಸಾಲ ಮಾಡಿಕೊಂಡಿದ್ದು, ಬೆಳೆ ಹಾನಿಯಾದ ಹಿನ್ನೆಲೆ ಮನನೊಂದು ವಿಷಸೇವಿಸಿ ರಾಮಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.