ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ; ಸದ್ದಿಲ್ಲದೆ ಆರೋಪಿಗಳಿಗಾಗಿ ಬಲೆ ಬೀಸಿದ ಸಿಸಿಬಿ
ಸಿಸಿಬಿ ಅಧಿಕಾರಿಗಳು ಫುಟ್ ಬಾಲ್ ಗ್ರೌಂಡ್ನಲ್ಲಿ ಬೀಡು ಬಿಟ್ಟಿದ್ದು ಪ್ರತಿ ಮ್ಯಾಚ್, ಪ್ರತಿ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಹಂತದಲ್ಲೂ ಆಗುವ ಬದಲಾವಣೆಗಳ ಬಗ್ಗೆ ನಿಗಾ ವಹಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ. ಆರೋಪಕ್ಕೆ ಸಾಕ್ಷಿ ಸಿಕ್ಕರೆ ಆಟಗಾರರಿಗೆ ಕಂಟಕ ಕಟ್ಟಿಟ್ಟ ಬುತ್ತಿ.
ಬೆಂಗಳೂರು, ಅ.26: ಭಾರತೀಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ (Football Match Fixing) ನಡೆದಿದೆ ಎಂಬ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು (CCB Afficials) ಸದ್ದಿಲ್ಲದೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಸಿಪಿ ನೇತೃತ್ವದ ವಿಶೇಷ ತಂಡ ಸೀಕ್ರೆಟ್ ಟಾಸ್ಕ್ ಆರಂಭಿಸಿದೆ. ಖುದ್ದು ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ ಅವರೇ ಟಾಸ್ಕ್ ನ ಪರಿಶೀಲನೆ ನಡೆಸುತ್ತಿದ್ದಾರೆ.
ಹೌದು ಭಾರತೀಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಖುದ್ದು ಕರ್ನಾಟಕ ಪುಟ್ಬಾಲ್ ಅಸೋಸಿಯೇಷನ್ನ ಅಧ್ಯಕ್ಷ, ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಉಪಾಧ್ಯಕ್ಷರೂ ಆಗಿರುವ ಶಾಸಕ ಎನ್.ಎ. ಹ್ಯಾರಿಸ್ (N A Haris) ಅವರು ದೂರು ನೀಡಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸದೇ ಬಂದ ದೂರಿನಾಧಾರದಡಿ ತನಿಖೆ ನಡೆಸುತ್ತಿದ್ದಾರೆ. ಸೂಪರ್ ಡಿವಿಷನ್ ಲೀಗ್ ಫುಟ್ ಬಾಲ್ ಟೂರ್ನಿಯಲ್ಲಿ ಫಿಕ್ಸಿಂಗ್ ನಡೆಯುತ್ತಿದೆ. ಕೆಲ ಆಟಗಾರರು ಸಹ ಬುಕ್ ಆಗಿದ್ದಾರೆಂಬ ಬಗ್ಗೆ ಶಾಸಕ ಹ್ಯಾರಿಸ್ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಸಿಕ್ರೆಟ್ ತನಿಖೆ ನಡೆಯುತ್ತಿದೆ. ಪ್ರಕರಣ ಸೂಕ್ಷ್ಮತೆಯನ್ನು ಗಮನಿಸಿ ನಾಜೂಕಿನಿಂದ ಹ್ಯಾಂಡಲ್ ಮಾಡಲಾಗುತ್ತಿದೆ.
ಫುಟ್ ಬಾಲ್ ಗ್ರೌಂಡ್ನಲ್ಲಿ ಬೀಡು ಬಿಟ್ಟ ಸಿಸಿಬಿ ತಂಡ
ಸಿಸಿಬಿ ಅಧಿಕಾರಿಗಳು ಫುಟ್ ಬಾಲ್ ಗ್ರೌಂಡ್ನಲ್ಲಿ ಬೀಡು ಬಿಟ್ಟಿದ್ದು ಪ್ರತಿ ಮ್ಯಾಚ್, ಪ್ರತಿ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಹಂತದಲ್ಲೂ ಆಗುವ ಬದಲಾವಣೆಗಳ ಬಗ್ಗೆ ನಿಗಾ ವಹಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ. ಆರೋಪಕ್ಕೆ ಸಾಕ್ಷಿ ಸಿಕ್ಕರೆ ಆಟಗಾರರಿಗೆ ಕಂಟಕ ಕಟ್ಟಿಟ್ಟ ಬುತ್ತಿ.
ಈಗಾಗಲೇ ಸಿಸಿಬಿಯಿಂದ ಆರು ಮ್ಯಾಚ್ಗಳ ವಿಡಿಯೋ ಪರಿಶೀಲನೆ ನಡೆದಿದೆ. ಖುದ್ದು ಡಿಸಿಪಿ ಅವರು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಆಟಗಾರರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಈಗಾಗಲೇ ಕೆಲವು ಆಟಗಾರರ ವಿಚಾರಣೆ ಕೂಡ ನಡೆದಿದೆ. ಈವರೆಗೂ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಪತ್ತೆಯಾಗಿಲ್ಲ. ಆದರೇ ಆರೋಪದ ಹಿನ್ನಲೆ ಬಲವಾದ ಅಂಶಗಳು ಇರುವ ಸಾಧ್ಯತೆ ಇದೆ. ಈ ಹಿನ್ನಲೆ ಸಿಸಿಬಿ ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ