ಕೊಡಗು: ಮತಾಂತರಕ್ಕೆ ಯತ್ನಿಸಿದ್ದ ಆರೋಪದಲ್ಲಿ ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ ಪೊಲೀಸರ ವಶಕ್ಕೆ

ಕೊಡಗು: ಮತಾಂತರಕ್ಕೆ ಯತ್ನಿಸಿದ್ದ ಆರೋಪದಲ್ಲಿ ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ ಪೊಲೀಸರ ವಶಕ್ಕೆ
ಪ್ರಾತಿನಿಧಿಕ ಚಿತ್ರ

Kodagu News: ಮುತ್ತಮ್ಮ ಮತಾಂತರಕ್ಕೆ ಯತ್ನಿಸಿದ ಆರೋಪ ನಿರಾಕರಿಸಿದ್ದಾರೆ. 2014ರಲ್ಲಿ ದಿಡ್ಡಳ್ಳಿ ಗಿರಿಜನರ ವಸತಿ ಹೋರಾಟದಲ್ಲಿ ಮುತ್ತಮ್ಮ ಪಾಲ್ಗೊಂಡಿದ್ದರು. ಮುತ್ತಮ್ಮ ಗಿರಿಜನರಿಗಾಗಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು.

TV9kannada Web Team

| Edited By: ganapathi bhat

Oct 18, 2021 | 10:09 PM

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊನ್ನಂಪೇಟೆ ತಾಲೂಕಿನ ಮತ್ತೂರು ಗಿರಿಜನ ಹಾಡಿಯಲ್ಲಿ ಪೊಲೀಸರು ಮುತ್ತಮ್ಮಳನ್ನು ವಶಕ್ಕೆ ಪಡೆದಿದ್ದಾರೆ. ಮುತ್ತಮ್ಮಗೆ ಹಿಂದೂಪರ ಕಾರ್ಯಕರ್ತರಿಂದ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಆದರೆ, ಮುತ್ತಮ್ಮ ಮತಾಂತರಕ್ಕೆ ಯತ್ನಿಸಿದ ಆರೋಪ ನಿರಾಕರಿಸಿದ್ದಾರೆ. 2014ರಲ್ಲಿ ದಿಡ್ಡಳ್ಳಿ ಗಿರಿಜನರ ವಸತಿ ಹೋರಾಟದಲ್ಲಿ ಮುತ್ತಮ್ಮ ಪಾಲ್ಗೊಂಡಿದ್ದರು. ಮುತ್ತಮ್ಮ ಗಿರಿಜನರಿಗಾಗಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು.

ಮತಾಂತರ ಹಾಗೂ ಮತಾಂತರ ತಡೆ ವಿಚಾರ ಇತ್ತೀಚೆಗೆ ಸದ್ದುಮಾಡುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಮತಾಂತರ ವಿರುದ್ಧ ಹಿಂದೂ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಮತ್ತೊಂದೆಡೆ, ಸರ್ಕಾರ ಕೂಡ ಮತಾಂತರ ತಡೆಗೆ ಸೂಕ್ತ ಕಾನೂನು ತರುವ ಇಚ್ಛೆ ವ್ಯಕ್ತಪಡಿಸಿದೆ. ರಾಜಕಾರಣಿಗಳು ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕ್ರೈಸ್ತ ಮಿಷನರಿಗಳ ಗಣತಿ ನಡೆಸುವ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗಿದೆ.

ಹುಬ್ಬಳ್ಳಿಯ ಚರ್ಚ್​ನಲ್ಲಿ ಮತಾಂತರ ಆರೋಪ; ಶಾಸಕ ಅರವಿಂದ್ ಬೆಲ್ಲದ್, ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ಹುಬ್ಬಳ್ಳಿಯ ಚರ್ಚ್‌ ಒಂದರಲ್ಲಿ ಮತಾಂತರ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ನವನಗರ ಪೊಲೀಸ್ ಠಾಣೆಗೆ ಅರವಿಂದ ಬೆಲ್ಲದ್​ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಕ್ಟೋಬರ್ 17ರಂದು ಮುತ್ತಿಗೆ ಹಾಕಿದ್ದರು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಹಿಂದೂ ಪರ ಸಂಘಟನೆ ಕಾರ್ಯಕರ್ತರ ಜತೆ ಮುತ್ತಿಗೆ ಹಾಕಿದ್ದರು. ಪೊಲೀಸ್ ಠಾಣೆ ಎದುರು ಡಿಜೆ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು. ಠಾಣೆಯಲ್ಲಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್​ ಜತೆ ಶಾಸಕ ಬೆಲ್ಲದ್​ ಮಾತುಕತೆ ನಡೆಸಿದ್ದರು.

ಮತಾಂತರಕ್ಕೆ ಮುಂದಾಗಿದ್ದ ಪಾಸ್ಟರ್​ ಬಂಧನಕ್ಕೆ ಬಿಗಿಪಟ್ಟು ಹಿಡಿಯಲಾಗಿತ್ತು. ಕಮಿಷನರ್​ ಎದುರು ಅರವಿಂದ ಬೆಲ್ಲದ್​ ಒತ್ತಾಯಿಸಿದ್ದರು. ಹುಬ್ಬಳ್ಳಿಯ ಭೈರದೇವರಕೊಪ್ಪ ಚರ್ಚ್‌ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್‌ ಪಾಸ್ಟರ್ ಸೋಮು ವಿರುದ್ಧ ಮತಾಂತರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಪಾಸ್ಟರ್ ಸೋಮು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿತ್ತು.

ಹುಬ್ಬಳ್ಳಿಯ ನವನಗರದ ಚರ್ಚ್​​ನಲ್ಲಿ ಮತಾಂತರ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಚರ್ಚ್ ಒಳಗಡೆ ಹಿಂದೂಪರ ಸಂಘಟನೆಗಳು ರಾಮಜಪ ನಡೆಸಿದ್ದರು. ಮತಾಂತರ ಮಾಡುವವರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸಿದ್ದರು. ರಸ್ತೆಯಲ್ಲಿ ಪ್ರತಿಭಟನೆಯಿಂದಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಪ್ರತಿಭಟನೆಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸಾಥ್​ ನೀಡಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: ಬಲವಂತದ, ಆಮಿಷದ ಮತಾಂತರ ಆಗುತ್ತಿಲ್ಲ; ಕ್ರೈಸ್ತ ಮಿಷನರಿಗಳ ಗಣತಿಯನ್ನು ಕೈಬಿಡಬೇಕು: ಆರ್ಚ್ ಬಿಷಪ್ ಪೀಟರ್ ಮಚಾದೋ

ಇದನ್ನೂ ಓದಿ: ಹುಬ್ಬಳ್ಳಿ: ಚರ್ಚ್​ನಲ್ಲಿ ಮತಾಂತರ ಆರೋಪ; ಆರೋಪಿಯನ್ನು ಬಂಧಿಸುವಂತೆ ಅರವಿಂದ್ ಬೆಲ್ಲದ್, ಹಿಂದೂ ಪರ ಸಂಘಟನೆ ಪ್ರತಿಭಟನೆ

Follow us on

Related Stories

Most Read Stories

Click on your DTH Provider to Add TV9 Kannada