ಸರ್ಕಾರದಿಂದ ಚರ್ಚ್ ಮೇಲೆ ಗೂಢಚಾರಿಕೆ ಆರೋಪ; ಪೊಲೀಸರಿಗೆ ಮಾಹಿತಿ ನೀಡದಂತೆ ಕ್ರೈಸ್ತ ಮಹಾಧರ್ಮಾಧ್ಯಕ್ಷ ಸೂಚನೆ
ಕ್ರೈಸ್ತ ಧರ್ಮದಿಂದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದಡಿ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬಾರದು ಎಂದು ಟಿವಿ9 ಡಿಜಿಟಲ್ಗೆ ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮಂತಾರಗೊಳಿಸಲಾಗುತ್ತಿದೆ ಎಂಬ ಆರೋಪ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿರುವುದರಿಂದ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಸರ್ಕಾರ ಮತಾಂತರ ತಡೆಗಟ್ಟಲು ಕರ್ನಾಟಕದ ಚರ್ಚ್ಗಳ ಮೇಲೆ ಗೂಢಚಾರಿಕೆ ನಡೆಸುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಚರ್ಚ್ಗೆ ಭೇಟಿ ನೀಡಲಿದ್ದು, ಗಣತಿ, ಗೂಢಚಾರಿಕೆ ನಡೆಸುತ್ತಿದೆ ಎಂದು ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಆರೋಪ ಮಾಡಿದ್ದಾರೆ.
ಕ್ರೈಸ್ತ ಧರ್ಮದಿಂದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದಡಿ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬಾರದು ಎಂದು ಟಿವಿ9 ಡಿಜಿಟಲ್ಗೆ ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಹೇಳಿಕೆ ನೀಡಿದ್ದಾರೆ.
ಮತಾಂತರ ಮಾಡಲಾಗುತ್ತಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಯಾರೋ ಶಿಲುಬೆ ಹಾಕಿಕೊಂಡ ಮಾತ್ರಕ್ಕೆ, ಕ್ರೈಸ್ತ ದೇವಾಲಯಕ್ಕೆ ಬಂದ ಮಾತ್ರಕ್ಕೆ ಅದನ್ನು ಮತಾಂತರ ಎನ್ನಬಾರದು. ಸರ್ಕಾರ ಚರ್ಚ್ಗಳಿಗೆ ಪೊಲೀಸ್ರನ್ನು ಕಳುಹಿಸಿ ಮಾಹಿತಿ ಪಡೆಯುತ್ತಿದೆ. ಕ್ರೈಸ್ತ ಸಮುದಾಯದ ಗಣತಿ ಮಾಡಲಾಗುತ್ತಿದೆ. ಇದು ತಪ್ಪು. ಕ್ರೈಸ್ತ ಧರ್ಮವನ್ನೇ ಟಾರ್ಗೆಟ್ ಮಾಡೋದು ತಪ್ಪು ಎಂದು ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ವಿರೋಧ ವ್ಯಕ್ತಪಡಿಸಿದ್ದಾರೆ.
ಯಾವುದೇ ಲಿಖಿತ ಮಾಹಿತಿ ಇಲ್ಲದೆ ಪೊಲೀಸರಿಗೆ ಮಾಹಿತಿ ನೀಡದಂತೆ ರಾಜ್ಯದ ಚರ್ಚ್ಗಳಿಗೆ ಮಾಹಿತಿ ನೀಡಲಾಗಿದೆ. ಸರ್ಕಾರ ಮತಾಂತರ ನಿಷೇಧ ಕಾಯ್ದೆ ಯಾಕೆ ತರಬೇಕು? ಈ ಬಗ್ಗೆ ವಿಶ್ವ ಕ್ರೈಸ್ತ ಧರ್ಮದ ಪೋಪ್ ಅವರಿಗೂ ಮಾಹಿತಿ ಹೋಗಿದೆ. ನವೆಂಬರ್ನಲ್ಲಿ ಮೋದಿ ಇಟಲಿಗೆ ಭೇಟಿ ನೀಡುತ್ತಿದ್ದು ಪೋಪ್ ಅವರನ್ನು ಭೇಟಿ ಆಗಲಿದ್ದಾರೆ. ಆಗ ಈ ವಿಚಾರ ಹೊರ ಬರಲಿದೆ ಎಂದು ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ: ವೃದ್ಧೆ ನಾಪತ್ತೆ; ತಾಯಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಪುತ್ರನಿಂದ ದೂರು
ಕೊಡಗು: ಮತಾಂತರಕ್ಕೆ ಯತ್ನಿಸಿದ್ದ ಆರೋಪದಲ್ಲಿ ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ ಪೊಲೀಸರ ವಶಕ್ಕೆ
Published On - 7:29 am, Tue, 26 October 21