ಎಚ್ಚರ, ಎಚ್ಚರ; ಕೊರೊನಾ ಮುಗೀತು ಅಂತ ನಿರ್ಲಕ್ಷ್ಯ ಬೇಡ, ಸಿಲಿಕಾನ್ ಸಿಟಿಯಲ್ಲಿ 3 ರೂಪಾಂತರಿ ‘AY.4.2’ ಪತ್ತೆ

ಡೆಲ್ಟಾ ರೂಪಾಂತರಿ ‘AY.4.2’ನಿಂದ ಟೆನ್ಷನ್ ಶುರುವಾಗಿದೆ. ರಾಜ್ಯದಲ್ಲಿ ರೂಪಾಂತರಿ ‘AY.4.2’ನ 7 ಪ್ರಕರಣಗಳು ಪತ್ತೆಯಾಗಿದೆ. 7 ಕೇಸ್‌ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ 3 ಪ್ರಕರಣಗಳು ಪತ್ತೆಯಾಗಿದೆ.

ಎಚ್ಚರ, ಎಚ್ಚರ; ಕೊರೊನಾ ಮುಗೀತು ಅಂತ ನಿರ್ಲಕ್ಷ್ಯ ಬೇಡ, ಸಿಲಿಕಾನ್ ಸಿಟಿಯಲ್ಲಿ 3 ರೂಪಾಂತರಿ ‘AY.4.2’ ಪತ್ತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Oct 26, 2021 | 8:23 AM

ಬೆಂಗಳೂರು: ಇನ್ನೇನು ಕೊರೊನಾ ಕಡಿಮೆಯಾಗಿ ಮೊದಲಿನಂತೆ ಜೀವನ ಸಾಗುತ್ತಿರುವ ನಡುವೆ ಈಗ ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಾಗುವ ಆತಂಕ ಎದುರಾಗಿದೆ. ಕರ್ನಾಟಕದಲ್ಲಿ ರೂಪಾಂತರಿ ‘AY.4.2’ ಪತ್ತೆಯಾಗಿದೆ. ಈ ರೂಪಾಂತರಿ ‘AY.4.2’ ಡೆಲ್ಟಾಗಿಂತ ವೇಗವಾಗಿ ಹರಡುತ್ತೆ. ಹೀಗಾಗಿ ಕೊರೊನಾ ಕಾಲ ಮುಗಿತು ಅಂತ ಅರಾಮಾಗಿದ್ದ ಜನ ಕೊರೊನಾ ರೂಲ್ಸ್ ಉಲ್ಲಂಘಿಸುತ್ತ ಬೇಕಾಬಿಟ್ಟಿಯಾಗಿ ನಿರ್ಲಕ್ಷ್ಯ ಮಾಡುವಂತಿಲ್ಲ.

ಡೆಲ್ಟಾ ರೂಪಾಂತರಿ ‘AY.4.2’ನಿಂದ ಟೆನ್ಷನ್ ಶುರುವಾಗಿದೆ. ರಾಜ್ಯದಲ್ಲಿ ರೂಪಾಂತರಿ ‘AY.4.2’ನ 7 ಪ್ರಕರಣಗಳು ಪತ್ತೆಯಾಗಿದೆ. 7 ಕೇಸ್‌ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ 3 ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ 3ನೇ ಅಲೆ ಬರುವ ಸಾಧ್ಯತೆ ಇದೆ ಎಂದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ಅಬ್ಬರಿಸಿತ್ತು. ಈಗ ‘AY.4.2’ನಿಂದ 3ನೇ ಅಲೆ ಬರುವ ಆತಂಕ ಶುರುವಾಗಿದೆ. ಆದರೆ ‘AY.4.2’ನಿಂದ ರಾಜ್ಯದಲ್ಲಿ ಯಾರೂ ಮೃತಪಟ್ಟಿಲ್ಲ. ರೂಪಾಂತರಿ ‘AY.4.2’ ಸೋಂಕಿತರು ಆರೋಗ್ಯವಾಗಿದ್ದಾರೆ ಎಂದು ಟಿವಿ9ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ಬ್ರಿಟನ್, ಯೂರೋಪ್, ರಷ್ಯಾ, ಅಮೆರಿಕದಲ್ಲಿ ‘AY.4.2’ ರೂಪಾಂತರಿಯಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅಲರ್ಟ್ ಆಗಿದ್ದಾರೆ. ರಷ್ಯಾದಲ್ಲಿ 37 ಸಾವಿರಕ್ಕೂ ಹೆಚ್ಚು ‘AY.4.2’ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ನವೆಂಬರ್ 7ರವರೆಗೆ ಕಚೇರಿಗಳಿಗೆ ತೆರಳದಂತೆ ಸೂಚನೆ ನವೆಂಬರ್ 7ರ ತನಕ ಕೆಲಸಕ್ಕೆ ಹೋಗದಂತೆ ಆದೇಶ ಹೊರಡಿಸಲಾಗಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಬಸ್ ಸಂಚಾರವಿಲ್ಲ, ಜಿಮ್‌ಗಳು ಕ್ಲೋಸ್ ಮಾಡಲಾಗಿದೆ. 11 ದಿನ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

ಇನ್ನು ಚೀನಾದ 11 ಕಡೆ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ 35,000 ಜನರಿಗೆ ಮನೆಯಿಂದ ಹೊರ ಬರದಂತೆ ವಾರ್ನ್ ಮಾಡಲಾಗಿದೆ. ಮನೆಯಿಂದ ಹೊರಗೆ ಬಂದರೆ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ. ಚೀನಾದಲ್ಲಿಯೂ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕೊರೊನಾದ ಹೊಸ ರೂಪಾಂತರಿಯೊಂದೇ 3ನೇ ಅಲೆ ಹುಟ್ಟುಹಾಕಲು ಸಾಧ್ಯವಿಲ್ಲ: ಎನ್​ಸಿಡಿಸಿ ನಿರ್ದೇಶಕ ಸುಜೀತ್ ಸಿಂಗ್

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!