ಒಂದೇ ಕುಟುಂಬದ ನಾಲ್ವರು ನೀರುಪಾಲು, ಆಂಧ್ರದಲ್ಲಿ ಹೋಯ್ತು ಬೆಂಗಳೂರಿಗರ ಪ್ರಾಣ

ಅವರು ಪಕ್ಕದ ರಾಜ್ಯದ ಸಂಬಂಧಿಕರ ಮನೆಗೆ ಹೋಗಿದ್ರು. ಅಲ್ಲಿ ಫ್ಯಾಮೀಲಿಯ ಎಲ್ಲರು ಒಟ್ಟಿಗೆ ಸೇರಿ ಫಿಕ್ನಿಕ್‌ಗೆ ಹೋದ್ರು. ಆಡುತ್ತಾ ಕುಣಿಯುತ್ತಾ ಮಸ್ತ್ ಮಾಜಾ ಮಾಡಿದ್ರು.. ಈ ವೇಳೆ ಅಲ್ಲಿ ಹೊಂಚಿ ಹಾಕಿ ಕುಳಿತಿದ್ದ ವಿಧಿ ಒಂದೇ ಕುಟುಂಬದ ನಾಲ್ವರ ಪ್ರಾಣವನ್ನ ತೆಗೆದಿದೆ.

ಒಂದೇ ಕುಟುಂಬದ ನಾಲ್ವರು ನೀರುಪಾಲು, ಆಂಧ್ರದಲ್ಲಿ ಹೋಯ್ತು ಬೆಂಗಳೂರಿಗರ ಪ್ರಾಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 08, 2021 | 8:01 AM

ಬೆಂಗಳೂರು: ಈ ಸಾವು ಹೇಗ್ ಬರುತ್ತೆ. ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಖುಷಿಯ ಅಲೆಯಲ್ಲಿ ತೇಲುತ್ತಿದ್ದ ವೇಳೆ ಬಂದು ಅಪ್ಪಳಿಸಿ ಎಲ್ಲಾ ಸಂತೋಷವನ್ನೂ ಕಿತ್ತುಕೊಳ್ಳುತ್ತೆ. ಸುಂದರ ಜೀವವನ್ನೇ ಕೊಳ್ಳಿ ಇಡುತ್ತೆ. ಬದುಕಿದ್ದವರು ಜೀವನ ಪೂರ್ತಿ ನರಳುವಂತೆ ಮಾಡುತ್ತೆ. ಇಲ್ಲೂ ಹಾಗೇ ವಿಧಿಯಾಟಕ್ಕೆ ಒಂದೇ ಕುಂಟುಬದ ನಾಲ್ವರು ಸಾವಿನ ಮನೆ ಸೇರಿದ್ದಾರೆ.

ವಿಧಿಯಾಟಕ್ಕೆ ಒಂದೇ ಕುಟುಂಬದ ನಾಲ್ವರ ಪ್ರಾಣ ಹೋಗಿದೆ. ಆಂಧ್ರಪ್ರದೇಶದಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಅಂದಹಾಗೇ ಬೆಂಗಳೂರಿನ ಕುಟುಂಬವೊಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ವೆಲಿಗಲ್ಲು‌ ಪ್ರಾಜೆಕ್ಟ್ ಪ್ರದೇಶಕ್ಕೆ‌ ಪಿಕ್ನಿಕ್‌ಗೆ ಹೋಗಿದ್ದರು. ಇಲ್ಲಿ ಹಿನ್ನೀರಿನಲ್ಲಿ ಇಡೀ ಕುಟುಂಬ ಆಟವಾಡುತ್ತಿತ್ತು. ನೀರಿನಲ್ಲಿ ಆಟವಾಡುತ್ತಿದ್ದ ನಾಲ್ವರು ನೋಡ ನೋಡುತ್ತಿದ್ದಂತೆ ಕುಟುಂಬಸ್ಥರ ಕಣ್ಮುಂದೆಯೇ ನೀರು ಪಾಲಾಗಿದ್ದಾರೆ. ಬೆಂಗಳೂರು ಮೂಲದ ತಾಜ್ ಮೊಹಮ್ಮದ್‌, ಮೊಹಮ್ಮದ್‌, ಉಸ್ಮಾನ್ ಖಾನಂ, ಮೊಹಮ್ಮದ್ ಹಫೀಜ್‌ ಮೃತ ವ್ಯಕ್ತಿಗಳು.

ಮೃತರೆಲ್ಲರೂ ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ನಿವಾಸಿಗಳಾಗಿದ್ದು, ಒಟ್ಟು 12 ಜನರು ಆಂಧ್ರಪ್ರದೇಶದ ಸಂಬಂಧಿಕರ ಮನೆಗೆ ಹೋಗಿದ್ರು. ನಿನ್ನೆ ಮಧ್ಯಾಹ್ನದ ನಂತರ ಚಿತ್ತೂರಿನ ಸಂಬಂಧಿಕರ ಮನೆಯಿಂದ ಮಕ್ಕಳೊಂದಿಗೆ ಡ್ಯಾಮ್ ವೀಕ್ಷಿಸಲು ವೆಲಿಗಲ್ಲಿಗೆ ತೆರಳಿದ್ದರು. ಸಂಜೆ 4.30ರ ಸುಮಾರಿಗೆ ಹಿನ್ನೀರಿನಲ್ಲಿ ಆಟವಾಡುವಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಲಕ್ಕಿರೆಡ್ಡಿಪಾಳ್ಯ ಪೊಲೀಸರು ಭೇಟಿ ನೀಡಿ, ಸತತ 1 ಗಂಟೆ ಪರಿಶೀಲನೆ ಬಳಿಕ ಮೃತದೇಹಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ್ರು.

ಮೃತದೇಹಗಳನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯವರನ್ನ ಕಳೆದುಕೊಂಡು ಇಡೀ ಕುಟುಂಬ ಅನಾಥರಾಗಿದೆ. ಒಟ್ನಲ್ಲಿ ಕ್ರೂರಿ ವಿಧಿ ಖುಷಿಯಲ್ಲಿದ್ದ ನಾಲ್ವರ ಪ್ರಾಣ ಕಿತ್ತುಕೊಳ್ಳುವುದರ ಜೊತೆ, ಇಡೀ ಕುಟುಂಬದ ನೆಮ್ಮದಿಯನ್ನೇ ಹಾಳು ಮಾಡಿದೆ.

ಇದನ್ನೂ ಓದಿ: ಕುರುಡುಮಲೆ ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯ; ಮೂರು ಯುಗದ ಇತಿಹಾಸ ಹೇಳುವ ಈ ಸ್ಥಳದಲ್ಲಿದೆ ಒಂದು ವಿಶಿಷ್ಟ ನಂಬಿಕೆ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ