ಕುರುಡುಮಲೆ ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯ; ಮೂರು ಯುಗದ ಇತಿಹಾಸ ಹೇಳುವ ಈ ಸ್ಥಳದಲ್ಲಿದೆ ಒಂದು ವಿಶಿಷ್ಟ ನಂಬಿಕೆ

Kolar: ಅಂದು ಆ ಸಿಂಗೀರಮ್ಮ ಚಿತೆಗೆಹಾರಿದ ಸ್ಥಳದಲ್ಲಿ ಇಂದಿಗೂ ನಾವು ಕೆಲವೊಂದು ಶಾಸನಗಳನ್ನು ಕಾಣಬಹುದು ಅಲ್ಲದೆ ಅಲ್ಲಿ ಗ್ರಾಮದವರು ನಿರ್ಮಿಸಿರುವ ಬೃಂದಾವನ ಕೂಡಾ ಇಂದಿಗೂ ಇದೆ.

ಕುರುಡುಮಲೆ ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯ; ಮೂರು ಯುಗದ ಇತಿಹಾಸ ಹೇಳುವ ಈ ಸ್ಥಳದಲ್ಲಿದೆ ಒಂದು ವಿಶಿಷ್ಟ ನಂಬಿಕೆ
ಸಿಂಗೀರಮ್ಮ ಚಿತೆಗೆ ಹಾರಿದ ಸ್ಥಳದಲ್ಲಿನ ಶಾಸನಗಳು
Follow us
TV9 Web
| Updated By: preethi shettigar

Updated on:Aug 08, 2021 | 9:09 AM

ಕೋಲಾರ: ಪುರಾತನ ಕಾಲದಿಂದಲೂ ಕೆಲವೊಂದು ನಂಬಿಕೆ, ಆಚರಣೆ, ಸಂಪ್ರದಾಯ ನಮ್ಮನ್ನು ಸುತ್ತಿಕೊಂಡಿದೆ. ಆ ನಂಬಿಕೆಗಳು ಆಧುನಿಕ ಕಾಲದಲ್ಲೂ ನಮ್ಮೊಂದಿಗೆ ಇದೆ. ಇದಕ್ಕೆ ಸಾಕ್ಷಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುರುಡುಮಲೆ ಗ್ರಾಮ. ಈ ಗ್ರಾಮಕ್ಕೆ ಮಹಿಳೆಯೊಬ್ಬರು ಕೊಟ್ಟ ಶಾಪದಿಂದಾಗಿ ಆ ಪ್ರದೇಶದಲ್ಲಿ ಇಂದಿಗೂ ನೂರಾರು ಚಿನ್ನದ ನಾಣ್ಯಗಳು ಸಿಗುತ್ತವೆ. ಆ ಮೂಲಕ ಸಾವಿರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಒಂದು ವಿಸ್ಮಯಕಾರಿ ಘಟನೆ ಇಂದಿಗೂ ತನ್ನ ಜೀವಂತಿಕೆಯನ್ನು ಸಾಬೀತುಪಡಿಸುತ್ತಿದೆ. ಅಲ್ಲದೆ ಸಿಂಗೀರಮ್ಮ ಎಂಬ ಮಹಿಳೆಯ ಶಾಪ ಈ ಭಾಗದ ಜನರಲ್ಲಿ ಇಂದಿಗೂ ಆತಂಕವನ್ನು ಸೃಷ್ಟಿ ಮಾಡುತ್ತಲೇ ಇದೆ.

ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯಗಳು! ಕುರುಡುಮಲೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ. ಅದರಲ್ಲೂ ಪ್ರಮುಖವಾಗಿ ಮೂರು ಯುಗದ ಇತಿಹಾಸ ಹೇಳುವ ಪ್ರಸಿದ್ಧ ಏಕಶಿಲ ಸಾಲಿಗ್ರಾಮ ಶಿಲೆಯ ಗಣಪತಿ ನೆಲೆಸಿರುವ ಸ್ಥಳ. ಈ ಸ್ಥಳದಲ್ಲಿ ಇಂದಿಗೂ ಒಂದು ಚಮತ್ಕಾರ ನಡೆಯುತ್ತಿದೆ. ಅದು ಗ್ರಾಮದಲ್ಲಿ ಆಗಾಗ ಚಿನ್ನದ ನಾಣ್ಯಗಳು ಸಿಗುತ್ತವೆ ಎನ್ನುವುದೇ ಆಗಿದೆ. ಇದು ಕೇಳುಗರಿಗೆ ಆಶ್ಚರ್ಯ ಎನಿಸಿದರೂ ನಿಜ. ಇಂದಿಗೂ ಗ್ರಾಮಲ್ಲಿ ಮಳೆಯಾದರೆ ಅಥವಾ ರೈತರು ಹೊಲದಲ್ಲಿ ಉಳುಮೆ ಮಾಡುವಾಗ ಒಂದು ಗ್ರಾಂ ತೂಕವುಳ್ಳ ಸಿಂಗೀರಮ್ಮನ ಕಾಸು ಅಥವಾ ಚಿನ್ನದ ನಾಣ್ಯಗಳು ಸಿಗುತ್ತವೆ. ಶ್ವಾನ ಹಾಗೂ ತ್ರಿಶೂಲದ ಮುದ್ರೆ ಇರುವ ನಾಣ್ಯಗಳನ್ನು ಈ ಗ್ರಾಮದಲ್ಲಿ ಸಿಂಗೀರಮ್ಮನ ಕಾಸು ಎಂದು ಕರೆಯುತ್ತಾರೆ.

ಯಾರು ಈ ಸಿಂಗೀರಮ್ಮ? ಸಾವಿರಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ನವಕೋಟಿ ನಾರಾಯಣ ಎನ್ನುವ ಒಬ್ಬ ಧನಿಕನಿದ್ದನಂತೆ, ಆತನ ಪತ್ನಿಯೇ ಸಿಂಗೀರಮ್ಮ. ನವಕೋಟಿನಾರಾಯಣಶೆಟ್ಟಿ ಗ್ರಾಮದ ಜನರಿಗೆ, ಕಷ್ಟದಲ್ಲಿರುವವರಿಗೆ, ಹಣವನ್ನು ಸಾಲವಾಗಿ ನೀಡುತ್ತಿದ್ದನಂತೆ. ಹೀಗೆ ಹತ್ತಾರು ವರ್ಷ ನಡೆದುಕೊಂಡು ಬರುತ್ತಿರುವಾಗ, ಒಮ್ಮೆ ಗ್ರಾಮದ ಕೆಲವರು ಆ ಧನಿಕನಿಂದ ಹಣ ಪಡೆದು ವಾಪಸ್ಸು ಕೊಡದೆ, ಆ ಧನಿಕ ನವಕೋಟಿನಾರಾಯಣಶೆಟ್ಟಿಯನ್ನು ಕೊಂದು ಊರ ಹೊರಗಿನ ಬೆಟ್ಟದಲ್ಲಿರುವ ಬಾವಿಯಲ್ಲಿ ಹಾಕಿದರಂತೆ. ತನ್ನ ಪತಿ ಮನೆಗೆ ಬಾರದ್ದನ್ನು ಕಂಡ ಪತ್ನಿ ಸಿಂಗೀರಮ್ಮ ತನ್ನ ಪತಿಗಾಗಿ ಹುಡುಕಾಟ ನಡೆಸುತ್ತಾಳೆ. ಈ ವೇಳೆ ಅವರು ಸಾಕಿದ್ದ ನಾಯಿ ನವಕೋಟಿನಾರಾಯಣಶೆಟ್ಟಿಯನ್ನು ಕೊಂದು ಹಾಕಿರುವ ಜಾಗವನ್ನು ಸಿಂಗೀರಮ್ಮಳಿಗೆ ತೋರಿಸುತ್ತದಂತೆ. ಆಗ ಸಿಂಗೀರಮ್ಮ ಗ್ರಾಮದಲ್ಲಿ ಕಣ್ಣೀರಿಡುತ್ತಾ ಯಾರು ತನ್ನ ಪತಿಯನ್ನು ಕೊಂದುಹಾಕಿದ್ದು ಎಂದು ಕೇಳುತ್ತಾ ಊರಿನಲ್ಲಿ ಓಡಾಡುತ್ತಾಳೆ. ಆದರೆ ಯಾರು ಮಾಹಿತಿ ನೀಡುವುದಿಲ್ಲ. ಹೀಗಿರುವಾಗಲೇ ಗ್ರಾಮದ ಸೊಸೆಯಂದಿರು ಗ್ರಾಮದವರೇ ನವಕೋಟಿನಾರಾಯಣಶೆಟ್ಟಿಯನ್ನು ಕೊಂದುಹಾಕಿದ್ದಾರೆಂಬ ಮಾಹಿತಿಯನ್ನು ಸಿಂಗೀರಮ್ಮನಿಗೆ ನೀಡುತ್ತಾರೆ. ಇದರಿಂದ ಕುಪಿತಗೊಂಡ ಸಿಂಗೀರಮ್ಮ ತಮ್ಮ ಬಳಿ ಇದ್ದ ಕೋಟ್ಯಾಂತರ ಚಿನ್ನದ ನಾಣ್ಯಗಳನ್ನು ಗ್ರಾಮದ ಹೊರಗಿನ ಬೆಟ್ಟದಿಂದ ಕೈವಾರದ ವರೆಗೆ ಚೆಲ್ಲಾಡಿ.  ಈ ವೇಳೆ ಗ್ರಾಮದ ಹೆಣ್ಣುಮಕ್ಕಳಿಗೆ ತನ್ನಂತೆ ಕಷ್ಟಬರಲಿ ಎಂದು ಶಾಪಕೊಟ್ಟಳಂತೆ. ನಂತರ ತನ್ನ ಪತಿಯೊಂದಿಗೆ ಚಿತೆಗೆ ಹಾರಿ ಪ್ರಾಣ ತ್ಯಾಗ ಮಾಡಿದಳಂತೆ.

gold coin

ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯಗಳು

ಸಿಂಗೀರಮ್ಮ ಶಾಪ ವಿಮೋಚನೆಗೆ ಗ್ರಾಮಸ್ಥರ ಪ್ರಯತ್ನ ಅಂದು ಆ ಸಿಂಗೀರಮ್ಮ ಚಿತೆಗೆಹಾರಿದ ಸ್ಥಳದಲ್ಲಿ ಇಂದಿಗೂ ನಾವು ಕೆಲವೊಂದು ಶಾಸನಗಳನ್ನು ಕಾಣಬಹುದು ಅಲ್ಲದೆ ಅಲ್ಲಿ ಗ್ರಾಮದವರು ನಿರ್ಮಿಸಿರುವ ಬೃಂದಾವನ ಕೂಡಾ ಇಂದಿಗೂ ಇದೆ. ಅಂದು ಸಿಂಗೀರಮ್ಮ ಗ್ರಾಮದವರಿಗೆ ನೀಡಿದ ಶಾಪ ವಿಮೋಚನೆಗಾಗಿ ಇಂದಿಗೂ ಗ್ರಾಮದ ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು ಸಿಂಗೀರಮ್ಮನ ಸಮಾಧಿಬಳಿ ಶ್ರೀರಾಮನವಮಿಯಂದು ಸೀರೆ, ಅರಿಶಿಣ ಕುಂಕುಮವಿಟ್ಟು ಪೂಜೆ ಮಾಡಿ, ಸಿಂಗೀರಮ್ಮನ ಹೆಸರಲ್ಲಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಾ, ತಮ್ಮ ಪಾಪ ಪರಿಹಾರಮಾಡೆಂದು ಪ್ರಾರ್ಥಿಸುತ್ತಾರೆ.

ಈಗಲೂ ಸಿಗುತ್ತೆ ಚಿನ್ನದ ನಾಣ್ಯಗಳು ಇನ್ನು ಈ ಎಲ್ಲಾ ಚಮತ್ಕಾರಗಳಿಗೂ ಪೂರಕ ಎಂಬಂತೆ ವಿಚಿತ್ರ ವಿಸ್ಮಯವೊಂದು ನಡೆಯುತ್ತದೆ. ಅದೇನೆಂದರೆ ಇಂದಿಗೂ ಗ್ರಾಮದ ಸುತ್ತಲೂ ಆಗಾಗ ಸಿಗುವ ಚಿನ್ನದ ನಾಣ್ಯಗಳು. ಗ್ರಾಮದ ಜನರೂ ಕೂಡಾ ಸಿಂಗೀರಮ್ಮನ ಕಾಸು ಸಿಕ್ಕರೆ ಅದೊಂದು ಅದೃಷ್ಟ ಎಂದು ಭಾವಿಸುತ್ತಾರೆ. ಕೆಲವರು ಸಿಕ್ಕ ಚಿನ್ನದ ನಾಣ್ಯವನ್ನು ಭಕ್ತಿಯಿಂದ ತಮ್ಮ ಬಳಿ ಇರಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಮಾಂಗಲ್ಯದ ಸರದಲ್ಲಿ ಹಾಕಿ ಕೊಂಡರೆ ಮತ್ತೆ ಕೆಲವರು ಮೂಗುತಿಯಾಗಿ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಮನೆಗಳಲ್ಲಿಟ್ಟು ಪೂಜೆ ಮಾಡುತ್ತಾರೆ. ಕಾರಣ ಸಿಂಗೀರಮ್ಮನ ಕಾಸು ಸಿಕ್ಕವರಿಗಂತೂ, ಕಾಸು ಸಿಕ್ಕಮೇಲೆ ತಮ್ಮ ಕಷ್ಟ ಕಾರ್ಪಣ್ಯಗಳು ತೀರಿ, ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ಅದರಿಂದ ಒಳಿತನ್ನು ಕಂಡವರು ಗ್ರಾಮದಲ್ಲಿ ಹತ್ತಾರು ಜನರು ಸಿಗುತ್ತಾರೆ.

ಇನ್ನು ಕೆಲವರು ಈ ನಾಣ್ಯವನ್ನು ಹಣದಾಸೆಗೆ ಮಾರಿಕೊಂಡು ಸಂಕಷ್ಟಕ್ಕೀಡಾಗಿರುವ ಉದಾಹರಣೆಗಳು ಇಲ್ಲಿ ಸಿಗುತ್ತವೆ. ಒಟ್ಟಾರೆ ನೂರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ದುರ್ಘಟನೆ ಇಂದಿಗೂ ಈ ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಇದು ನೋಡುಗರಿಗೆ ಒಂದು ಕಟ್ಟು ಕಥೆ ಎನಿಸಿದರು, ಈ ಗ್ರಾಮದ ಜನರಿಗೆ ಇದು ಒಂದು ನಂಬಿಕೆ, ಆಚರಣೆಯಾಗಿದೆ ಎನ್ನುವುದು ಮಾತ್ರ ನಿಜ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ: ಮೊಘಲ್ ಚಕ್ರವರ್ತಿ ಕಮ್ ಬಕ್ಷ್ ಕಾಲದ 10.9 ಗ್ರಾಂ ಚಿನ್ನದ ನಾಣ್ಯ ಹರಾಜಿಗೆ; ಮೂಲ ಬೆಲೆ 45ರಿಂದ 50 ಲಕ್ಷ!

ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿಕೆಯಲ್ಲಿತ್ತು ಗತಕಾಲದ ನೂರಾರು ಚಿನ್ನದ ನಾಣ್ಯಗಳು

Published On - 7:49 am, Sun, 8 August 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?